Krishi Thapanda: ವೈಶಾಕ್ ಸೂಸೈಡ್​ ಕೇಸ್​ಗೆ ಬಿಗ್​ ಟ್ವಿಸ್ಟ್​! ಕೃಷಿ ತಾಪಂಡ ಬೆಡ್​ರೂಮ್​​ನಲ್ಲಿ ಉದ್ಯಮಿ ಪತ್ನಿ ನೋಡಿದ್ದೇನು? ದೂರಿನಲ್ಲಿ ಏನಿದೆ? | | ACTPnews

News18


Last Updated:

ಪೊಲೀಸರಿಗೆ ದೂರು ಕೊಟ್ಟ ಮೃತ ಉದ್ಯಮಿ ವೈಶಾಕ್ ಪತ್ನಿ ಮೇಘಾ, ಕಂಪ್ಲೇಟ್​ನಲ್ಲಿ ಕೆಲವು ಅಂಶಗಳನ್ನ ಉಲ್ಲೇಖಿಸಿದ್ದಾರೆ. ಕೃಷಿ ತಾಪಂಡ ಮನೆಯಲ್ಲಿ ಉದ್ಯಮಿ ಪತ್ನಿ ನೋಡಿದ್ದೇನು?

News18
News18

ಬೆಂಗಳೂರು (ಜೂ.25): ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲೇ ಉದ್ಯಮಿ ವೈಶಾಕ್ ಆತ್ಮಹತ್ಯೆಗೆ ಶರಣಾಗಿದ್ದು, ಭಾರೀ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹೆಂಡ್ತಿ-ಮಕ್ಕಳಿದ್ರೂ ಉದ್ಯಮಿ ನಟಿ ಮನೆಯಲ್ಲೇ ಯಾಕಿದ್ದರು ಎನ್ನುವ ಪ್ರಶ್ನೆ ಮೂಡಿದೆ. ನಟಿಗೆ ಸಾಯೋದಾಗಿ ಮೆಸೇಜ್ ಮಾಡಿ ವೈಶಾಕ್​ ಆತ್ಮಹತ್ಯೆಗೆ (Vaishak Suicide) ಶರಣಾಗಿದ್ದಾರೆ. ಇದೀಗ ವೈಶಾಕ್ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ (Complaint) ತಾನು ಕೃಷಿ ತಾಪಂಡ ಮನೆಯಲ್ಲೇ ನೋಡಿದ್ದೇನು ಅನ್ನೋದನ್ನು ಕೂಡ ವಿವರಿಸಿದ್ದಾರೆ. 

ವೈಶಾಕ್ ಪತ್ನಿ ಮೇಘಾ ದೂರು

ಪೊಲೀಸರಿಗೆ ದೂರು ಕೊಟ್ಟ ಮೃತ ಉದ್ಯಮಿ ವೈಶಾಕ್ ಪತ್ನಿ ಮೇಘಾ, ಕಂಪ್ಲೇಟ್​ನಲ್ಲಿ ಕೆಲವು ಅಂಶಗಳನ್ನ ಉಲ್ಲೇಖಿಸಿದ್ದಾರೆ. ನಿನ್ನೆ ರಾತ್ರಿ 11 ಗಂಟೆ ಸುಮಾರಿಗ ವೇಳೆಗೆ ವೈಶಾಕ್ ತಂದೆ, ನಮ್ಮ ಮಾವನವರಿಗೆ ಪೊಲೀಸರು ಕರೆ ಮಾಡಿದ್ರು. ನಿಮ್ಮ ಪುತ್ರ ವೈಶಾಕ್ ಎಲಿಗೆಂಟ್ ಟೆರಸ್ ಅಪಾರ್ಟ್ಮೆಂಟ್ ನ ಫ್ಲಾಟ್ ನಂ. 403 ರಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಮಾಹಿತಿ ನೀಡಿದ್ರು.

ಕೃಷಿ ತಾಪಾಂಡ ಬೆಡ್​ರೂಮ್​ನಲ್ಲಿ ಏನಾಗಿತ್ತು?

ಆರ್ ಆರ್ ನಗರ‌ ಪೊಲೀಸರ ಮಾಹಿತಿ ಆಧರಿಸಿ ಎಲಿಗೆಂಟ್ ಅಪಾರ್ಟ್ಮೆಂಟ್ ಪ್ಲಾಟ್ ಗೆ ತೆರಳಿ ನೋಡಿದ್ವಿ. ಕೃಷಿ ತಾಪಾಂಡ ಫ್ಲಾಟ್ ನ ಕೋಣೆ ಬೆಡ್ ಮೇಲೆ ವೈಶಾಕ್ ಮೃತ ದೇಹ ಅಂಗಾತ ಮಲಗಿದ್ದ ಸ್ಥಿತಿಯಲ್ಲಿತ್ತು. ಪ್ಯಾನಿಗೆ ಸೀರೆಯಿಂದ ನೇಣು ಬಿಗಿದಿದ್ದ, ಅರ್ಧ ಸೀರೆ ತುಂಡಾಗಿತ್ತು. ವೈಶಾಕ್ ಕುತ್ತಿಗೆ ಭಾಗದಲ್ಲಿ ಗುರುತು ಇತ್ತು. ಮೃತದೇಹವನ್ನು ಆರ್ ಆರ್ ನಗರ ಪೊಲೀಸರು ಮರಣೋತ್ತರ ಪರೀಕ್ಷೆಗೆ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ರು ಎಂದು ಮೇಘಾ ದೂರಿನಲ್ಲಿ ತಿಳಿಸಿದ್ದಾರೆ.

ನಿಖರ ಕಾರಣ ಪತ್ತೆ ಹಚ್ಚುವಂತೆ ದೂರು

ವೈಶಾಕ್ ಆತ್ಮಹತ್ಯೆ ಕುರಿತು ನಮಗೆ ಯಾರ ಮೇಲೂ ಅನುಮಾನವಿಲ್ಲ. ಆದ್ರೆ ಆತ್ಮಹತ್ಯೆಗೆ ಶರಣಾಗಿರುವ ಪತಿ ವೈಶಾಕ್ ಮರಣೋತ್ತರ ಪರೀಕ್ಷೆ ನಡೆಸಿ. ಆತ್ಮಹತ್ಯೆಗೆ ನಿಖರ ಕಾರಣ ಪತ್ತೆ ಹಚ್ಚುವಂತೆ ವೈಶಾಕ್ ಪತ್ನಿ ಮೇಘನಾ ದೂರು ನೀಡಿದ್ದಾರೆ. ಪತ್ನಿ ಮೇಘನಾ ದೂರಿನ ಹಿನ್ನಲೆ (UDR) ಅನುಮಾನಸ್ಪಾದ ಸಾವಿನ‌ ಕೇಸ್ ದಾಖಲಾಗಿದೆ.

‘ನಾನು-ನನ್ನ ಗಂಡ ಮಾತು ಬಿಟ್ಟಿದ್ದೆವು’

ನನ್ನ ಹಾಗೂ ನನ್ನ ಪತಿ ಮಧ್ಯೆ ಸಾಕಷ್ಟು ವಿರಸ ಇತ್ತು. ನಮ್ಮಿಬ್ಬರ ಮಧ್ಯೆ ಆಗಾಗ ಜಗಳ ಆಗ್ತಿತ್ತು. ಒಂದು ತಿಂಗಳಿಂದ ನನ್ನ ಗಂಡ ಮಾತಾಡ್ತಿರಲಿಲ್ಲ. ಮೆಸೇಜ್ ಮೂಲಕ 14 ವರ್ಷದ ಮಗನ ಬಗ್ಗೆ ವಿಚಾರಿಸ್ತಿದ್ರು. ಆದ್ರೆ ನನ್ನ ಬಗ್ಗೆ ಏನೂ ಕೇಳ್ತಿಲ್ಲ ಎಂದು ಪತ್ನಿ ದೂರು ಕೊಟ್ಟಿದ್ದಾರೆ.

(ವರದಿ: ಮಂಜುನಾಥ್​, ನ್ಯೂಸ್​18 ಕನ್ನಡ, ಬೆಂಗಳೂರು)

ಕನ್ನಡ ಸುದ್ದಿ/ ನ್ಯೂಸ್/ಮನರಂಜನೆ/

Krishi Thapanda: ವೈಶಾಕ್ ಸೂಸೈಡ್​ ಕೇಸ್​ಗೆ ಬಿಗ್​ ಟ್ವಿಸ್ಟ್​! ಕೃಷಿ ತಾಪಂಡ ಬೆಡ್​ರೂಮ್​​ನಲ್ಲಿ ಉದ್ಯಮಿ ಪತ್ನಿ ನೋಡಿದ್ದೇನು? ದೂರಿನಲ್ಲಿ ಏನಿದೆ?



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports