Rakshith Shetty: ಗೆಳೆಯ ರಕ್ಷಿತ್ ಬಗ್ಗೆ ಅಚ್ಚರಿ ಪೋಸ್ಟ್ ಹಾಕಿದ ರಿಷಬ್‌ ಶೆಟ್ಟಿ! ಆ ಒಂದು ಮಾತಿನಿಂದ ಫ್ಯಾನ್ಸ್ ಫುಲ್ ಖುಷ್ | | ACTPnews

ರಕ್ಷಿತ್ , ರಿಷಬ್ ಶೆಟ್ಟಿ


Last Updated:

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅವರು ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ಆತ್ಮೀಯ ಗೆಳೆಯ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishabh Shetty) ಹಂಚಿಕೊಂಡಿರುವ ಭಾವನಾತ್ಮಕ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಚರ್ಚೆಗೆ ಕಾರಣವಾಗಿದೆ.

ರಕ್ಷಿತ್ , ರಿಷಬ್ ಶೆಟ್ಟಿ
ರಕ್ಷಿತ್ , ರಿಷಬ್ ಶೆಟ್ಟಿ

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ರೀತಿಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅವರು ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗ ತಮ್ಮ ನೆಚ್ಚಿನ ನಟನಿಗೆ ಅಭಿಮಾನಿಗಳು ಪ್ರೀತಿಯಿಂದ ಶುಭಾಶಯ ಕೋರುತ್ತಿದ್ದಾರೆ. ಜೊತೆಗೆ ಈ ವಿಶೇಷ ದಿನದಂದು ಅವರ ಆತ್ಮೀಯ ಗೆಳೆಯ, ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ (Rishabh Shetty) ಹಂಚಿಕೊಂಡಿರುವ ಭಾವನಾತ್ಮಕ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಚರ್ಚೆಗೆ ಕಾರಣವಾಗಿದೆ.

ವಿಶೇಷವಾಗಿ ಕಳೆದ ಕೆಲವು ತಿಂಗಳುಗಳಿಂದ ಹರಿದಾಡುತ್ತಿದ್ದ ಸ್ನೇಹದ ಬಿರುಕು ಕುರಿತ ವದಂತಿಗಳಿಗೆ ಈ ಒಂದು ಪೋಸ್ಟ್ ಸ್ಪಷ್ಟ ಉತ್ತರ ನೀಡಿದಂತಾಗಿದೆ. ರಕ್ಷಿತ್ ಶೆಟ್ಟಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ರಿಷಬ್ ಶೆಟ್ಟಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ಜೊತೆಗೆ ಅವರು ಬರೆದುಕೊಂಡಿರುವ ಸಂದೇಶ ಅಭಿಮಾನಿಗಳ ಗಮನ ಸೆಳೆದಿದೆ.

“In the world of passing faces this friend became a permanent chapter.. Happy Birthday Maga @RakshithShetty.. ಮೊನ್ನೆ ತಾನೆ ಮೀಟ್ ಮಾಡ್ಕೊಂಡು ಬಂದೆ.. He will be back soon” ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ. ಈ ಒಂದೇ ಒಂದು ಪೋಸ್ಟ್ ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಹಾಕಿದೆ. ಅಷ್ಟೇ ಅಲ್ಲದೆ ರಕ್ಷಿತ್ ಶೆಟ್ಟಿ ಆದಷ್ಟು ಬೇಗ ತೆರೆಮೇಲೆ ಬರಲಿದ್ದಾರೆ ಎಂದು ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ.

ಬಂದುಹೋಗುವ ಮುಖಗಳ ನಡುವೆ ಈ ಸ್ನೇಹಿತ ಶಾಶ್ವತ ಅಧ್ಯಾಯವಾಗಿದ್ದಾನೆ” ಎಂಬ ಅವರ ಮಾತು, ಇಬ್ಬರ ನಡುವಿನ ಬಾಂಧವ್ಯ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ತೋರಿಸುತ್ತದೆ.

ರಿಷಬ್ ಶೆಟ್ಟಿ ಹಂಚಿಕೊಂಡಿರುವ ಫೋಟೋ ಕಿರಿಕ್ ಪಾರ್ಟಿ ಚಿತ್ರದ ಚಿತ್ರೀಕರಣದ ವೇಳೆ ತೆಗೆದ ಫೋಟೋವಾಗಿದೆ. ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಇಬ್ಬರೂ ಮುಖಾಮುಖಿಯಾಗಿ ನಗುತ್ತಿರುವುದು ಕಾಣಿಸುತ್ತದೆ. ರಿಷಬ್ ಶೆಟ್ಟಿಯ ಶುಭಾಶಯದ ಪೋಸ್ಟ್ ಹೊರಬಂದ ತಕ್ಷಣವೇ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಶೆಟ್ಟಿ ಗ್ಯಾಂಗ್ ಸ್ನೇಹ ಇನ್ನೂ ಅಷ್ಟೇ ಗಟ್ಟಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed