Raj B Shetty: ನಾಯಿಗಳಿಗೆ ಕಲ್ಲೇಟು, ಕೋಣಗಳಿಗೆ ಕಸಾಯಿಖಾನೆ! ಸತ್ಯ ಬಿಚ್ಚಿಟ್ಟ ನಟ ರಾಜ್ ಬಿ ಶೆಟ್ಟಿ | | ACTPnews

Animal Lover Raj B Shetty Talk about Indie Dog Kambala Buffaloes at Karavali Trailer Release Event


ಕೋಣಗಳಿಗೆ ಹಿಂಸೆ ಅಲ್ವೇ

ಕರಾವಳಿ ಚಿತ್ರದಲ್ಲಿ ಕೋಣಗಳ ಕತೆ ಇದೆ. ಕಂಬಳದ ಓಟದ ಸ್ಟೋರಿ ಇದೆ. 10 ಸೆಕೆಂಡ್ ಓಟಕ್ಕೆ 10 ವರ್ಷದ ತಯಾರಿನೂ ಇರುತ್ತದೆ. ಆ ರೀತಿಯ ಈ ಓಟದಲ್ಲಿ ಕೋಣಗಳಿಗೆ ಏಟು ಕೊಡುವುದು ಇದೆ.

ನಾನು ನಾಯಿ ಸಾಕಿದ್ದೇನೆ…

(ಚಿತ್ರ ಕೃಪೆ: ರಾಜ್ ಬಿ. ಶೆಟ್ಟಿ ಇನ್‌ಸ್ಟಾಗ್ರಾಮ್)

ಆದರೆ, ಈ ಕೋಣಗಳನ್ನ ಈ ಓಟ ಬಿಟ್ಟು ಇತರ ದಿನಗಳಲ್ಲಿ ಮಗುವಿನ ತರವೇ ಸಾಕುತ್ತಾರೆ. ಏಸಿ ರೂಮ್‌ ಅಲ್ಲಿಯೇ ಇವುಗಳ ಆರೈಕೆನೂ ನಡೆಯುತ್ತದೆ. ಆ ರೀತಿನೇ ಇರುತ್ತದೆ.

ಕಂಬಳ ನಿಂತಾಗ ಏನ್ ಆಯಿತು

ಕರಾವಳಿ ಕಂಬಳ ನಿಂತಾ ಏನ್ ಆಯ್ತು ಗೊತ್ತಾ? ಅದೆಷ್ಟೋ ಕೋಣಗಳು ಕಸಾಯಿಖಾನೆಗೆ ಹೋದವು. ಕೋಣಗಳಿಗೆ ಇನ್ನೆಲ್ಲಿಯ ಕೆಲಸ ಹೇಳಿ?

ಈ ರೀತಿ ಕಸಾಯಿಖಾನೆಗೆ ಕಳಿಸೋ ಬದಲು ಕಂಬಳ ಮಾಡೋದು ಒಳ್ಳೆಯದು ಅಲ್ಲವೇ? ಹಾಗೆ ನಾವು ಪ್ರಾಣಿಗಳನ್ನ ನಮಗೆ ಉಪಯೋಗಕ್ಕೆ ಬರುವ ಹಾಗೆ ಪಳಗಿಸಿ ಬಿಟ್ಟಿದ್ದೇವೆ. ಕೋಣಗಳಿಗೆ ಕಂಬಳದಿಂದ ಹಿಂಸೆ ಆಗೋದಿಲ್ವಾ ಅಂತ ಕೇಳಿದ ಪ್ರಶ್ನೆಗೆ ಮೇಲೆ ಹೇಳಿದಂತೆ ರಾಜ್ ಬಿ ಶೆಟ್ಟಿ ಉತ್ತರ ಕೊಟ್ಟಿದ್ದಾರೆ.
ನಾನು ನಾಯಿ ಸಾಕಿದ್ದೇನೆ…

ನನ್ನ ಮನೆಯಲ್ಲಿ ಇಂಡಿ ಡಾಗ್‌ಗಳಿವೆ. ಇವುಗಳನ್ನ ಮನೆಯಲ್ಲಿ ಇಟ್ಟು ಸಾಕುವುದು ತಪ್ಪೇ ಆಗುತ್ತದೆ. ಅವುಗಳನ್ನ ಮುಕ್ತವಾಗಿಯೇ ಬಿಡ್ಬೇಕು. ಆಗಲೇ ಅದು ಸರಿ ಹೋಗುತ್ತದೆ.

ಆದರೆ, ಹಾಗೆ ಬಿಟ್ಟರೆ ಆ ನಾಯಿಗಳು ಕಲ್ಲಿನ ಏಟು ತಿನ್ನಬೇಕಾಗುತ್ತದೆ. ಹಾಗೆ ಬೀದಿಯಲ್ಲಿ ಬಿಡೋ ಬದಲು ಪ್ರೀತಿಯಿಂದ ಮನೆಯಲ್ಲಿ ಸಾಕುವುದು ಒಳ್ಳೆಯದಲ್ಲವೇ? ಅಂತಲೂ ಪ್ರಶ್ನೆ ಮಾಡ್ತಾರೆ ನೋಡಿ.

Animal Lover Raj B Shetty Talk about Indie Dog Kambala Buffaloes at Karavali Trailer Release Event

ಜುಲೈ-24 ರಂದು ರಿಲೀಸ್

(ಚಿತ್ರ ಕೃಪೆ: ರಾಜ್ ಬಿ. ಶೆಟ್ಟಿ ಇನ್‌ಸ್ಟಾಗ್ರಾಮ್)

ಕರಾವಳಿ ಚಿತ್ರದಲ್ಲಿ..

ಪ್ರಜ್ವಲ್ ದೇವರಾಜ್ ಅಭಿನಯದ ಕರಾವಳಿ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ಅವರು ಮಹಾವೀರ ಅನ್ನುವ ಪಾತ್ರ ಮಾಡಿದ್ದಾರೆ. ಕೋಣಗಳು ಚೆನ್ನಾಗಿವೆ ಅನಿಸಿದ್ರೆ ಆಯಿತು. ಆ ಕೂಡಲೇ ಖರೀದಿ ಮಾಡಿಕೊಂಡು ಬರುವ ಪಾತ್ರದಲ್ಲಿಯೇ ರಾಜ್ ಬಿ ಶೆಟ್ಟಿ ಇಲ್ಲಿ ಅಭಿನಯಿಸಿದ್ದಾರೆ.

ಆದರೆ, ಇದು ಅತಿಥಿ ಪಾತ್ರವೇ ಆಗಿದೆ. ಮುಖ್ಯಪಾತ್ರವೂ ಇದಾಗಿದೆ. ಪ್ರಜ್ವಲ್ ದೇವರಾಜ್ ಈ ಸಿನಿಮಾದ ನಾಯಕರಾಗಿದ್ದಾರೆ. ಸಂಪದ ಈ ಸಿನಿಮಾದ ಹೀರೋಯಿನ್ ಆಗಿದ್ದಾರೆ. ಇವರ ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಕೊಟ್ಟಿದ್ದಾರೆ.

ಜುಲೈ-24 ರಂದು ರಿಲೀಸ್

ಕರಾವಳಿ ಚಿತ್ರ 24 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಪ್ರಚಾರವೂ ಒಂದು ಹಂತಕ್ಕೆ ಇದೆ. ಸಿನಿಮಾ ಟ್ರೈಲರ್ ಮತ್ತು ಹಾಡುಗಳು ರಿಲೀಸ್ ಆಗಿವೆ.

ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅದ್ಭುತವಾಗಿಯೇ ಅಭಿನಯಿಸಿದ್ದಾರೆ. ಆದರೆ, ಈ ಪಾತ್ರಕ್ಕೆ ಬೇರೆಯವರು ಡಬ್ಬಿಂಗ್ ಮಾಡಿದ್ದಾರೆ. ಕಾರಣ, ಬಾಕಿ ಇರೋ ದುಡ್ಡುಕೊಟ್ಟಿಲ್ಲ ಅಂತ ಪ್ರಜ್ವಲ್ ದೇವರಾಜ್ ಡಬ್ಬಿಂಗ್ ಮಾಡಿಲ್ಲ.

ಪ್ರಜ್ವಲ್ ದೇವರಾಜ್ ಧ್ವನಿ ಟ್ರೈಲರ್ ಅಲ್ಲಿ ಇಲ್ವೇ ಇಲ್ಲ ಅಂತ ಪ್ರಜ್ವಲ್ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿರೋದು ಇದೆ. ಆದರೂ ಈ ಚಿತ್ರ ಪ್ರಜ್ವಲ್ ಧ್ವನಿ ಇಲ್ಲದೇನೆ ರಿಲೀಸ್ ಆಗುತ್ತಾ ಅನ್ನುವ ಪ್ರಶ್ನೆ ಕೂಡ ಇದೆ ಅಂತಲೇ ಹೇಲಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed