Ramayana Movie: ವಿಶ್ವಾದ್ಯಂತ ಭರ್ಜರಿಯಾಗಿ ರಿಲೀಸ್ ಆಗಲಿದೆ ರಾಮಾಯಣ ಟ್ರೈಲರ್ | | ACTPnews

ರಾಕಿ ಭಾಯ್-ರಣಬೀರ್ 'ರಾಮಾಯಣ' ಟ್ರೈಲರ್ ವಿಶ್ವದಾದ್ಯಂತ ರಿಲೀಸ್! ಯಾವಾಗ ಗೊತ್ತಾ?


Last Updated:

ರಾಮಾಯಣ ಚಿತ್ರದ ಫಸ್ಟ್ ಟ್ರೈಲರ್ ಈ ಶುಕ್ರವಾರ ಜುಲೈ-24 ರಂದು ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಇದು ಬಿಡುಗಡೆ ಆಗುತ್ತಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ರಾಕಿ ಭಾಯ್-ರಣಬೀರ್ 'ರಾಮಾಯಣ' ಟ್ರೈಲರ್ ವಿಶ್ವದಾದ್ಯಂತ ರಿಲೀಸ್! ಯಾವಾಗ ಗೊತ್ತಾ?
ರಾಕಿ ಭಾಯ್-ರಣಬೀರ್ ‘ರಾಮಾಯಣ’ ಟ್ರೈಲರ್ ವಿಶ್ವದಾದ್ಯಂತ ರಿಲೀಸ್! ಯಾವಾಗ ಗೊತ್ತಾ?

ರಾಮಾಯಣ ಚಿತ್ರದ (Ramayana Movie) ಟ್ರೈಲರ್ ರಿಲೀಸ್ (Trailer Release) ಆಗುತ್ತಿದೆ. ಇದೇ ತಿಂಗಳು ಅದು ಬಿಡುಗಡೆ ಆಗುತ್ತಿದೆ. ವಿಶ್ವದಾದ್ಯಂತ ಈ ಟ್ರೈಲರ್ ರಿಲೀಸ್ ಆಗುತ್ತಿದೆ. ಈ ವಿಷಯವನ್ನ ಚಿತ್ರ ತಂಡ ದೆಹಲಿಯಲ್ಲಿ ನಡೆದ ಪ್ರಥಮ ಸಂಕಲ್ಪ ಕಾರ್ಯಕ್ರಮದಲ್ಲಿಯೇ ಹೇಳಿಕೊಂಡಿದೆ. ರಾಕಿಂಗ್ ಸ್ಟಾರ್ ಯಶ್, (Rocking Star Yash) ಸಾಯಿ ಪಲ್ಲವಿ, ರಣಬೀರ್ ಕಪೂರ್, (Ranbir Kapoor) ಡೈರಕ್ಟರ್ ನಿತೇಶ್ ತಿವಾರಿ, ನಿರ್ಮಾಪಕ ನಮಿತ್ ಮಲ್ಹೋತ್ರಾ ತಮ್ಮ ಈ ಮಹತ್ವಾಕಾಂಕ್ಷಿ ಪ್ರಾಜೆಕ್ಟ್‌ನ ಸುಮಾರು ವಿಚಾರಗಳನ್ನ ಹೇಳಿಕೊಂಡಿದ್ದಾರೆ. ಅದರಲ್ಲಿ ಟ್ರೈಲರ್ ರಿಲೀಸ್ ಮ್ಯಾಟರ್ ಕೂಡ ಇದೆ. ಈ ವರ್ಷ ದೀಪಾವಳಿ ಹಬ್ಬಕ್ಕೆ ರಿಲೀಸ್ ಆಗ್ತಿರೋ ಈ ಚಿತ್ರದ ಇನ್ನಷ್ಟು ವಿಷಯ ಇಲ್ಲಿದೆ ಓದಿ.

ಜುಲೈ-24 ರಂದು ಚಿತ್ರ ರಿಲೀಸ್

ರಾಮಾಯಣ ಚಿತ್ರದ ನಿರೀಕ್ಷೆ ಜಾಸ್ತಿ ಇದೆ. ಈ ಚಿತ್ರದ ಕತೆ ಎಲ್ಲರಿಗೂ ಗೊತ್ತಿದೆ. ಆದರೂ ಈ ಚಿತ್ರದ ಕತೆ ನಮ್ಮ ಜೀವನದ ಒಂದು ಭಾಗವೇ ಆಗಿದೆ. ಇದರಲ್ಲಿರೋ ಮೌಲ್ಯವನ್ನ ಮತ್ತೆ ಮತ್ತೆ ತಿಳಿಸುವ ಕೆಲಸವು ಇಲ್ಲಾಗುತ್ತಿದೆ.
Yash Sai Pallavi Ranbir Kapoor Ramayana Movie First Trailer Release Soon

ನಿತೇಶ್ ತಿವಾರಿ ಸಿನಿಮಾ

500 ಶಾಲೆಯ ಮಕ್ಕಳಿಗೆ ಇದರ ಮೌಲ್ಯವನ್ನ ತಿಳಿಸುವ ಕೆಲಸವು ಆಗಿದೆ. ಇದೊಂದು ಸಿನಿಮಾ ಅಲ್ಲ. ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿದೆ ಅನ್ನೋದನ್ನ ಶಾಲಾ ಮಕ್ಕಳಿಗೆ ವಿಶೇಷವಾಗಿಯೇ ಹೇಳುವ ಕೆಲಸ ಮಾಡಿದೆ.

ವಿಶ್ವದಾದ್ಯಂತ ಟ್ರೈಲರ್ ರಿಲೀಸ್

ರಾಮಾಯಣ ಚಿತ್ರದ ಟ್ರೈಲರ್ ಇನ್ನು ರಿಲೀಸ್ ಆಗಿಲ್ಲ. ಆದರೆ, ಇದನ್ನ ವಿಶ್ವಮಟ್ಟದಲ್ಲಿಯೇ ರಿಲೀಸ್ ಮಾಡುವ ಪ್ಲಾನ್ ಇದೆ. ಅದನ್ನ ಚಿತ್ರದ ‘ಪ್ರಥಮ ಸಂಕಲ್ಪ’ ಕಾರ್ಯಕ್ರಮದಲ್ಲಿಯೇ ಹೇಳಲಾಗಿದೆ.

ನಿತೇಶ್ ತಿವಾರಿ ಸಿನಿಮಾ

ನಿತೇಶ್ ತಿವಾರಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇವರ ಕಲ್ಪನೆಯ ಈ ಚಿತ್ರ ಒಂದಲ್ಲ ಎರಡು ಭಾಗದಲ್ಲಿ ಬರ್ತಿದೆ. ಮೊದಲ ಭಾಗ ಈ ವರ್ಷ ದೀಪಾವಳಿಗೆ ಬರ್ತಿದೆ. ಇನ್ನೊಂದು ಭಾಗ 2027 ರಲ್ಲಿ ದೀಪಾವಳಿ ಹಬ್ಬಕ್ಕೇನೆ ಬರ್ತಿದೆ.

ಈ ಚಿತ್ರದ ಬಗ್ಗೆ ಇವರು ಹೀಗೆ ಹೇಳಿಕೊಳ್ಳುತ್ತಾರೆ. ರಾಮಾಯಣದ ಮೌಲ್ಯಗಳು ಸಾರ್ವತ್ರಿಕವಾಗಿಯೇ ಇವೆ. ಈ ಹಿನ್ನೆಲೆಯಲ್ಲಿಯೇ ಚಿತ್ರದ ಪ್ರತಿಯೊಂದು ದೃಶ್ಯವನ್ನು ನಾವು ಪ್ರಾಮಾಣಿಕವಾಗಿಯೇ ಮತ್ತು ಗೌರವದಿಂದಲೇ ಚಿತ್ರೀರಿಸಿದ್ದೇವೆ ಅಂತಲೇ ಹೇಳಿದ್ದಾರೆ.

Yash Sai Pallavi Ranbir Kapoor Ramayana Movie First Trailer Release Soon

ಆಸ್ಕರ್ ವಿನ್ನರ್ ಮ್ಯೂಸಿಕ್ ಡೈರೆಕ್ಟರ್
ಹೊಸ ಅನುಭವ ನೀಡುವ ಸಿನಿಮಾ

ರಾಯಾಮಾಯಣ ಚಿತ್ರವು ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ. ಕಲಾವಿದರ ಶ್ರೇಷ್ಠ ಅಭಿನಯ ಹಾಗೂ ತಂಡದ ಪರಿಶ್ರಮ ಈ ಒಂದು ಅನುಭವನ್ನ ಕಟ್ಟಿಕೊಡುತ್ತದೆ.

ಆಸ್ಕರ್ ವಿನ್ನರ್ ಮ್ಯೂಸಿಕ್ ಡೈರೆಕ್ಟರ್

ಈ ರಾಮಾಯಣ ಚಿತ್ರಕ್ಕೆ ಆಸ್ಕರ್ ವಿನ್ನರ್ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಅವರು ಸಂಗೀತ ನೀಡಿದ್ದಾರೆ. ಇದು ಚಿತ್ರ ಬಗೆಗಿನ ನಿರೀಕ್ಷೆಯನ್ನ ಇನ್ನಷ್ಟು ಹೆಚ್ಚಿಸಿದೆ.

ಜುಲೈ-24 ರಂದು ಬರ್ತಿರೋ ಚಿತ್ರದ ಟ್ರೈಲರ್ ಕೂಡ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸುವ ಸಾಧ್ಯತೆನೂ ಇದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed