Last Updated:
ಸಿಸಿ ಟಿ20 ವಿಶ್ವಕಪ್ 2026ರ ಗೆಲುವಿನ ನಂತರ, ಸೂರ್ಯಕುಮಾರ್ ಯಾದವ್ ಅವರನ್ನು ಟಿ20 ನಾಯಕತ್ವದಿಂದ ತೆಗೆದುಹಾಕಲಾಯಿತು ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಹೊಸ ನಾಯಕರನ್ನಾಗಿ ನೇಮಿಸಲಾಯಿತು . ಈ ಬಗ್ಗೆ ಸೂರ್ಯ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ 2026 ರಲ್ಲಿ (ICC T20 World Cup) ತಂಡವನ್ನು ಗೆಲುವಿನತ್ತ ಕೊಂಡೊಯ್ದರೂ, ಟೀಮ್ ಇಂಡಿಯಾದ ಟಿ20 ನಾಯಕನ ಜವಾಬ್ದಾರಿಯಿಂದ ತೆಗೆದುಹಾಕಲ್ಪಟ್ಟ ಬಗ್ಗೆ ಸೂರ್ಯಕುಮಾರ್ (Surya Kumar Yadav) ಯಾದವ್ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ ನಿರ್ಧಾರವನ್ನು ತಾವು ಊಹಿಸಿರಲಿಲ್ಲ ಮತ್ತು ಇನ್ನೂ ಎರಡು ವರ್ಷಗಳ ಕಾಲ ನಾಯಕನಾಗಿ ಮುಂದುವರಿಯುವ ನಿರೀಕ್ಷೆಯಿತ್ತು. ಏಕೆಂದರೆ ನನ್ನ ನಾಯಕತ್ವದಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಸರಣಿಯನ್ನು ಸೋತಿಲ್ಲ ಎಂದು ಸೂರ್ಯಕುಮಾರ್ ಹೇಳಿದ್ದಾರೆ.














