Last Updated:
ಅಯೋಗ್ಯ-2 ಚಿತ್ರ 25 ದಿನ ಪೂರೈಸಿದೆ. ಈ ಖುಷಿಯನ್ನ ಚಿತ್ರ ತಂಡ ಸೆಲೆಬ್ರೇಟ್ ಮಾಡಿದೆ. ಒಂದು ಟ್ರೈಲರ್ ಕೂಡ ರಿಲೀಸ್ ಮಾಡಿದೆ. ಈ ಎಲ್ಲದರ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ಅಯೋಗ್ಯ-2 ಚಿತ್ರ (Ayogya-2 Movie) 25 ದಿನ ಪೂರೈಸಿದೆ. ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಥಿಯೇಟರ್ ಅಲ್ಲಿ ಈ ಚಿತ್ರ ಇನ್ನು ಓಡ್ತಿದೆ. ರಚಿತಾ ರಾಮ್ (Rachita Ram) ಹಾಗೂ ಸತೀಶ್ ನೀನಾಸಂ (Sathish Ninasam) ಅವರ ಈ ಚಿತ್ರದಲ್ಲಿ ರವಿಚಂದ್ರನ್ ಇದ್ದಾರೆ. ಇವರ ಆಗಮನದಿಂದ ಈ ಚಿತ್ರಕ್ಕೆ ಬೇರೆಯದ್ದೇ ಖದರ್ ಬಂದಿದೆ. ಕ್ರೇಜಿ ಫ್ಯಾನ್ಸ್ (Crazy Fans) ಕೂಡ ಈ ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ. ಸತೀಶ್ ಫ್ಯಾನ್ಸ್ ಕೂಡ ಇಷ್ಟಪಟ್ಟಿದ್ದಾರೆ. ರಚಿತಾ ಫ್ಯಾನ್ಸ್ ಸಹ ಈ ಚಿತ್ರವನ್ನ ಮೆಚ್ಚಿಕೊಂಡಿದ್ದಾರೆ. ಇವರೆಲ್ಲ ಇಷ್ಟಪಟ್ಟ ಈ ಚಿತ್ರ 42 ಸಿಂಗಲ್ ಥಿಯೇಟರ್ ಹಾಗೂ 24 ಮಲ್ಟಿಪ್ಲೆಕ್ಸ್ ಥಿಯೇಟರ್ ಅಲ್ಲಿ ಓಡಾನೇ ಇದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.














