Last Updated:
Rahul Gandhi: ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಸುಪ್ರೀಂಕೋರ್ಟ್ ವಕೀಲೆಯೊಬ್ಬರು ದೂರು ನೀಡಿದ್ದಾರೆ. ರಾಹುಲ್ ಗಾಂಧಿ ಮನುಸ್ಮೃತಿ ವಿರುದ್ಧ ಟೀಕಿಸಿದ್ದಕ್ಕಾಗಿ ಮುಸ್ಲಿಂ ಸಮುದಾಯದ ಸುಪ್ರೀಂಕೋರ್ಟ್ ವಕೀಲೆ ನಾಜಿಯಾ ಖಾನ್ ಎಂಬುವರು ರಾಹುಲ್ ಗಾಂಧಿ ವಿರುದ್ಧ ಕಂಪ್ಲೇಂಟ್ ಫೈಲ್ ಮಾಡಿದ್ದಾರೆ.
ಘಾಜಿಯಾಬಾದ್, ಉತ್ತರ ಪ್ರದೇಶ: ಕಾಂಗ್ರೆಸ್ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ಸುಪ್ರೀಂಕೋರ್ಟ್ ವಕೀಲೆಯೊಬ್ಬರು (Supreme Court lawyer) ದೂರು ನೀಡಿದ್ದಾರೆ. ರಾಹುಲ್ ಗಾಂಧಿ ಮನುಸ್ಮೃತಿ (Manusmriti) ವಿರುದ್ಧ ಟೀಕಿಸಿದ್ದಕ್ಕಾಗಿ ಮುಸ್ಲಿಂ ಸಮುದಾಯದ ಸುಪ್ರೀಂಕೋರ್ಟ್ ವಕೀಲೆ ನಾಜಿಯಾ ಖಾನ್ ಎಂಬುವರು ರಾಹುಲ್ ಗಾಂಧಿ ವಿರುದ್ಧ ಕಂಪ್ಲೇಂಟ್ ಫೈಲ್ ಮಾಡಿದ್ದಾರೆ. ‘ಛತ್ರೋನ್ ಕಿ ಗೂಂಜ್’ (Chatron Ki Goonj) ಎಂಬ ಕಾರ್ಯಕ್ರಮದಲ್ಲಿ ಮನುಸ್ಮೃತಿಯ ಬಗ್ಗೆ ಟೀಕಿಸಿ ರಾಹುಲ್ ಗಾಂಧಿ ಭಾಷಣ ಮಾಡಿದ್ದರು.














