Earthquake: ವೆನೆಜುವೆಲಾ ಒಂದೇ ಅಲ್ಲ, ಒಂದೇ ದಿನ 3 ದೇಶಗಳಲ್ಲಿ ಭೂಕಂಪ! ಇದು ಮತ್ತೊಂದು ಮಹಾ ವಿಪತ್ತಿನ ಸೂಚನೆಯಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ವೆನೆಜುವೆಲಾದಲ್ಲಿ ಡಬಲ್ ಭೂಕಂಪ


Last Updated:

Earthquake: ವೆನೆಜುವೆಲಾ ಒಂದೇ ಅಲ್ಲ ಅಮೆರಿಕ, ಜಪಾನ್ನಲ್ಲೂ ಕೂಡ ಒಂದೇ ದಿನದಲ್ಲಿ ಪ್ರಬಲ ಭೂಕಂಪ! ಏನಾದರೂ 3 ದೇಶಗಳ ಪ್ರಬಲ ಭೂಕಂಪಗಳ ನಡುವೆ ಸಂಬಂಧ ಇದೆಯಾ? ಅಥವಾ ದೊಡ್ಡ ಅಪಾಯದ ಮುನ್ಸೂಚನೆನಾ? ಇಲ್ಲಿದೆ ಆ ಕುರಿತ ವರದಿ:

ವೆನೆಜುವೆಲಾದಲ್ಲಿ ಡಬಲ್ ಭೂಕಂಪ
ವೆನೆಜುವೆಲಾದಲ್ಲಿ ಡಬಲ್ ಭೂಕಂಪ

Earthquake: ಸಾಮಾನ್ಯವಾಗಿ ಭೂಮಿ (Earth) ಕಂಪಿಸಿದರೆ ಈ ಜಗತ್ತಿನ (World) ಯಾವುದಾದರೂ ಒಂದು ಮೂಲೆಯಲ್ಲಿ ಒಮ್ಮೆ ಮಾತ್ರ ಕಂಪನವಾಗುತ್ತದೆ. ಆದರೆ, ದುರದೃಷ್ಟವಶಾತ್ ಇಂದು ನಡೆದ ಭೂಕಂಪನ (Earthquake) ಕೇವಲ ಯಾವುದೋ ಒಂದು ದೇಶದಲ್ಲಿ ಮಾತ್ರವಲ್ಲ, ವಿಶ್ವದ ವಿವಿಧ ಭಾಗಗಳಲ್ಲಿ ನಡುಗಿಸುವ ಮೂಲಕ ಇಡೀ ಮಾನವಕುಲದಲ್ಲಿಯೇ ತಲ್ಲಣ ಸೃಷ್ಟಿಸಿವೆ. ಹೌದು, ಇಂದು ಜಪಾನ್ (Japan), ಅಮೆರಿಕ (America) ಮತ್ತು ವೆನೆಜುವೆಲಾದಲ್ಲಿ (Venejuvala) ಒಂದರ ಹಿಂದೆ ಒಂದರಂತೆ ಭೂಮಿ ಕಂಪಿಸಿದೆ. ಹಾಗಾಗಿ, ಇದು ಯಾವುದೋ ದೊಡ್ಡ ವಿಪತ್ತಿನ (Disaster) ಮುನ್ಸೂಚನೆಯೇ ಎಂಬ ಆತಂಕ ಜನರಲ್ಲಿ ಮೂಡಿದೆ. ಆ ಕುರಿತ ವರದಿ ಇಲ್ಲಿದೆ.

ಭೂಮಿಯ ಯಾವ ಭಾಗದಲ್ಲಿ ಕಂಪನ?

ಒಂದೇ ದಿನ ಜಗತ್ತಿನ ಮೂರು ವಿಭಿನ್ನ ದೇಶಗಳಲ್ಲಿ ಭಾರಿ ಭೂಕಂಪವಾಗಿದೆ. ಅದರಂತೆ, ಜಪಾನ್‌ನಲ್ಲಿ 6.9 ತೀವ್ರತೆಯ ಭೂಕಂಪ ಸಂಭವಿಸಿದರೆ, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ 5.6 ತೀವ್ರತೆಯ ಕಂಪನ ವರದಿಯಾಗಿದೆ. ಇದೇ ಸಮಯದಲ್ಲಿ ವೆನೆಜುವೆಲಾದಲ್ಲಿ ಕೇವಲ 39 ಸೆಕೆಂಡುಗಳ ಅಂತರದಲ್ಲಿ 7.2 ಮತ್ತು 7.5 ತೀವ್ರತೆಯ ಎರಡು ಅತ್ಯಂತ ಪ್ರಬಲ ಭೂಕಂಪಗಳು ಸಂಭವಿಸಿದೆ. ಅದರಂತೆ, ಈ ಮೂರೂ ಘಟನೆಗಳು ಒಂದೇ ದಿನ ನಡೆದಿದ್ದರಿಂದ ಇವುಗಳ ನಡುವೆ ಏನಾದರೂ ಸಂಪರ್ಕವಿದೆಯೇ ಎಂಬ ಪ್ರಶ್ನೆಗಳು ಸಾರ್ವಜನಿಕರಲ್ಲಿ ಮೂಡಿದೆ.

ಮೂರು ಕಂಪನಗಳ ನಡುವೆ ಏನಾದರೂ ಸಂಬಂಧ?

ಸಾವಿರಾರು ಕಿಲೋಮೀಟರ್ ದೂರದಲ್ಲಿ ಸಂಭವಿಸಿದ ಈ ಭೂಕಂಪಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂದು ಭೂಕಂಪಶಾಸ್ತ್ರಜ್ಞರು ಸ್ಪಷ್ಟಪಡಿಸಿದ್ದಾರೆ. ಸಿಎನ್‌ಎನ್ ವರದಿಯ ಪ್ರಕಾರ, ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಭೂಕಂಪಶಾಸ್ತ್ರಜ್ಞರಾದ ಡಾ. ಲೂಸಿ ಜೋನ್ಸ್ ಅವರ ಪ್ರಕಾರ, ಈ ಮೂರು ಭೂಕಂಪಗಳು ಸಂಪೂರ್ಣವಾಗಿ ವಿಭಿನ್ನ ಟೆಕ್ಟೋನಿಕ್ ಪ್ಲೇಟ್‌ಗಳು ಮತ್ತು ದೋಷ ರೇಖೆಗಳಲ್ಲಿ ಸಂಭವಿಸಿವೆ. ಒಂದು ಪ್ರದೇಶದಲ್ಲಿ ಸಂಭವಿಸುವ ದೊಡ್ಡ ಭೂಕಂಪವು ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಮತ್ತೊಂದು ಪ್ರದೇಶದಲ್ಲಿ ಭೂಕಂಪವನ್ನು ಪ್ರೇರೇಪಿಸಲು ಸಾಧ್ಯವಿಲ್ಲ. ಹಾಗಾಗಿ, ಒಂದೇ ದಿನ ಈ ಮೂರು ಸಂಭವಿಸಿರುವುದು ಕೇವಲ ಸಮಯದ ಕಾಕತಾಳೀಯವಾಗಿದೆ. ಅದರಲ್ಲೂ, ಈ ಪ್ರದೇಶಗಳಲ್ಲಿ ದೀರ್ಘಕಾಲದಿಂದ ಭೂವೈಜ್ಞಾನಿಕ ಒತ್ತಡವು ನಿರ್ಮಾಣವಾಗುತ್ತಿದ್ದುದರಿಂದ ಈ ಕಂಪನಗಳು ನಡೆದಿವೆ ಎಂದು ತಿಳಿಸಿದ್ದಾರೆ.

ವೆನೆಜುವೆಲಾದಲ್ಲಿ ಡಬಲ್ ಭೂಕಂಪ

ವೆನೆಜುವೆಲಾದಲ್ಲಿ ಡಬಲ್ ಭೂಕಂಪ
ವೆನೆಜುವೆಲಾದಲ್ಲಿ ಡಬಲ್ ಭೂಕಂಪ:

ಈ ಎಲ್ಲ ಘಟನೆಗಳ ನಡುವೆ ವೆನೆಜುವೆಲಾದಲ್ಲಿ ಸಂಭವಿಸಿದ ಭೂಕಂಪವು ಜಗತ್ತಿನ ಗಮನ ಸೆಳೆದಿದೆ. ಯಾಕಂದ್ರೆ, ಇಲ್ಲಿ ಮೊದಲು 7.2 ತೀವ್ರತೆಯ ಭೂಕಂಪ ಸಂಭವಿಸಿತು ಮತ್ತು ಅದರ ಬೆನ್ನಲ್ಲೇ ಕೇವಲ 39 ಸೆಕೆಂಡುಗಳಲ್ಲಿ 7.5 ತೀವ್ರತೆಯ ಮತ್ತೊಂದು ಪ್ರಬಲ ಭೂಕಂಪ ದಾಖಲಾಯಿತು. ಈ ಎರಡೂ ಕಂಪನಗಳು ಸಮುದ್ರದ ಅಡಿಯಲ್ಲಿ ಸಂಭವಿಸಿದ್ದರಿಂದ ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಎಚ್ಚರಿಕೆಯನ್ನು ಸಹ ನೀಡಲಾಗಿತ್ತು ಎನ್ನಲಾಗಿದೆ. ಏತನ್ಮಧ್ಯೆ, ಈ ಭೂಕಂಪನದ ಕಾರಣ 10 ಸಾವಿರಕ್ಕೂ ಅಧಿಕ ಜನರು ವೆನೆಜುವೆಲಾದಲ್ಲಿ ಸಾವನ್ನ್ಪಿದ್ದಾರೆ ಎಂದು ವರದಿಯಾಗಿದೆ.

ಏನಿದು ಅಪರೂಪದ ಡಬಲ್ಟ್ ಭೂಕಂಪನ?

ಡಬಲ್ಟ್ ಭೂಕಂಪನ ಎಂದರೆ ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅಥವಾ ಪರಸ್ಪರ ಜೋಡಣೆಗೊಂಡಿರುವ ಭೌಗೋಳಿಕ ದೋಷ ರೇಖೆಗಳಲ್ಲಿ ಅತಿ ಕಡಿಮೆ ಅವಧಿಯ ಅಂತರದಲ್ಲಿ (ಕೆಲವೇ ಸೆಕೆಂಡುಗಳು ಅಥವಾ ನಿಮಿಷಗಳಲ್ಲಿ) ಸರಿಸುಮಾರು ಒಂದೇ ತೀವ್ರತೆಯ ಎರಡು ಪ್ರಬಲ ಭೂಕಂಪಗಳು ಸಂಭವಿಸುವ ಅಪರೂಪದ ಪ್ರಕೃತಿ ವಿಸ್ಮಯವಾಗಿದೆ.

ಹಿಂದೆಯೂ ಹೀಗೆ ಆಗಿತ್ತಾ?

ಡಬಲ್ಟ್ ಭೂಕಂಪಗಳು ಅತ್ಯಂತ ಅಪರೂಪವಾಗಿದ್ದರೂ ಇತಿಹಾಸಕ್ಕೆ ಹೊಸದೇನಲ್ಲ.! ಈ ಹಿಂದೆ 2006 ರಲ್ಲಿ ಕುರಿಲ್ ದ್ವೀಪಗಳು, ಜಪಾನ್, ಅಲಾಸ್ಕಾ ಮತ್ತು ಫಿಲಿಪೈನ್ಸ್‌ನಲ್ಲಿ ಇಂತಹ ಘಟನೆಗಳು ವರದಿಯಾಗಿದ್ದವು. ಹಾಗೆಯೇ 2007 ರಲ್ಲಿ ಇಂಡೋನೇಷ್ಯಾದ ಸುಮಾತ್ರಾದಲ್ಲಿಯೂ ಇಂತಹದೇ ಭೂಕಂಪ ಸಂಭವಿಸಿತ್ತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed