Rajkumar Movies: ಅಣ್ಣಾವ್ರ ಭಕ್ತ ಕುಂಬಾರ, ಸಿಪಾಯಿ ರಾಮು ಸಿನಿಮಾಗಳನ್ನು ನೋಡೋ ಮನಸಾಗ್ತಿದ್ಯಾ? ಒಟಿಟಿಯಲ್ಲಿವೆ ವರನಟನ ಈ ಸಿನಿಮಾಗಳು | | ACTPnews

kannada veteran actor rajkumar old movie on ott full details


ಚಂದವಳ್ಳಿ ತೋಟ

ರಾಜಕುಮಾರ್ ಅವರ ಈ ಚಿತ್ರ ಒಟಿಟಿಯಲ್ಲಿದೆ. 1964 ರಲ್ಲಿ ತೆರೆ ಕಂಡಿದ್ದ ಈ ಚಿತ್ರದಲ್ಲಿ ಉದಯ್ ಕುಮಾರ್ ಇದ್ದರು. ಜಯಂತಿ ನಾಯಕಿ ಆಗಿದ್ದರು. ಟಿ.ವಿ.ಸಿಂಗ್ ಠಾಕೂರ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು.
ಭಲೇ ಜೋಡಿ

ಬೆಂಗಳೂರಿನ ಪ್ರಭಾತ್ ಥಿಯೇಟರ್ ಅಲ್ಲಿ ಈ ಚಿತ್ರ 100 ದಿನ ಓಡಿತ್ತು. ಟಿ.ಜಿ.ಲಿಂಗಪ್ಪ ಇದಕ್ಕೆ ಸಂಗೀತ ಮಾಡಿದ್ದರು. ಬಿ.ದೊರೈರಾಜ್ ಕ್ಯಾಮರಾವರ್ಕ್ ಮಾಡಿದ್ದರು.

ಹಸಿರು ತೋರಣ

ಈ ಚಿತ್ರದಲ್ಲಿ ರಾಜ್‌ಕುಮಾರ್ ಮತ್ತು ಭಾರತಿ ಅಭಿನಯಿಸಿದ್ದರು. ಚಿತ್ರವನ್ನು ಟಿ.ವಿ.ಸಿಂಗ್ ಠಾಕೂರ್ ಡೈರೆಕ್ಷನ್ ಮಾಡಿದ್ದರು. ಉಪೇಂದ್ರ ಕುಮಾರ್ ಮ್ಯೂಸಿಕ್ ಮಾಡಿದ್ದರು.

ಸಂತ ತುಕಾರಾಂ

ಸಂತ ತುಕಾರಾಂ ಚಿತ್ರದಲ್ಲಿ ರಾಜ್‌ಕುಮಾರ್, ಲೀಲಾವತಿ, ಉದಯಕ್ ಕುಮಾರ್, ಕೆ.ಎಸ್.ಅಶ್ವಥ್, ಬಾಲಕೃಷ್ಣ ಸೇರಿದಂತೆ ಇನ್ನು ಅನೇಕ ಕಲಾವಿದರು ನಟಿಸಿದ್ದಾರೆ.

ಈ ಚಿತ್ರಕ್ಕೆ ವಿಜಯ್ ಭಾಸ್ಕರ್ ಸಂಗೀತ ಕೊಟ್ಟಿದ್ದಾರೆ. ಡಿ.ವಿ.ರಾಜಾರಾಮ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.1963 ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು.

ಪಾರ್ವತಿ ಕಲ್ಯಾಣ

ಪಾರ್ವತಿ ಕಲ್ಯಾಣ ಸಿನಿಮಾ ಕೂಡ ಇಲ್ಲಿದೆ. ಈ ಚಿತ್ರವನ್ನ ಬಿ.ಎಸ್.ರಂಗ ಡೈರೆಕ್ಷನ್ ಮಾಡಿದ್ದಾರೆ. ರಾಜ್‌ಕುಮಾರ್, ಚಂದ್ರಕಲಾ, ಉದಯ್ ಕುಮಾರ್, ಎಂ.ಪಿ.ಶಂಕರ್, ತೆಲುಗು ಹೆಸರಾಂತ ಹಿರಿಯ ನಿರ್ದೇಶಕ ರಾಘವೇಂದ್ರ ರಾವ್ ಅವರೂ ಈ ಚಿತ್ರದಲ್ಲಿ ನಟಿಸಿದ್ದಾರೆ.

kannada veteran actor rajkumar old movie on ott full details

ಸಿಪಾಯಿ ರಾಮು

ಈ ಚಿತ್ರಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ಮ್ಯೂಸಿಕ್ ಮಾಡಿದ್ದಾರೆ. ಬಿ.ಎನ್.ಹರಿದಾಸ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಚಿತ್ರ 1967 ರಲ್ಲಿ ರಿಲೀಸ್ ಆಗಿತ್ತು.

ಭಕ್ತ ಕುಂಬಾರ

ರಾಜಕುಮಾರ್ ಅಭಿನಯದ ಭಕ್ತ ಕುಂಬಾರ ಸಿನಿಮಾ ಕೂಡ ಒಟಿಟಿಯಲ್ಲಿದೆ. ಈ ಚಿತ್ರವನ್ನ ಹುಣಸೂರು ಕೃಷ್ಣಮೂರ್ತಿಗಳು ಡೈರೆಕ್ಷನ್ ಮಾಡಿದ್ದರು. ಲೀಲಾವತಿ, ಬಾಲಕೃಷ್ಣ, ವಜ್ರಮುನಿ, ದ್ವಾರಕೀಶ್ ಈ ಚಿತ್ರದಲ್ಲಿ ನಟಿಸಿದ್ದಾರೆ.

ಸಿಪಾಯಿ ರಾಮು

ಈ ಚಿತ್ರದಲ್ಲಿ ರಾಜಕುಮಾರ್ ಡಕಾಯತ್ ರೋಲ್ ಮಾಡಿದ್ದಾರೆ. ವೈ.ಆರ್.ಸ್ವಾಮಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ರಾಜಕುಮಾರ್ ಅವರ ಈ ಚಿತ್ರದಲ್ಲಿ ಲೀಲಾವತಿ ಮತ್ತು ಆರತಿ ಕೂಡ ಅಭಿನಯಿಸಿದ್ದಾರೆ. ಕೆ.ಎಸ್.ಅಶ್ವತ್ ಇಲ್ಲೂ ನಟಿಸಿದ್ದಾರೆ.

ಉಪೇಂದ್ರ ಕುಮಾರ್ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ. ಆರ್.ಚಿಟ್ಟಿಬಾಬು ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಸಿನಿಮಾ 1972 ರಲ್ಲಿ ರಿಲೀಸ್ ಆಗಿತ್ತು.

kannada veteran actor rajkumar old movie on ott full details

ಭೂಕೈಲಾಸ
ಭಲೇ ಜೋಡಿ

ರಾಜಕುಮಾರ್ ಅವರ ಭಲೇ ಜೋಡಿ ಸಿನಿಮಾ ಕೂಡ ಒಟಿಟಿಯಲ್ಲಿದೆ. ಈ ಚಿತ್ರವನ್ನ ವೈ.ಆರ್.ಸ್ವಾಮಿ ಡೈರೆಕ್ಷನ್ ಮಾಡಿದ್ದಾರೆ.

ಈ ಚಿತ್ರ 1970 ರಲ್ಲಿ ರಿಲೀಸ್ ಆಗಿತ್ತು. ರಾಜಕುಮಾರ್ ಅವರಿಗೆ ಈ ಚಿತ್ರದಲ್ಲಿ ಭಾರತಿ ಅವರು ಜೋಡಿ ಆಗಿದ್ದಾರೆ. ಆರ್. ಮಧು ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ಆರ್.ರತ್ನಾ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ.

ಭೂಕೈಲಾಸ

ರಾಜಕುಮಾರ್ ಅವರ ಭೂಕೈಲಾಸ ಕೂಡ ಒಟಿಟಿಯಲ್ಲಿದೆ. ಕೆ.ಶಂಕರ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರದಲ್ಲಿ ಕಲ್ಯಾಣ್ ಕುಮಾರ್, ಬಿ.ಸರೋಜಾ ದೇವಿ ಅವರು ನಟಿಸಿದ್ದಾರೆ.

ಮಾಧವ ಬುಲ್ಬುಲೆ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ಆರ್. ಸುದರ್ಶನಂ, ಆರ್. ಗೋವರ್ಧನಂ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ರಾಜಕುಮಾರ್ ಅವರು 2005 ಚಿತ್ರಗಳಲ್ಲಿ ನಟಿಸಿದ್ದಾರೆ.

ಈ ಚಿತ್ರಗಳಲ್ಲಿ ಕೆಲವು ಸಿನಿಮಾಗಳು ಒಟಿಟಿಯಲ್ಲಿವೆ. ಅಮೆಜಾನ್ ಪ್ರೈಮ್ ವಿಡಿಯೋಸ್ ವೆಬ್ ಸೈಟ್ ಅಲ್ಲಿ ರಾಜಕುಮಾರ್ ಸಿನಿಮಾಗಳು ಅಂತ ಸರ್ಚ್ ಕೊಟ್ರೆ ಈ ಎಲ್ಲ ಸಿನಿಮಾಗಳು ಸಿಗುತ್ತವೆ.

ಆದರೆ, ಇವು ಎರೋಸ್‌ನೌ (erosnow) ಅಲ್ಲಿಯೇ ದೊರೆಯುತ್ತದೆ. ಕಾರಣ, ಅಮೆಜಾನ್ ಒಂದು ದೊಡ್ಡ ಅಂಗಡಿ ಆದರೆ, ಈ ಅಂಗಡಿಯಲ್ಲಿ ಎರೋಸ್ ನಾ ಒಂದು ಕೌಂಟರ್ ಓಪನ್ ಮಾಡಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed