Rakshit Shetty: ರಕ್ಷಿತ್ ಶೆಟ್ರ ಈ ಚಿತ್ರಕ್ಕೆ 4 ವರ್ಷ; ಇದರಲ್ಲಿದೆ ಹೃದಯ ತಟ್ಟುವ ಅಪರೂಪದ ಕತೆ! | | ACTPnews

ರಕ್ಷಿತ್ ಶೆಟ್ರ ಈ ಚಿತ್ರಕ್ಕೆ 4 ವರ್ಷ; ಇದರಲ್ಲಿದೆ ಹೃದಯ ತಟ್ಟುವ ಅಪರೂಪದ ಕತೆ!


Last Updated:

ರಕ್ಷಿತ್ ಶೆಟ್ರ 777 ಚಾರ್ಲಿ ಬಂದು ನಾಲ್ಕು ವರ್ಷ ಆಗಿದೆ. ಆದರೆ, ಈ ಚಿತ್ರ ನಿನ್ನೆ ಮೊನ್ನೆ ಬಂದ ಹಾಗೆ ಇದೆ. ಅಷ್ಟೊಂದು ಪ್ರಭಾವ ಬೀರಿದ್ದ ಈ ಚಿತ್ರದ ಒಂದಷ್ಟು ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ.

ರಕ್ಷಿತ್ ಶೆಟ್ರ ಈ ಚಿತ್ರಕ್ಕೆ 4 ವರ್ಷ; ಇದರಲ್ಲಿದೆ ಹೃದಯ ತಟ್ಟುವ ಅಪರೂಪದ ಕತೆ!
ರಕ್ಷಿತ್ ಶೆಟ್ರ ಈ ಚಿತ್ರಕ್ಕೆ 4 ವರ್ಷ; ಇದರಲ್ಲಿದೆ ಹೃದಯ ತಟ್ಟುವ ಅಪರೂಪದ ಕತೆ!

777 ಚಾರ್ಲಿ ಚಿತ್ರ (777 Charlie Movie) ಬಂದು ನಾಲ್ಕು ವರ್ಷ (4 Years) ಆಗಿದೆ. ಜೂನ್-10 ರಂದು ಇದು ತೆರೆ ಕಂಡಿತ್ತು. ಈ ಚಿತ್ರದ ಟ್ರೈಲರ್ ಧರ್ಮ ಮತ್ತು ಚಾರ್ಲಿ (Dharma-Charlie) ಬಾಂಧವ್ಯದ ಕತೆ ಹೇಳಿತ್ತು. ಆದರೆ, ಇಡೀ ಸಿನಿಮಾ (Movie) ನೋಡಿದಾಗ ಆದ ಅನುಭವವೇ ಬೇರೆ ನೋಡಿ. ಸಿನಿಮಾ ಬಂದು ನಾಲ್ಕು ವರ್ಷ ಕಳೆದಿದೆ. ಆದರೆ, ನಿನ್ನೆ ಮೊನ್ನೆ ನೋಡಿದಷ್ಟು ಹಸಿರಾಗಿಯೇ ಈ ಚಿತ್ರದ ನೆನಪು ಇದೆ. ಆ ರೀತಿಯ ಈ ಚಿತ್ರದ ಹಿಂದೆ ಒಂದಷ್ಟು ಇಂಟ್ರಸ್ಟಿಂಗ್ ವಿಷಯಗಳು ಇವೆ. ಆ ಎಲ್ಲ ವಿಚಾರದ ಒಂದು ಸ್ಟೋರಿ ಇಲ್ಲಿದೆ ಓದಿ.

ನಾಲ್ಕು ಚಾರ್ಲಿಗಳು

ಚಾರ್ಲಿ ಚಿತ್ರದಲ್ಲಿ ನಾಲ್ಕು ನಾಯಿಗಳು ಆ್ಯಕ್ಟ್ ಮಾಡಿವೆ. ಚಾರ್ಲಿ ಕತೆಯ ಪ್ರತಿ ಹಂತದಲ್ಲೂ ಒಂದೊಂದು ನಾಯಿಯನ್ನ ಬಳಕೆ ಮಾಡಿದ್ದಾರೆ. ಕತೆ ಹೇಗೆ ಸಾಗುತ್ತದೆಯೊ ಹಾಗೆ ಇಲ್ಲಿ ನಾಯಿಗಳು ಬದಲಾಗಿವೆ.

Rakshit Shetty Sangeetha Sriangeri 777 Charlie Movie Complete 4 Years

ನಾಲ್ಕು ಚಾರ್ಲಿಗಳು

(ಚಿತ್ರ ಕೃಪೆ: ರಕ್ಷಿತ್ ಶೆಟ್ಟಿ ಇನ್‌ಸ್ಟಾಗ್ರಾಮ್)

ಆದರೆ, ಈ ನಾಯಿಯನ್ನ ಕ್ಯಾಮರಾ ಮುಂದೆ ಅಭಿನಯಿಸುವಂತೆ ಮಾಡುವುದು ಅಷ್ಟು ಸುಲಭ ಕೂಡ ಅಲ್ಲ. ಬಿ.ಸಿ.ಪ್ರಮೋದ್ ಅನ್ನುವವರು ಈ ಚಾರ್ಲಿಗೆ ತರಬೇತಿ ಕೊಟ್ಟಿದ್ದರು.

ಒಂದೂವರೆ ವರ್ಷ

ಚಿತ್ರದ ನಾಯಕ ನಟ ರಕ್ಷಿತ್ ಶೆಟ್ಟಿ ಮತ್ತು ಚಾರ್ಲಿ ನಡುವಿನ ಬಾಂಧವ್ಯ ನೈಜವಾಗಿ ಬರಲು ಕಾರಣೂ ಇದೆ. ಚಾರ್ಲಿ ಹೆಸರಿನ ಲಾಬ್ರಡಾರ್ ನಾಯಿ ಜೊತೆಗೆ ರಕ್ಷಿತ್ ಸಮಯ ಕಳೆದರು.

ಹಾಗಾಗಿಯ ಒಂದೂವರೆ ವರ್ಷದಲ್ಲಿ ಬಾಂಡಿಂಗ್ ಕೂಡ ಚೆನ್ನಾಗಿ ಬೆಳೆದಿತ್ತು. ರಿಯಲ್ ಆಗಿಯೇ ಕ್ಯಾಮರಾ ಮುಂದೆ ನಟಿಸಲು ಸಾಧ್ಯವಾಯಿತು. ಧರ್ಮ ಮತ್ತು ಚಾರ್ಲಿಯ ಈ ನೈಜ ಪ್ರೀತಿಯನ್ನ ಜನ ನೋಡಿ ಮೆಚ್ಚಿಕೊಂಡರು.

ಅಪರೂಪದ ಕತೆಯ ಚಿತ್ರ

777 ಚಾರ್ಲಿ ಒಂದು ಅಪರೂಪದ ಕತೆ ಇರೋ ಚಿತ್ರವೇ ಆಗಿದೆ. ಹಿಮಾಲಯದ ಹಿಮದಲ್ಲಿ ಆಡ್ಬೇಕು ಅನ್ನೋದು ಚಾರ್ಲಿಯ ಅತಿ ದೊಡ್ಡ ಕನಸೇ ಆಗಿರುತ್ತದೆ.

Rakshit Shetty Sangeetha Sriangeri 777 Charlie Movie Complete 4 Years

ಚಿತ್ರ ಬಂದು 4 ವರ್ಷ ಪೂರ್ಣ

(ಚಿತ್ರ ಕೃಪೆ: ರಕ್ಷಿತ್ ಶೆಟ್ಟಿ ಇನ್‌ಸ್ಟಾಗ್ರಾಮ್)

ಧರ್ಮ ಈ ಕನಸನ್ನ ಈಡೇರಿಸುವುದೆ ಒಟ್ಟು ಕತೆ ಆಗಿದೆ. ಕ್ರೈಮ್ಯಾಕ್ಸ್ ಅಂತೂ ಅಷ್ಟೆ ಅದ್ಭುತವಾಗಿಯೇ ಇದೆ. ಆ ರೀತಿಯ ಈ ಚಿತ್ರ ಕ್ಲೈಮ್ಯಾಕ್ಸ್ ಅನ್ನ ಕಾಶ್ಮೀರ್ ಮತ್ತು ಹಿಮಾಚಲ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ. ಮೈನಸ್ ಡಿಗ್ರಿ ತಾಪಮಾನದಲ್ಲಿ ಶೂಟಿಂಗ್ ಮಾಡಲಾಗಿದೆ.

ಚಾರ್ಲಿ ದತ್ತು ಪಡೆದ ಟ್ರೈನರ್

ಚಿತ್ರದಲ್ಲಿ ಅಭಿನಯಿಸಿದ ಚಾರ್ಲಿಯನ್ನ ತರಬೇತುದಾರ ಪ್ರಮೋದ್ ಅವರೇ ದತ್ತು ಪಡೆದರು. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಚಾರ್ಲಿಯನ್ನ ಮಗುವಂತೆ ನೋಡಿಕೊಂಡಿದ್ದರು.

ಚಿತ್ರ ಬಂದು 4 ವರ್ಷ ಪೂರ್ಣ

777 ಚಾರ್ಲಿ ಬಂದು ನಾಲ್ಕು ವರ್ಷ ಆಗಿದೆ. ಜೂನ್-10 ರಂದು ಈ ಚಿತ್ರ ರಿಲೀಸ್ ಆಗಿದೆ. ಈ ಒಂದು ಲೆಕ್ಕಾಚಾರದಂತೆ ಈ ಸಿನಿಮಾ ಬಂದು ನಾಲ್ಕು ವರ್ಷ ಆಗಿದೆ.

ಈ ಚಿತ್ರದಲ್ಲಿ ಧರ್ಮ ಹೆಸರಿನ ಪಾತ್ರವನ್ನ ರಕ್ಷಿತ್ ಶೆಟ್ಟಿ ಮಾಡಿದ್ದರು. ಸಂಗೀತಾ ಶೃಂಗೇರಿ ಈ ಚಿತ್ರದ ನಾಯಕಿ ಆಗಿದ್ದರು. ಕಿರಣ್ ರಾಜ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು.

ಚಿತ್ರದ ಇತರ ಮಾಹಿತಿಗಳು

ಈ ಚಿತ್ರಕ್ಕೆ ನೋಬಿನ್ ಪಾಲ್ ಸಂಗೀತ ಕೊಟ್ಟಿದ್ದಾರೆ. ಅರವಿಂದ್ ಎಸ್.ಕಶ್ಯಪ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. 20 ಕೋಟಿ ಬಜೆಟ್ ಅಲ್ಲಿ ತಯಾರಾದ ಈ ಚಿತ್ರ, ಬಾಕ್ಸ್ ಆಫೀಸ್ ಅಲ್ಲಿ 105 ರಿಂದ 115 ಕೋಟಿ ಮಾಡಿತ್ತು ಅನ್ನುವ ಮಾಹಿತಿನೂ ಸಿಗುತ್ತದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed