Last Updated:
Pradosh: ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿದ ನಂತರ ಪ್ರದೋಷ್ ಆ ರೀತಿ ಮಾಡ್ಬಾರ್ದಾಗಿತ್ತಾ? ಆ ಒಂದು ನಡೆಯನ್ನು ವಿರೋಧಿಸಿದ ದರ್ಶನ್ ಲಾಯರ್.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ಈಗ ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯುತ್ತಿದೆ. ನಾನು ಈ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗುತ್ತೇನೆ (Approver) ಎಂದು ಮುಂದೆ ಬಂದ ಪ್ರದೋಷ್ ಈಗ ಮಾಫಿ ಸಾಕ್ಷಿಯಾಗಿ ಎರಡನೇ ದಿನದಂದು ಹೇಳಿಕೆ ದಾಖಲಿಸುತ್ತಿದ್ದಾರೆ.
ಈ ಕೇಸ್ನಲ್ಲಿ ಆರೋಪಿಯಾಗಿದ್ದ ಪ್ರದೋಷ್ ಈಗ ಆರೋಪಿ ಅಲ್ಲ. ಸದ್ಯ ಚಾರ್ಜ್ಶೀಟ್ ಲಿಸ್ಟ್ನಿಂದ ಪ್ರದೋಷ್ ಹೆಸರು ಡಿಲೀಟ್ ಮಾಡಲು ಕೋರ್ಟ್ ಸೂಚಿಸಿದೆ. ಅಷ್ಟೇ ಅಲ್ಲದೆ ಈಗಾಗಲೇ ನಿಗದಿಯಾಗಿದ್ದಂತೆ ಸೆ. 28 ಹಾಗೂ 29ರಂದು ಅಂದರೆ ನಿನ್ನೆ ಹಾಗೂ ಇಂದು ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆ ನಡೆಯುತ್ತಿದೆ.
ಆದರೆ ಈ ನಡುವೆ ದರ್ಶನ್ ಲಾಯರ್ ಪ್ರದೋಷ್ ವಿರುದ್ಧ ಗರಂ ಆಗಿದ್ದು ಆ ಒಂದು ನಡೆಯನ್ನು ವಿರೋಧಿಸಿದ್ದಾರೆ. ಮಾಫಿ ಸಾಕ್ಷಿ ಹೇಳಿಕೆ ದಾಖಲಿಸಿ 15 ನಿಮಿಷ ಲಾಯರ್ ಜೊತೆ ಪ್ರದೋಷ್ ಮಾತನಾಡಿದ್ದು, ಇದಕ್ಕೆ ಪೊಲೀಸರು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ದರ್ಶನ್ ಲಾಯರ್ ಆರೋಪಿಸಿದ್ದಾರೆ.
ಈ ರೀತಿಯಾಗಿ ಪ್ರದೋಷ್ಗೆ ಅವಕಾಶ ನೀಡಬರಾರದಾಗಿತ್ತು ಎಂದು ದರ್ಶನ್ ಲಾಯರ್ ಹೇಳಿದ್ದಾರೆ. ಸದ್ಯ ಈಗ 2ನೇ ದಿನದ ಮಾಫಿ ಸಾಕ್ಷಿ ಹೇಳಿಕೆ ಪ್ರಕ್ರಿಯೆ ನಡೆಯುತ್ತಿದೆ.
ವಿಚಾರಣೆಗೂ ಮುನ್ನ ಕೆಲ ಹೊತ್ತು ವಕೀಲರ ಜೊತೆ ಮಾತಾಡಿದ್ದ ಪ್ರದೂಷ್ ನಡೆಯನ್ನು ದರ್ಶನ್ ಲಾಯರ್ ಪ್ರಶ್ನಿಸಿದ್ದಾರೆ. ಪ್ರದೋಷ್ ಜೊತೆ ವಕೀಲರ ಚರ್ಚೆಗೆ ದರ್ಶನ್ ವಕೀಲರ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರದೋಷ್ ಈಗ ಆರೋಪಿಯಲ್ಲ ಸಾಕ್ಷಿಯಾಗಿದ್ದಾರೆ. ಹೀಗಾಗಿ ವಕೀಲರನ್ನು ನೇಮಿಸುವಂತಿಲ್ಲವೆಂದು ಎಂದಿದ್ದಾರೆ. ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಆಕ್ಷೇಪ ವ್ಯಕ್ತಪಡಿಸಿದ್ದು, ಅಲ್ಲದೇ ಅನ್ಲೈನಲ್ ನಲ್ಲಿ ಕೋರ್ಟ್ ಕಲಾಪ ಸ್ಕ್ರೀನ್ ರೆಕಾರ್ಡ್ ಮಾಡಿದ್ದಕ್ಕೆ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವ ಮೊದಲ ದಿನವಾಗಿದ್ದ ಸೆ. 28ರಂದು ಸುಮಾರು ಮೂರು ಗಂಟೆಗಳ ಕಾಲ ಹೇಳಿಕೆ ದಾಖಲಿಸಲಾಗಿತ್ತು. 40 ಪ್ಯಾರಾ ಹೇಳಿಕೆ ದಾಖಲಿಸಿದ್ದ ಪ್ರದೂಷ್ ಇಂದು ಮತ್ತೆ ಅದನ್ನು ಮುಂದುವರಿಸಿದ್ದಾನೆ.
ವರದಿ: ಮಾದೇಶ್ ಸಿ.ಎನ್. ನ್ಯೂಸ್18 ಕನ್ನಡ ಪ್ರತಿನಿಧಿ, ಬೆಂಗಳೂರು














