Puneeth Rajkumar Movies: ಒಟಿಟಿಯಲ್ಲಿರೋ ಅಪ್ಪು ಸಿನಿಮಾಗಳಿವು! ಯಾವಾಗ ಬೇಕಾದ್ರೂ ನೋಡ್ಬಹುದು, ಎಲ್ಲಿ ಸ್ಟ್ರೀಮಿಂಗ್? | | ACTPnews

Puneeth Rajkumar Movies in amazon prime video


ಗಂಧದ ಗುಡಿ ಸಿನಿಮಾ

ಗಂಧದ ಗುಡಿ ಸಿನಿಮಾ ಚಿಕ್ಕ ಚಿತ್ರವೇ ಆಗಿದೆ. ಆದರೆ, ಈ ಒಂದು ಚಿತ್ರ ಪುನೀತ್ ಅವರ ಕೊನೆಯ ಸಿನಿಮಾ ಅನ್ನೋದು ಅಷ್ಟೆ ಸತ್ಯ. ಪುನೀತ್ ಹೋದ್ಮೇಲೆ ಈ ಚಿತ್ರ ಬಂದಿದೆ.
ಗಂಧದ ಗುಡಿ ಎಷ್ಟು ನಿಮಿಷದ ಸಿನಿಮಾ (ಚಿತ್ರ ಕೃಪೆ: ಅಶ್ವಿನಿ ಪುನೀತ್ ರಾಜ್‌ಕುಮಾರ್ ಇನ್‌ಸ್ಟಾಗ್ರಾಮ್)

ಈ ಚಿತ್ರದ ಮೇಲೆ ಪುನೀತ್ ತುಂಬಾನೆ ಕೆಲಸ ಮಾಡಿದ್ದರು. ಕರ್ನಾಟಕದ ಕಾಡು ಮೇಡು ಅಲೆದಿದ್ದರು. ವೈಲ್ಡ್ ಲೈಫ್ ಫೋಟೋಗ್ರಾಫರ್ ಅಮೋಘ ವರ್ಷ ಇಲ್ಲಿ ಪುನೀತ್ ಅವರ ಜೊತೆಗೆ ಇದ್ದರು. ಇವರ ಈ ಚಿತ್ರ ಇದೀಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿದೆ. ಇಲ್ಲಿವರೆಗೂ ನೋಡದೇ ಇರೋದು ಇಲ್ಲಿ ಈ ಚಿತ್ರ ವೀಕ್ಷಿಸಬಹದು.

ಗಂಧದ ಗುಡಿ ಎಷ್ಟು ನಿಮಿಷದ ಸಿನಿಮಾ

ಪುನೀತ್ ಅವರ ಈ ಒಂದು ಕೊನೆಯ ಚಿತ್ರ ತುಂಬಾನೆ ದೊಡ್ಡ ಚಿತ್ರವೇನು ಅಲ್ಲ, 1 ಗಂಟೆ 38 ನಿಮಿಷದ ಚಿತ್ರ ಇದಾಗಿದೆ. ಥಿಯೇಟರ್ ಅಲ್ಲಿ ಈ ಚಿತ್ರ ಪುನೀತ್ ಮೊದಲ ಪುಣ್ಯ ಸ್ಮರಣೆ ಹಿಂದಿನ ದಿನ ರಿಲೀಸ್ ಆಗಿತ್ತು.

ಅಂದ್ರೆ ಅಕ್ಟೊಬರ್‌-28, 2022 ರಂದು ಈ ಚಿತ್ರ ರಿಲೀಸ್ ಆಗಿತ್ತು. ಥಿಯೇಟರ್‌ಗೆ ಬಂದ್ಮೇಲೆ ಈ ಸಿನಿಮಾ ಅಮೆಜಾನ್ ಪ್ರೈಮ್‌ಗೆ ಬಂದಿದೆ. ಇಂದಿಗೂ ಈ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸಿಗುತ್ತದೆ.

ಚಕ್ರವ್ಯೂಹ ಸಿನಿಮಾ

ಪುನೀತ್ ಅಭಿನಯದ ಚಕ್ರವ್ಯೂಹ ಚಿತ್ರವೂ ಅಮೆಜಾನ್ ಪ್ರೈಮ್ ಅಲ್ಲಿದೆ. ಆದರೆ, ಕನ್ನಡದ ವರ್ಶನ್ ಇಲ್ಲಿ ಸಿಗೋದಿಲ್ಲ. ಬದಲಾಗಿ ತೆಲುಗು ಭಾಷೆಗೆ ಡಬ್ ಆಗಿರೋ ಚಿತ್ರವೇ ಇಲ್ಲಿ ದೊರೆಯುತ್ತದೆ.

Puneeth Rajkumar Movies in amazon prime video

ಗಂಧದ ಗುಡಿ ಸಿನಿಮಾ

ಅಂದ್ಹಾಗೆ ಈ ಚಿತ್ರಕ್ಕೆ ತೆಲುಗು ಭಾಷೆಯಲ್ಲಿ ಸಿವಿಲ್ ಎಂಜಿನಿಯರ್ ಅಂತಲೇ ಈ ಚಿತ್ರಕ್ಕೆ ಹೆಸರಿದೆ. ಈ ಚಿತ್ರವನ್ನ ಎಂ.ಸರವಣನ್ ಡೈರೆಕ್ಷನ್ ಮಾಡಿದ್ದಾರೆ.

ಈ ಚಿತ್ರದಲ್ಲಿ ತಮಿಳು ಆ್ಯಕ್ಟರ್ ಅರುಣ್ ವಿಜಯ್ ನಟಿಸಿದ್ದಾರೆ. ರಚಿತಾ ರಾಮ್ ಈ ಚಿತ್ರದಲ್ಲಿ ಪುನೀತ್‌ಗೆ ಜೋಡಿ ಆಗಿದ್ದಾರೆ. ಏಪ್ರಿಲ್-29,2016 ರಂದು ಈ ಚಿತ್ರ ತೆರೆಗೆ ಬಂದಿತ್ತು. ಇದೀಗ ಅಮೆಜಾನ್ ಓಟಿಟಿಯಲ್ಲಿ ಇದು ಲಭ್ಯವಿದೆ.

ಅಪ್ಪು ‘ಅಜಯ್’ ಸಿನಿಮಾ

ಪುನೀತ್ ಅಭಿನಯದ ಅಜಯ್ ಚಿತ್ರವೂ ಅಮೆಜಾನ್ ಅಲ್ಲಿದೆ. ಆದರೆ, ಇಲ್ಲಿ ಹಿಂದಿ ಡಬ್ ಸಿನಿಮಾನೇ ಸಿಗುತ್ತದೆ. ಇದಕ್ಕೆ ಜಬರ್ದಸ್ತ್ ತೇವರ್ ಅಂತಲೇ ಹೆಸರಿದೆ.

ಈ ಚಿತ್ರ 2006 ಮೇ-4 ರಂದು ರಿಲೀಸ್ ಆಗಿತ್ತು. ಮೆಹರ್ ರಮೇಶ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು. ಅನುರಾಧಾ ಮೆಹ್ತಾ ಅವರು ಈ ಚಿತ್ರದಲ್ಲಿ ಅಪ್ಪುಗೆ ಜೋಡಿ ಆಗಿದ್ದರು. ಪ್ರಕಾಶ್ ರಾಜ್ ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲೂ ಇದೆ.

Puneeth Rajkumar Movies in amazon prime video

ಅಪ್ಪು ‘ಅಜಯ್’ ಸಿನಿಮಾ
ಅಪ್ಪು ನಿರ್ಮಾಣದ ಚಿತ್ರಗಳು

ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಸಂಸ್ಥೆಯಿಂದ ಕವಲುದಾರಿ ಚಿತ್ರ ನಿರ್ಮಾಣಗೊಂಡಿತ್ತು. ನಟ ರಿಷಿ ಹಾಗೂ ಅನಂತ್ ನಾಗ್ ಈ ಚಿತ್ರದಲ್ಲಿದ್ದರು.

ಇವರ ಈ ಚಿತ್ರವನ್ನ ಹೇಮಂತ್ ರಾವ್ ಡೈರೆಕ್ಷನ್ ಮಾಡಿದ್ದರು. ಏಪ್ರಿಲ್-12,2019 ರಂದು ಈ ಚಿತ್ರ ರಿಲೀಸ್ ಆಗಿತ್ತು. ಇದು ಅಮೆಜಾನ್ ಪ್ರೈಮ್ ವಿಡಿಯೋದಲ್ಲೂ ಇದೆ.

ಮಾಯಾಬಜಾರ್ ಸಿನಿಮಾ

ಪುನೀತ್ ನಿರ್ಮಾಣದ ಮಾಯಾಬಜಾರ್ ಚಿತ್ರವೂ ಇದೇ ಅಮೆಜಾನ್ ಪ್ರೈಮ್ ಅಲ್ಲಿದೆ. ಈ ಚಿತ್ರದಲ್ಲಿ ವಸಿಷ್ಠ ಸಿಂಹ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ, ಸುಧಾ ರಾಣಿ ಹೀಗೆ ಇನ್ನು ಹಲವು ಕಲಾವಿದರು ನಟಿಸಿದ್ದಾರೆ.

ರಾಧಾಕೃಷ್ಣ ರೆಡ್ಡಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಫೆಬ್ರವರಿ-22,2020 ರಂದು ಈ ಚಿತ್ರ ತೆರೆ ಕಂಡಿತ್ತು. ಪುನೀತ್ ಚಿತ್ರ ಪ್ರೇಮಿಗಳು ಈ ಎಲ್ಲ ಸಿನಿಮಾಗಳನ್ನ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಇಂದಿಗೂ ನೋಡಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed