ಕರಾವಳಿ ಚಿತ್ರದ ಪ್ರೀಮಿಯರ್ ಶೋ ಪ್ಲಾನ್ ಆಗಿವೆ. ಮಂಗಳೂರು, ಬೆಂಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರಿನಲ್ಲಿ ಈ ಚಿತ್ರದ ಪ್ರೀಮಿಯರ್ ಶೋ ನಡೆಯುತ್ತಿದೆ.
ಇನ್ಸ್ಟಾ ಲೈವ್ ಅಲ್ಲಿ ಹೇಳಿದ್ದೇನು?
(ಚಿತ್ರ ಕೃಪೆ: ರಾಜ್ ಬಿ ಶೆಟ್ಟಿ ಇನ್ಸ್ಟಾಗ್ರಾಮ್)
ಯಾವ ಊರಲ್ಲಿ ಯಾವಾಗ ಕರಾವಳಿ ಚಿತ್ರದ ಪ್ರೀಮಿಯರ್ ಶೋ ಇರುತ್ತದೆ ಅಂತಲೂ ರಾಜ್ ಬಿ ಶೆಟ್ರು ಹೇಳಿದ್ದಾರೆ. ಆ ಒಂದು ಮಾಹಿತಿ ಈ ರೀತಿ ಇದೆ ಓದಿ.
- ಜುಲೈ 19 – ಮಂಗಳೂರು
- ಜುಲೈ 20 – ಶಿವಮೊಗ್ಗ
- ಜುಲೈ 21 – ದಾವಣಗೆರೆ
- ಜುಲೈ 22 – ಮೈಸೂರು
- ಜುಲೈ 23 – ಬೆಂಗಳೂರು
ಈ ಚಿತ್ರದ ಪ್ರೀಮಿಯರ್ ಶೋಗಳಿವೆ. ಜುಲೈ-24 ರಂದು ಈ ಕರಾವಳಿ ಚಿತ್ರ ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ.
ಕರಾವಳಿ ಚಿತ್ರವನ್ನ ಗುರುದತ್ತ ಗಾಣಿಗ ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರಕ್ಕೆ ಇವರೂ ಒಬ್ಬ ನಿರ್ಮಾಪಕರೂ ಆಗಿದ್ದಾರೆ. ಸಚಿನ್ ಬಸ್ರೂರು ಸಂಗೀತ ಕೊಟ್ಟಿದ್ದಾರೆ. ಅಭಿಮನ್ಯು ಸದಾನಂದನ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.
ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿದ್ದಾರೆ. ಸಂಪದ ನಾಯಕಿ ಆಗಿದ್ದಾರೆ. ರಾಜ್ ಬಿ ಶೆಟ್ಟಿ ಈ ಚಿತ್ರದಲ್ಲಿ ಮಹಾವೀರ ಅನ್ನುವ ಪಾತ್ರ ಮಾಡಿದ್ದಾರೆ. ಆದರೆ, ಇದು ಗೆಸ್ಟ್ ರೋಲ್ ಆಗಿದೆ.
ಕರಾವಳಿ ಪ್ರೀಮಿಯರ್ ಶೋ
(ಚಿತ್ರ ಕೃಪೆ: ರಾಜ್ ಬಿ ಶೆಟ್ಟಿ ಇನ್ಸ್ಟಾಗ್ರಾಮ್)
ಕರಾವಳಿ ಚಿತ್ರ ಪ್ರಜ್ವಲ್ ದೇವರಾಜ್ ಬದುಕಿನ ವಿಶೇಷ ಚಿತ್ರ ಇದಾಗಿದೆ. ಇಲ್ಲಿವರೆಗಿನ ಸಿನಿಮಾಗಳಲ್ಲಿ ಪ್ರಜ್ವಲ್ ಈ ರೀತಿ ಪಾತ್ರ ಮಾಡಿಯೇ ಇಲ್ಲ.
ಆದರೆ, ಇಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ತಮ್ಮ ಬದುಕಿನ ಅದ್ಭುತ ಚಿತ್ರವು ಇದಾಗಿದೆ ಅಂತಲೂ ಹೇಳಿಕೊಂಡಿದ್ದಾರೆ. ಗುರುದತ್ತ ಗಾಣಿಗ ಅವರು ಈ ಮೂಲಕ ತಮ್ಮೂರಿನ ಕಡೆಯ ಕತೆಯನ್ನ ಇದರಲ್ಲಿ ಹೇಳಿದ್ದಾರೆ.
ಈ ಚಿತ್ರದಲ್ಲಿ ಕನ್ನಡದ ಹೆಸರಾಂತ ಕಲಾವಿದರೂ ನಟಿಸಿದ್ದಾರೆ. ನಟ-ನಿರ್ದೇಶಕ ರಮೇಶ್ ಇಂದಿರಾ ಈ ಚಿತ್ರದಲ್ಲಿ ಪ್ರಮುಖ ರೋಲ್ ಮಾಡಿದ್ದಾರೆ. ಹಿರಿಯ ನಟ ಶ್ರೀಧರ್ ಕೂಡ ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಹಾಸ್ಯ ನಟ ಮಿತ್ರ ಈ ಸಿನಿಮಾದಲ್ಲಿ ಗಂಭೀರ ಪಾತ್ರ ಮಾಡಿದ್ದಾರೆ. ಇದಕ್ಕಾಗಿಯೇ ಲುಕ್ ಕೂಡ ಚೇಂಜ್ ಮಾಡಿದ್ದಾರೆ. ಇವರೆಲ್ಲರ ಈ ಚಿತ್ರವನ್ನ ಜನ ಹೇಗೆ ತೆಗೆದುಕೊಳ್ಳುತ್ತಾರೆ ಅನ್ನುವ ಕುತೂಹಲವೂ ಹೆಚ್ಚಾಗಿದೆ.













