Last Updated:
ಪುಷ್ಪ-2 ಚಿತ್ರಕ್ಕೆ ಎರಡು ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಆಗಿವೆ. ಆದರೆ, ಅಲ್ಲು ಅರ್ಜುನ್ ಫ್ಯಾನ್ಸ್‌ಗೆ ನಿರಾಶೆ ಆಗಿದೆ. ಯಾಕೆ ಅನ್ನೋದು ಇಲ್ಲಿದೆ ಓದಿ.
ಪುಷ್ಟ-2 ಚಿತ್ರಕ್ಕೆ (Pushpa-2 Movie) ಎರಡು ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಆಗಿವೆ. 72ನೇ ರಾಷ್ಟ್ರೀಯ ಚಲನ ಚಿತ್ರ ಪ್ರಶಸ್ತಿಗಳು ಜುಲೈ-18 ರಂದು ಘೋಷಣೆ ಆಗಿವೆ. ಇದರಲ್ಲಿ ಪುಷ್ಪ-2 ಚಿತ್ರಕ್ಕೆ (Pushpa-2 Movie) ಎರಡು ವಿಭಾಗದಲ್ಲಿ ಪ್ರಶಸ್ತಿ ಘೋಷಣೆ ಆಗಿದೆ. ಅತ್ಯುತ್ತಮ ಮೂಲ ಚಿತ್ರಕತೆ ವಿಭಾಗದಲ್ಲಿ ಅವಾರ್ಡ್ ಅನೌನ್ಸ್ (Award Announced) ಆಗಿದೆ. ಚಿತ್ರದ ಅತ್ಯುತ್ತಮ ವಸ್ತವಿನ್ಯಾಸದ ವಿಚಾರದಲ್ಲೂ ಈ ಚಿತ್ರಕ್ಕೆ ಪ್ರಶಸ್ತಿ ಬಂದಿದೆ. ಈ ಎರಡು ಪ್ರಶಸ್ತಿಯ (Two Award) ಇನ್ನಷ್ಟು ವಿವರ ಇಲ್ಲಿದೆ ಓದಿ.
ಪುಷ್ಪ-2 ಚಿತ್ರಕ್ಕೆ ಎರಡು ಪ್ರಶಸ್ತಿ
(ಚಿತ್ರ ಕೃಪೆ: ಸುಕುಮಾರ್ ಇನ್‌ಸ್ಟಾಗ್ರಾಮ್)
ಆದರೆ, ಇದು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. 1,642 ರಿಂದ 1,800 ಕೋಟಿ ಬಾಚಿಕೊಂಡಿದೆ. ಹಾಗೆ ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಅಭಿನಯವನ್ನು ಜನ ಮೆಚ್ಚಿಕೊಂಡರು.
ಈ ಚಿತ್ರದ ಅಭಿನಯಕ್ಕೆ ಅಲ್ಲು ಅರ್ಜುನ್ ಅವರಿಗೆ ರಾಷ್ಟ್ರೀಯ ಪ್ರಶಸ್ತಿ ಘೋಷಣೆ ಆಗುತ್ತದೆ ಅನ್ನುವ ಅಂದಾಜಿತ್ತು. ಆದರೆ, ಈ ಚಿತ್ರದ ಮೂಲ ಚಿತ್ರಕತೆಗೆ ಅವಾರ್ಡ್ ಬಂದಿದೆ.
ಅತ್ಯುತ್ತಮ ಓರಿಜಿನಲ್ ಚಿತ್ರಕತೆ ವಿಭಾಗದಲ್ಲಿಯೇ ಡೈರೆಕ್ಟರ್ ಸುಕುಮಾರ್ ಅವರಿಗೆ ಈ ಅವಾರ್ಡ್ ಬಂದಿದೆ. ಚಿತ್ರಕ್ಕೆ ಇವರೇ ಉತ್ತಮ ಚಿತ್ರಕತೆ ಮಾಡಿದ್ದಾರೆ.
ಪುಷ್ಪ-2 ಚಿತ್ರದ ವಸ್ತ್ರ ವಿನ್ಯಾಸಕರಿಗೆ ರಾಷ್ಟ್ರೀಯ ಅವಾರ್ಡ್ ಬಂದಿದೆ. ಚಿತ್ರದಲ್ಲಿ ಬರುವ ಗಂಗಮ್ಮ ಜಾತ್ರೆಯ ಸನ್ನಿವೇಶದ ವಸ್ತ್ರ ವಿನ್ಯಾಸಕ್ಕಾಗಿಯೇ ದೀಪಾಲಿ ನೂರ್ ಹಾಗೂ ಶೀತಲ್ ಶರ್ಮಾ ಅವರಿಗೆ ಜಂಟಿಯಾಗಿಯೇ ಈ ಅವಾರ್ಡ್ ಅನೌನ್ಸ್ ಆಗಿದೆ.
ಪುಷ್-2 ಚಿತ್ರದಲ್ಲಿ ಅಲ್ಲು ಅರ್ಜುನ್
ಹಾಗೆ ಇದೇ ಚಿತ್ರದ ಪಾತ್ರಗಳ ಪ್ರಾದೇಶಿಕ ವಿಶೇಷ ಉಡುಗೆಗಾಗಿಯೂ ಈ ಪ್ರಶಸ್ತಿ ಘೋಷಣೆ ಆಗಿದೆ. ಪುಷ್ಪ-2 ಚಿತ್ರ ಈಗಾಗಲೇ ಹೇಳಿದಂತೆ ಬಾಕ್ಸ್ ಆಫೀಸ್ ಅಲ್ಲಿ ಭಾರೀ ಹವಾ ಕ್ರಿಯೇಟ್ ಮಾಡಿದೆ. ಚಿತ್ರ ಬಂದು ಎರಡು ವರ್ಷ ಆಗಿದೆ.
ಆದರೆ, ಈ ಚಿತ್ರದ ಟಾಕ್ ನಿಂತಿಲ್ಲ ಬಿಡಿ. ಡೈರೆಕ್ಟರ್ ಸುಕುಮಾರ್ ಆ ರೀತಿನೇ ಈ ಚಿತ್ರ ಮಾಡಿದ್ದಾರೆ. ಪುಷ್ಪ ಒನ್ ಚಿತ್ರ ಒಂದು ರೀತಿ ಹವಾ ಕ್ರಿಯೇಟ್ ಮಾಡಿತ್ತು. ಪುಷ್ಪ-2 ಮತ್ತೊಂದು ರೀತಿ ಕಿಚ್ಚು ಹಚ್ಚಿತ್ತು ನೋಡಿ.
ಪುಷ್-2 ಚಿತ್ರದಲ್ಲಿ ಅಲ್ಲು ಅರ್ಜುನ್ ಅವರಿಗೆ ರಶ್ಮಿಕಾ ಮಂದಣ್ಣ ಜೋಡಿ ಆಗಿದ್ದರು. ಶ್ರೀವಲ್ಲಿ ಅನ್ನುವ ಪಾತ್ರದ ಮೂಲಕವೇ ತೆಲುಗು ಪ್ರೇಕ್ಷಕ ದಿಲ್ ಕದ್ದರು. ಮೊದಲ ಭಾಗದಲ್ಲೂ ಇವರ ಮೋಡಿ ಜಾಸ್ತಿನೇ ಇತ್ತು. ಎರಡನೇ ಭಾಗದ್ಲೂ ಇದು ಮುಂದುವರೆದಿತ್ತು.
ಈ ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತ ನೀಡಿದ್ದಾರೆ. ಇವರ ಸಂಗೀತ ಮೋಡಿ ಜೋರಾಗಿಯೇ ಇತ್ತು ಬಿಡಿ. ಫಹದ್ ಫಾಸಿಲ್.
ಜಗಪತಿ ಬಾಬು, ಸುನಿಲ್, ರಾವ್ ರಮೇಶ್ ಈ ಚಿತ್ರದಲ್ಲ ಅಭಿನಯಿಸಿದ್ದರು. ಈ ಮೂಲಕ ತಮ್ಮದೆ ಛಾಪು ಮೂಡಿಸಿದ್ದರು ಅಂತಲೇ ಹೇಳಬಹುದು.
Bangalore [Bangalore],Bangalore,Karnataka














