Last Updated:
ರಕ್ಷಿತ್ ಶೆಟ್ರು ಜನ್ಮ ದಿನದ ಸಂಭ್ರಮದಲ್ಲಿದ್ದಾರೆ. ಈ ಜನ್ಮ ದಿನಕ್ಕೆ ಏನಾದ್ರೂ ಹೊಸ ವಿಷಯ ಹೊರಗೆ ಬರುತ್ತಾ ಅನ್ನುವ ಪ್ರಶ್ನೆನೂ ಇದೆ. ಇದರ ನಡುವೆ ಶೆಟ್ರ ಹಿಂದಿನ ಸಿನಿಮಾಗಳು ಸೇರಿದಂತೆ ಈಗೀನ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ರಕ್ಷಿತ್ ಶೆಟ್ರ (Rakshit Shetty) ಮನೆ ಮುಂದೆ ಆಗೆಲ್ಲ ಅಭಿಮಾನಿಗಳು (Fans) ನಿಲ್ತಾ ಇದ್ದರು. ಮನೆಯ ಬಳಿ ಬಂದ ಫ್ಯಾನ್ಸ್ಗೆ ಶೆಟ್ರು ನಿರಾಶೆ ಮಾಡ್ತಾ ಇರಲಿಲ್ಲ. ಎಲ್ಲರನ್ನೂ ಮೀಟ್ ಆಗುತ್ತಿದ್ದರು. ಅವರು ತಂದ ಕೇಕ್ಗಳನ್ನ ಕಟ್ ಮಾಡ್ತಿದ್ದರು. ಇಡೀ ದಿನ ಅವರಿಗೆ ಮೀಸಲಿಡ್ತಾ ಇದ್ದರು. ಮಾಧ್ಯಮಗಳ ಕ್ಯಾಮರಾಗಳ ಮುಂದೇನೂ ಬ್ಯಾಕ್ ಟು ಬ್ಯಾಕ್ ಮಾತನಾಡ್ತಿದ್ದರು. ಆದರೆ, ಈಗ ಶೆಟ್ರು ಎಲ್ಲಿ ಅನ್ನು ಪ್ರಶ್ನೆ ಇದೆ. ಶೆಟ್ರ ಸ್ನೇಹಿತ ಪ್ರಮೋದ್ ಶೆಟ್ರು (Pramod Shetty) ಹೇಳ್ತಾನೇ ಇರ್ತಾರೆ. ಒಂದಷ್ಟು ಕತೆಗಳನ್ನ ಮಾಡಿಕೊಂಡಿದ್ದಾರೆ. ಇನ್ನೇನು ಬಂದೇ ಬಿಡ್ತಾರೆ. ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಾರೆ ಅನ್ನೋದನ್ನ ಹೇಳಿಕೊಂಡಿದ್ದಾರೆ. ಅಷ್ಟರಲ್ಲಿ ಇತ್ತೀಚಿಗೆ ರಕ್ಷಿತ್ ಶೆಟ್ರು (Rakshit Shetty) ತಮ್ಮ ತಂದೆ ಮತ್ತು ತಾಯಿಯ 50ನೇ ವೆಡ್ಡಿಂಗ್ ಆನಿವರ್ಸರಿ ಮಾಡಿದರು. ಆಗಲೇ ಶೆಟ್ರು ಎಲ್ಲರಿಗೂ ಕಾಣಿಸಿಕೊಂಡಿರೋದು. ಈ ಜೂನ್-6 ಕ್ಕೆ ರಕ್ಷಿತ್ ಶೆಟ್ರು ತಮ್ಮ 43 ನೇ ಜನ್ಮ ದಿನ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ಸ್ಟೋರಿ ಇಲ್ಲಿದೆ ಓದಿ.
ಮುಂದಿನ ಸಿನಿಮಾಗಳು
(ಚಿತ್ರ ಕೃಪೆ: ರಕ್ಷಿತ್ ಶೆಟ್ಟಿ ಇನ್ಸ್ಟಾಗ್ರಾಮ್)
ಇದರ ಬೆನ್ನಲ್ಲಿಯೇ ರಕ್ಷಿತ್ ಶೆಟ್ರ ಪರಮ್ವ ಸ್ಟುಡಿಯೋದ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಒಂದು ಬ್ಯೂಟಿಫುಲ್ ವಿಡಿಯೋ ಕೂಡ ಶೇರ್ ಆಗಿದೆ. ಇದರಲ್ಲಿ ರಕ್ಷಿತ್ ಶೆಟ್ಟಿ ಅವರ ಅಷ್ಟು ಸಿನಿಮಾಗಳ ಒಂದು ಸಣ್ಣ ಜರ್ನಿ ಇದೆ. ಈ ಮೂಲಕ ಶೆಟ್ರಿಗೆ ಹುಟ್ಟುಹ್ಬದ ಶುಭಾಶಯ ತಿಳಿಸಲಾಗಿದೆ.
ಕಳೆದ ಸಲ ರಕ್ಷಿತ್ ಶೆಟ್ರು ಎರಡು ಸಿನಿಮಾಗಳು ಮಾಡಿದರು. ಅದು ಸಪ್ತ ಸಾಗರದಾಚೆ ಎಲ್ಲೋ ಚಿತ್ರವೇ ಆಗಿತ್ತು. ಇದು ಒಂದಲ್ಲ ಎರಡು ಭಾಗದಲ್ಲಿಯೇ ಬಂತು. ಈ ಚಿತ್ರ ಒಂದು ಭಾಗದಲ್ಲಿ ಮಾತ್ರ ಬರ್ತದೆ ಅಂತ ಎಲ್ಲರೂ ಅಂದುಕೊಂಡಿದ್ರು.
ಆದರೆ, ಇದು ಎರಡು ಭಾಗದಲ್ಲಿ ಬಂತು. ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಸೈಡ್ ಬಿ ಅಂತಲೇ ಬಂತು. ಈ ಚಿತ್ರದಲ್ಲಿ ಶೆಟ್ರು ಮನು ಪಾತ್ರದಲ್ಲಿ ತುಂಬಾನೆ ಚೆನ್ನಾಗಿ ನಟಿಸಿದ್ದರು. ರುಕ್ಮಿಣಿ ವಸಂತ್ ತುಂಬಾನೆ ಚೆನ್ನಾಗಿಯೇ ಸಾಥ್ ಕೊಟ್ಟಿದ್ದರು. ಸೈಡ್ ಬಿ ಅಲ್ಲಿ ಚೈತ್ರಾ ಆಚಾರ್ ಗಮನ ಸೆಳೆದರು.
ರಕ್ಷಿತ್ ಶೆಟ್ರ ಬೆಸ್ಟ್ ಸಿನಿಮಾಗಳು
(ಚಿತ್ರ ಕೃಪೆ: ರಕ್ಷಿತ್ ಶೆಟ್ಟಿ ಇನ್ಸ್ಟಾಗ್ರಾಮ್)
ರಕ್ಷಿತ್ ಶೆಟ್ರು ಒಳ್ಳೆ ಸಿನಿಮಾಗಳನ್ನ ಮಾಡಿದ್ದಾರೆ. ಆರಂಭದಲ್ಲಿ ಮಾಡಿರೋ ಪ್ರಯತ್ನಗಳು ಸೋತು ಹೋಗಿದ್ದವು. ಆದರೆ, ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರ ಗೆಲುವು ಕೊಡ್ತು.
ರಕ್ಷಿತ್ ಶೆಟ್ರು ಒಂದಷ್ಟು ಸಿನಿಮಾಗಳ ಮೇಲೆ ಕೆಲಸ ಮಾಡಿದ್ದಾರೆ. ಕತೆಗಳು ಶೂಟಿಂಗ್ ಹೋಗುವ ಹಂತಕ್ಕೆ ಬಂದಿವೆ ಅನ್ನುವ ಮಾತು ಇದೆ. ಶುರು ಆದರೆ ಬ್ಯಾಕ್ ಟು ಬ್ಯಾಕ್ ಅನ್ನುವ ಮಾತನ್ನು ರಕ್ಷಿತ್ ಶೆಟ್ರ ಸ್ನೇಹಿತ ಪ್ರಮೋದ್ ಶೆಟ್ಟಿ ಹೇಳಿಕೊಂಡಿದ್ದಾರೆ.
ಇದರೊಟ್ಟಿಗೆ ಇವರ ರಿಚರ್ಡ್ ಆ್ಯಂಟನಿ ಚಿತ್ರದ ಬಗ್ಗೆ ಒಂದು ನಿರೀಕ್ಷೆ ಇದೆ. ಪುಣ್ಯಕೋಟಿ, ಮಿಡ್ ವೇ ಟು ಮೋಕ್ಷಾ ಚಿತ್ರವೂ ಇದೆ. ಈ ಎಲ್ಲ ಚಿತ್ರಗಳ ಕೆಲಸದಲ್ಲಿಯೇ ಇಷ್ಟು ದಿನ ರಕ್ಷಿತ್ ಶೆಟ್ರು ಬ್ಯುಸಿ ಇದ್ದರು ಅನ್ನೋ ಮಾತು ಇದೆ. ಒಟ್ಟಾರೆ, ರಕ್ಷಿತ್ ಶೆಟ್ರು ಬ್ಯುಸಿ ಇದ್ದಾರೆ. ಒಳ್ಳೆ ಸಿನಿಮಾವನ್ನೆ ಕೊಡ್ತಾರೆ ಅನ್ನುವ ಭರವಸೆಯನ್ನು ಮೂಡಿಸಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 06, 2026 10:41 AM IST













