Last Updated:
ಪ್ರಿಯಾಂಕಾ ಉಪೇಂದ್ರ ತುಂಬಾನೆ ಚೆನ್ನಾಗಿ ಕಾಣಿಸುತ್ತಿದ್ದಾರೆ. ಕಾನ್ಸ್‌ನ ಸಮುದ್ರ ತೀರದಲ್ಲಿ ತೆಗೆದುಕೊಂಡ ಈ ಫೋಟೋಗಳು ಚೆನ್ನಾಗಿ ಬಂದಿವೆ. ಕೆಂಪು ಗೌನ್ ತೊಟ್ಟ ಇವರ ಈ ಫೋಟೋಗಳ ಒಂದು ಗ್ಯಾಲರಿ ಸ್ಟೋರಿ ಇಲ್ಲಿದೆ ನೋಡಿ.
ಪ್ರಿಯಾಂಕಾ ಉಪೇಂದ್ರ ಸದ್ಯ ಫ್ರಾನ್ಸ್ ಅಲ್ಲಿದ್ದಾರೆ. ಇಲ್ಲಿಯ ಕರಾವಳಿ ತೀರ ಫ್ರೆಂಚ್ ರಿವೇರಿಯಾ ಪ್ರದೇಶದಲ್ಲಿಯೇ ಇದ್ದಾರೆ. ಮೊನ್ನೆಯಿಂದಲೇ ಇಲ್ಲಿ 79 ನೇ ಕಾನ್ಸ್ ಫಿಲ್ಮ್ ಫೆಸ್ಟಿವಲ್ ನಡೀತಿದೆ. ಇಲ್ಲಿ ಪ್ರಿಯಾಂಕಾ ಅವರ ಸೆಪ್ಟೆಂಬರ್-21 ಚಿತ್ರವೂ ಪ್ರದರ್ಶನ ಆಗಿದೆ. (ಚಿತ್ರ ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್‌ಸ್ಟಾಗ್ರಾಮ್)
ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ಉಪೇಂದ್ರ ಅವರು ಫ್ರಾನ್ಸ್‌ಗೆ ಬಂದಿದ್ದಾರೆ. ಇಲ್ಲಿಯ ರೆಡ್ ಕಾರ್ಪೆಟ್ ಮೇಲೆ ಕೆಂಪು ಗೌನ್ ತೊಟ್ಟು ವಾಕ್ ಕೂಡ ಮಾಡಿದ್ದಾರೆ. ಇದರ ನಡುವೆ ಪ್ರಿಯಾಂಕಾ ಉಪೇಂದ್ರ ಅವರು ಸಮುದ್ರ ತೀರದಲ್ಲೂ ಒಂದಷ್ಟು ಫೋಟೋಗಳನ್ನ ತೆಗೆಸಿಕೊಂಡಿದ್ದಾರೆ. (ಚಿತ್ರ ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್‌ಸ್ಟಾಗ್ರಾಮ್)
ಪ್ರಿಯಾಂಕಾ ಉಪೇಂದ್ರ ಅವರು ಇಲ್ಲಿ ಪರ್ಪಲ್ ಗೌನ್ ತೊಟ್ಟು ಕಾಣಿಸಿಕೊಂಡಿದ್ದು ಇದೆ. ಹಾಗೆ ಸಮುದ್ರ ತೀರದಲ್ಲಿ ತೆಗೆಸಿಕೊಂಡ ಫೋಟೋದಲ್ಲಿ ಕೆಂಪು ಬಣ್ಣದ ಚೆಂದದ ಗೌನ್ ತೊಟ್ಟಿದ್ದಾರೆ. ಇದು ಅಷ್ಟೆ ಚೆನ್ನಾಗಿದೆ. ಪ್ರಿಯಾಂಕಾ ಉಪೇಂದ್ರ ಅವರಿಗೂ ಇದು ಚೆನ್ನಾಗಿ ಕಾಣಿಸುತ್ತಿದೆ. (ಚಿತ್ರ ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್‌ಸ್ಟಾಗ್ರಾಮ್)
ಪ್ರಿಯಾಂಕಾ ಉಪೇಂದ್ರ ಅವರು ಸಮುದ್ರತೀರದಲ್ಲಿ ತುಂಬಾನೆ ಚೆನ್ನಾಗಿ ಪೋಸ್ ಕೊಟ್ಟಿದ್ದಾರೆ. ಪ್ರತಿ ಪೋಸ್ ಕೂಡ ಆಕರ್ಷಕವಾಗಿಯೇ ಇದೆ. ಈ ಒಂದು ಸಮುದ್ರತೀರದಲ್ಲಿ ಪ್ರಿಯಾಂಕಾ ಉಪೇಂದ್ರ ಸಖತ್ ಆಗಿಯೇ ಮಿಂಚುತ್ತಿದ್ದಾರೆ. (ಚಿತ್ರ ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್‌ಸ್ಟಾಗ್ರಾಮ್)
ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಈ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಒಂದು ಸಾಲು ಕೂಡ ಬರೆದಿದ್ದಾರೆ. ಅದು ಈ ರೀತಿ ಇದೆ. J’taime The breathtakingly beautiful French Riviera! (ಚಿತ್ರ ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್‌ಸ್ಟಾಗ್ರಾಮ್)
ಇದರ ಅರ್ಥ ತುಂಬಾನೆ ಚೆನ್ನಾಗಿದೆ. Je t’aime ಇದು ಫ್ರೆಂಚ್ ಪದವಾಗಿದೆ. “ನಾನು ನಿನ್ನ ಪ್ರೀತಿಸುತ್ತೇನೆ” ಅಂತಲೇ ಇದರ ಅರ್ಥ ಬರುತ್ತದೆ. ಮುಂದಿನ ಪದಗಳ ಅರ್ಥ ಏನು ಅನ್ನೋದು ಹೀಗಿದೆ. ಫ್ರೆಂಚ್ ರಿವೇರಿಯಾ ತುಂಬಾನೆ ಸುಂದರವಾದ ಸ್ಥಳವಾಗಿದೆ. ಇದನ್ನ ನಾನು ತುಂಬಾನೆ ಪ್ರೀತಿಸುತ್ತೇನೆ ಅಂತ ಒಟ್ಟು ಅರ್ಥ ಬರುತ್ತದೆ. (ಚಿತ್ರ ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್‌ಸ್ಟಾಗ್ರಾಮ್)
ಪ್ರಿಯಾಂಕಾ ಉಪೇಂದ್ರ ತಮ್ಮ ಫೋಟೋಗಳನ್ನ ಜೊತೆಗೆ ಇದನ್ನೆ ಬರೆದಿದ್ದಾರೆ. ಇವರಿಗೆ ಫ್ರೆಂಚ್ ರಿವೇರಿಯಾ ಕರಾವಳಿ ಪ್ರದೇಶ ತುಂಬಾನೆ ಇಷ್ಟ ಆಗಿದೆ. ಆ ಅನುಭವವನ್ನ ಈ ರೀತಿ ಬರೆದುಕೊಂಡಿದ್ದಾರೆ. (ಚಿತ್ರ ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್‌ಸ್ಟಾಗ್ರಾಮ್)
ಪ್ರಿಯಾಂಕಾ ಉಪೇಂದ್ರ ಅಭಿನಯದ ಸೆಪ್ಟೆಂಬರ್-21 ಚಿತ್ರ ಕಾನ್ಸ್ ಅಲ್ಲಿ ಪ್ರದರ್ಶನ ಆಗಿದೆ. ಮೇ-15 ರಂದು ಇಲ್ಲಿ ಈ ಚಿತ್ರವನ್ನ ತೋರಿಸಲಾಗಿದೆ. ಈ ಚಿತ್ರ ಮೇ-22 ರಂದು ತೆರೆಗೂ ಬರ್ತಿದೆ. ಕರೆನ್ ಕ್ಷಿತಿ ಸುವರ್ಣ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. (ಚಿತ್ರ ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್‌ಸ್ಟಾಗ್ರಾಮ್)
ಕಾನ್ಸ್ ಅಲ್ಲಿ ಡೈರೆಕ್ಟರ್ ಕರೆನ್ ಕ್ಷಿತಿ ಸುವರ್ಣ ಹಾಗೂ ಪ್ರಿಯಾಂಕಾ ಉಪೇಂದ್ರ ಒಟ್ಟಿಗೆ ರೆಡ್ ಕಾರ್ಪೆಟ್ ಮೇಲೆ ವಾಕ್ ಮಾಡಿದ್ದಾರೆ. ಕರೆನ್ ಕ್ಷಿತಿ ಸುವರ್ಣ ಕಪ್ಪು ಬಣ್ಣದ ಡ್ರೆಸ್ ತೊಟ್ಟಿದ್ದರು. ಪ್ರಿಯಾಂಕಾ ಅವರು ಪರ್ಪಲ್ ಕಲರ್ ಗೌನ್ ತೊಟ್ಟು ಮಿಂಚಿದ್ದರು. (ಚಿತ್ರ ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್‌ಸ್ಟಾಗ್ರಾಮ್)
ಪ್ರಿಯಾಂಕಾ ಉಪೇಂದ್ರ ಮತ್ತು ಕರೆನ್ ಕ್ಷಿತಿ ಸುವರ್ಣ ಅವರು ಕಾನ್ಸ್ ಅಲ್ಲಿ ಸಾಕಷ್ಟು ಓಡಾಡಿದ್ದಾರೆ. ಇಲ್ಲಿಯ ಅನುಭವವನ್ನು ಹಂಚಿಕೊಂಡಿದ್ದಾರೆ. ಹಾಗೆ ಮಾತನಾಡಿರೋ ವಿಡಿಯೋವನ್ನು ಪ್ರಿಯಾಂಕಾ ಉಪೇಂದ್ರ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿ ಶೇರ್ ಮಾಡಿದ್ದಾರೆ. (ಚಿತ್ರ ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್‌ಸ್ಟಾಗ್ರಾಮ್)
ಒಟ್ಟಾರೆ, ಕಾನ್ಸ್ ಚಿತ್ರೋತ್ಸವದ ಖುಷಿಯನ್ನ ಫೋಟೋ ಮತ್ತು ವಿಡಿಯೋ ಮೂಲಕ ಕ್ಯಾಪ್ಚರ್ ಮಾಡಿದ್ದಾರೆ. ಅದನ್ನ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲೂ ಹಂಚಿಕೊಂಡಿದ್ದಾರೆ ಅಂತ ಹೇಳಬಹುದು. (ಚಿತ್ರ ಕೃಪೆ: ಪ್ರಿಯಾಂಕಾ ಉಪೇಂದ್ರ ಇನ್‌ಸ್ಟಾಗ್ರಾಮ್)
Location :
Bangalore [Bangalore],Bangalore,Karnataka
First Published :
May 17, 2026 11:29 AM IST













