Last Updated:
ಕಿಚ್ಚ ಸುದೀಪ್ ಅವರಿಗೆ ಮ್ಯಾಂಗೋ ಪಚ್ಚ ಚಿತ್ರದಲ್ಲಿ ಸ್ಪೆಷಲ್ ಗಿಫ್ಟ್ ಇದೆ. ಈ ಗಿಫ್ಟ್ ಐಡಿಯಾ ಬೇರೆ ಯಾರದ್ದೋ ಅಲ್ಲ. ಪ್ರಿಯಾ ಸುದೀಪ್ ಅವರೇ ಈ ಪ್ಲಾನ್ ಮಾಡಿದ್ದಾರೆ. ಅದೇನು ಅನ್ನೋದರ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ಮ್ಯಾಂಗೋ ಪಚ್ಚ ಚಿತ್ರದ (Mango Pachcha Movie) ಪೋಸ್ಟರ್ ನೋಡಿದರೆ ಸುದೀಪ್ ಅವರನ್ನ ನೋಡಿದ್ಹಾಗೆ ಆಗುತ್ತದೆ. ಸಿನಿಮಾದ ಕೆಲವು ದೃಶ್ಯ ನೋಡಿದರೂ ಆ ಫೀಲ್ ಬರುತ್ತದೆ. ಆದರೆ, ಇದಕ್ಕೆ ಕಾರಣವೂ ಇದೆ. ಅದೇನು ಅನ್ನೋದನ್ನ ಪ್ರಿಯಾ ಸುದೀಪ್ (Priya Sudeepa) ಹೇಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ (Kichcha Sudeepa) ಅವರಿಗೆ ಒಂದು ಸ್ಪೆಷಲ್ ಗಿಫ್ಟ್ (Special Gift) ಕೂಡ ಕೊಡ್ತಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮ್ಯಾಂಗೋ ಪಚ್ಚ… (ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್ಸ್ಟಾಗ್ರಾಮ್)
ಆದರೆ, ಇದನ್ನ ಬೇಕು ಅಂತಲೇ ಮಾಡಿರೋದು ನೋಡಿ. ಈ ಐಡಿಯಾವನ್ನ ಕೊಟ್ಟವರು ಪ್ರಿಯಾ ಸುದೀಪ್ ಅವರೇ ಆಗಿದ್ದಾರೆ. ಇವರಿಗೆ ಕಿಚ್ಚನಿಗೆ ಒಂದು ಸ್ಪೆಷಲ್ ಗಿಫ್ಟ್ ಕೊಡ್ಬೇಕು ಅನ್ನೋದೇ ಆಗಿತ್ತು. ಅದಕ್ಕೇನೆ ಕತೆ ಬಿಟ್ಟು ಹೊರಗೆ ಹೋಗದೆ, ಈ ಕತೆಯಲ್ಲಿಯೇ ಹುಚ್ಚನನ್ನ ತರಬೇಕು ಅನ್ನೋ ಆಸೆ ಇತ್ತು. ಅದು ಇಲ್ಲಿ ಸಾಧ್ಯವಾಗಿದೆ.
ಮ್ಯಾಂಗೋ ಪಚ್ಚ ಚಿತ್ರದ ಟೀಸರ್ ಅಲ್ಲೂ ಸುದೀಪ್ ಪ್ರತಿಬಿಂಬ ಇದೆ. ಅದೇನು ಅಂದ್ರೆ, ಸಂಚಿತ್ ನಡೆಯುವ ಸ್ಟೈಲ್, ಸಿಗರೇಟ್ ಸೇದುವ ಶೈಲಿ, ಇವೆಲ್ಲ ಸುದೀಪ್ ಅವರನ್ನ ನೆನಪಿಸುತ್ತವೆ. ಇದೆಲ್ಲ ಹುಚ್ಚ ಚಿತ್ರದ ಆ ಕಿಚ್ಚನನ್ನ ಕಣ್ಮುಂದೆ ತರುತ್ತವೆ.
ಹೀಗೆ ಇರೋದಕ್ಕೆ ಕಾರಣವೂ ಪ್ರಿಯಾ ಸುದೀಪ್ ಅವರೇ ಅಂತ ಹೇಳಬ್ಬೇಕು. ಇಡೀ ಚಿತ್ರದಲ್ಲಿ ಇನ್ನೂ ಒಂದು ಸರ್ಪ್ರೈಸ್ ಕೂಡ ಇದೆ. ಅದೇನು ಅನ್ನೋದು ರಿವೀಲ್ ಆಗಿಲ್ಲ. ಅದನ್ನ ಸುದೀಪ್ ಥಿಯೇಟರ್ ಅಲ್ಲಿ ನೋಡಿಯೇ ಖುಷಿಪಡ್ಬೇಕು ಅನ್ನೋದನ್ನು ಪ್ರಿಯಾ ಸುದೀಪ್ ಹೇಳಿಕೊಂಡಿದ್ದಾರೆ.
ಹುಚ್ಚ ಚಿತ್ರ ಒಂದು ಕ್ಲಾಸ್ ಸಿನಿಮಾ ಆಗಿದೆ. ಇದನ್ನ ರೀಮೇಕ್ ಮಾಡ್ಬಾರದು. ಇದೊಂದೇ ಅಲ್ಲ. ಬೇರೆ ಕ್ಲಾಸಿಕ್ ಚಿತ್ರಗಳನ್ನ ರೀಮೇಕ್ ಮಾಡ್ಬಾರದು. ಅವು ಹೇಗಿಯೋ ಹಾಗೆ ಇರಲು ಬಿಡ್ಬೇಕು.
ಹುಚ್ಚ ಚಿತ್ರದ ಸ್ಟೈಲ್
ಆದರೆ, ಒಂದು ವೇಳೆ ಸಂಚಿತ್ ಸಂಜೀವ್ ರೀಮೇಕ್ ಮಾಡೋದೇ ಆಗಿದ್ದರೆ, ತನ್ನ ಮೊದಲ ಚಿತ್ರದಲ್ಲಿಯೇ ಈ ಪ್ರಯತ್ನ ಮಾಡ್ಬೇಕಿತ್ತು. ಅಂದ್ರೆ, ಮ್ಯಾಂಗೋ ಪಚ್ಚ ಮುಂಚೇನೆ ಮಾಡಬೇಕಿತ್ತು ಅನ್ನೋ ಅಭಿಪ್ರಾಯವನ್ನು ಪ್ರಿಯಾ ಸುದೀಪ್ ವ್ಯಕ್ತಪಡಿಸಿದ್ದಾರೆ.
ಸಂಚಿತ್ ಸಂಜೀವ್ ಅವರನ್ನ ಕಿಚ್ಚ ಜೂನಿಯರ್ ಅಂತ ಹೇಳಿದ್ಯಾಕೆ? ಇದಕ್ಕೆ ಕಾರಣವೇನು? ಯಾಕೆ ಇದನ್ನ ಇಡಲಾಗಿದೆ. ಈ ಪ್ರಶ್ನೆಗಳನ್ನು ಬರುತ್ತವೆ.
ಅಳಿಯ ಸಂಚಿತ್ ಸಂಜೀವ್ ಚಿತ್ರವನ್ನ ಕಿಚ್ಚ ಸುದೀಪ್ ಫಸ್ಟ್ ಡೇನೇ ನೋಡ್ತಾರೆ. ಬೆಂಗಳೂರಿನ ಸಂತೋಷ್ ಥಿಯೇಟರ್ಗೆ ಸುದೀಪ್ ಬೆಳಗ್ಗೆ 8.15ಕ್ಕೇನೆ ಬರ್ತಾರೆ. ಬಂದು ಚಿತ್ರ ವೀಕ್ಷಿಸುತ್ತಾರೆ.
ಈ ವಿಷಯವನ್ನ ಚಿತ್ರ ತಂಡವೇ ಅಧಿಕೃತವಾಗಿಯೇ ಹೇಳಿಕೊಂಡಿದೆ. ಜೂನ್-5 ರಂದು ಈ ಚಿತ್ರ ಎಲ್ಲೆಡೆ ರಿಲೀಸ್ ಆಗುತ್ತಿದೆ. ಸಂಚಿತ್ ಸಂಜೀವ್ ಚಿತ್ರ ಜೀವನದ ಈ ಮೊದಲ ಚಿತ್ರ ಒಂದು ಹಂತಕ್ಕೆ ನಿರೀಕ್ಷೆನೂ ಹುಟ್ಟುಹಾಕಿದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka













