Last Updated:
ಪಂಜಾಬ್ ಮತದಾರರ ಪಟ್ಟಿಯಿಂದ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಹೆಸರು ನಾಪತ್ತೆ. ಆಡಳಿತಾತ್ಮಕ ದೋಷವಲ್ಲ, ರಾಜಕೀಯ ದ್ವೇಷ ಎಂದು ಚಡ್ಡಾ ಆರೋಪ.
ಚಂಡೀಗಢ(ಸೆ.03): ಪಂಜಾಬ್ನ ಮತದಾರರ ಪಟ್ಟಿಯಿಂದ ಮರೆಯಾದ ಅದೊಂದು ಹೆಸರು ಸದ್ಯ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಅದು ಬೇರಾರೂ ಅಲ್ಲ ಬಿಜೆಪಿ ರಾಜ್ಯಸಭಾ ಸಂಸದ ರಾಘವ್ ಚಡ್ಡಾ. ಪಂಜಾಬ್ನಲ್ಲಿ ವಿಶೇಷ ತೀವ್ರ ಪರಿಷ್ಕರಣೆ (SIR) ಅಡಿಯಲ್ಲಿ ನೀಡಲಾದ ಕರಡು ಮತದಾರರ ಪಟ್ಟಿಯಲ್ಲಿ ಚಡ್ಡಾ ಅವರ ಹೆಸರು ಕಾಣೆಯಾಗಿದೆ. ಚುನಾವಣಾ ಆಯೋಗದ ದಾಖಲೆಗಳಲ್ಲಿ ಅವರ ಹೆಸರನ್ನು “ಶಾಶ್ವತವಾಗಿ ಸ್ಥಳಾಂತರಗೊಂಡ” ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ.














