Last Updated:
ದಕ್ಷಿಣ ಕರಾವಳಿ ರೈಲ್ವೆ ವಿಶಾಖಪಟ್ಟಣಂ SMVT ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ಸೇವೆಯನ್ನು ಜುಲೈ 3 ರಿಂದ ಆಗಸ್ಟ್ 1ರವರೆಗೆ ಐದು ಹೆಚ್ಚುವರಿ ಟ್ರಿಪ್‌ಗಳಿಗೆ ವಿಸ್ತರಿಸಿದೆ.
ಬೆಂಗಳೂರು: ನೀವು ವಿಶಾಖಪಟ್ಟಣಂ (Visakhapatnam) ಮತ್ತು ಬೆಂಗಳೂರು (Bengaluru) ನಡುವೆ ಓಡಾಡುವವರೇ? ಹಬ್ಬದ ಸೀಸನ್ ಅಥವಾ ವೀಕೆಂಡ್ ಟ್ರಿಪ್‍ಗೆ ರೈಲು (Train) ಟಿಕೆಟ್ ಸಿಗುತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ. ಪ್ರಯಾಣಿಕರ (Passengers) ಅತಿಯಾದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ದಕ್ಷಿಣ ಕರಾವಳಿ ರೈಲ್ವೆಯು ವಿಶಾಖಪಟ್ಟಣಂ-SMVT ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಸೇವೆಯನ್ನು ಐದು ಹೆಚ್ಚುವರಿ ಟ್ರಿಪ್‌ಗಳಿಗೆ ವಿಸ್ತರಿಸಿದೆ.
ಇನ್ನು ಮುಂದೆ ನೀವು ಜುಲೈ 3 ರಿಂದ ಆಗಸ್ಟ್ 1ರವರೆಗೆ ಈ ವಿಶೇಷ ರೈಲಿನ ಲಾಭ ಪಡೆಯಬಹುದು.
ರೈಲು ಸಂಖ್ಯೆ 08582 (ಬೆಂಗಳೂರು-ವಿಶಾಖಪಟ್ಟಣಂ): ಪ್ರತಿ ಶುಕ್ರವಾರ ಮಧ್ಯಾಹ್ನ 3.55ಕ್ಕೆ SMVT ಬೆಂಗಳೂರಿನಿಂದ ಹೊರಟು, ಮರುದಿನ ಮಧ್ಯಾಹ್ನ 1.30ಕ್ಕೆ ವಿಶಾಖಪಟ್ಟಣಂ ತಲುಪಲಿದೆ ಎಂದು ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ.
ವಿಶೇಷವೆಂದರೆ, ಈ ರೈಲು ಎರಡೂ ದಿಕ್ಕುಗಳಲ್ಲಿ ದುವ್ವಾಡದಲ್ಲಿ ನಿಲುಗಡೆಯನ್ನು ಹೊಂದಿದ್ದು, ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲ ಮಾಡಿಕೊಟ್ಟಿದೆ.
Bangalore [Bangalore],Bangalore,Karnataka













