Last Updated:
ರಾಜಕುಮಾರ್ ಸಿನಿಮಾದ ನಾಯಕಿ ಪ್ರಿಯಾ ಆನಂದ್ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಬೆಂಗಳೂರಿನ ನರ್ತಕಿ ಥಿಯೇಟರ್ ಆವರಣದಲ್ಲಿ ಮಸ್ತ್ ಕುಣಿದು ಖುಷಿಪಟ್ಟಿದ್ದಾರೆ. ಯಾಕೆ ಅನ್ನೋದು ಇಲ್ಲಿದೆ ಓದಿ.
ರಾಜಕುಮಾರ್ ಚಿತ್ರದ (Rajkumar Movie) ನಾಯಕಿ ಪ್ರಿಯಾ ಆನಂದ್ (Priya Anand) ಸಖತ್ ಡ್ಯಾನ್ಸ್ ಮಾಡಿದ್ದಾರೆ. ಬೆಂಗಳೂರಿನ ಥಿಯೇಟರ್ ಎದುರಿಗೆ ಮನಸಾರೆ ಡ್ಯಾನ್ಸ್ ಮಾಡಿದ್ದಾರೆ. ಈ ಡಾನ್ಸ್ಗೆ ಕಾರಣವು ಇದೆ. ಅದರ ಹೆಸರು ಬಲರಾಮನ ದಿನಗಳು ಅಂತಲೇ ಹೇಳ್ಬೇಕು. ಈ ಚಿತ್ರದ ರಿಲೀಸ್ (Movie Release) ಆದ ಮೊದಲ ದಿನವೇ ಪ್ರಿಯಾ ಆನಂದ್ ಥಿಯೇಟರ್ಗೆ ಬಂದಿದ್ದಾರೆ. ಜನರ ಜೊತೆಗೆ ಸಿನಿಮಾ ನೋಡಿದ್ದಾರೆ. ಅದಕ್ಕೂ ಮೊದಲು ನರ್ತಕಿ ಥಿಯೇಟರ್ (Narthaki Theater) ಮುಂದೆ ಅಭಿಮಾನಿಗಳ ಜೊತೆಗೆ ಪ್ರಿಯಾ ಆನಂದ್ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈ ಕ್ಷಣದ ಇನ್ನಷ್ಟು ವಿವರ ಇಲ್ಲಿದೆ ಓದಿ.
ನರ್ತಕಿ ಥಿಯೇಟರ್ ಅಲ್ಲಿ ರಿಲೀಸ್
ಆದರೆ, ಬಲರಾಮನ ದಿನಗಳು ಚಿತ್ರದಲ್ಲಿ ಇವರು ರೇವತಿ ಅನ್ನುವ ಪಾತ್ರ ಮಾಡಿದ್ದಾರೆ. ಇಲ್ಲಿ ಇವರು ಹಾಗೆ ಬಂದು ಹೀಗೆ ಹೋವು ರೋಲ್ ಏನು ಮಾಡಿಲ್ಲ. ಬದಲಾಗಿ ಅಭಿನಯಿಸೋಕೆ ಜಾಗ ಇರೋ ರೋಲ್ ಅನ್ನೆ ಮಾಡಿದ್ದಾರೆ. ಇದಕ್ಕೆ ಒಳ್ಳೆ ರೆಸ್ಪಾನ್ಸ್ ಕೂಡ ಬರ್ತಿದೆ.
ನರ್ತಕಿ ಥಿಯೇಟರ್ ಅಲ್ಲಿ ಬಲರಾಮನ ದಿನಗಳು ಚಿತ್ರ ರಿಲೀಸ್ ಆಗಿದೆ. ಈ ಥಿಯೇಟರ್ ಎದುರಿಗೆ ಹಬ್ಬದ ವಾತಾವರಣವೇ ನಿರ್ಮಾಣ ಆಗಿತ್ತು. ಎಲ್ಲರ ಚಿತ್ರಗಳಂತೆ ಈ ಚಿತ್ರದ ರಿಲೀಸ್ ಸಂಭ್ರಮದಿಂದಲೇ ಕೂಡಿತ್ತು.
ಚಿತ್ರ ನೋಡಲು ಜನ ಕೂಡ ಆಗಮಿಸಿದ್ದರು. ವಿನೋದ್ ಪ್ರಭಾಕರ್ ಅವರ ಫ್ಯಾನ್ಸ್ ಕೂಡ ಇದ್ದರು. ಎಲ್ಲರ ಸಡಗರದಲ್ಲಿ ಪ್ರಿಯಾ ಆನಂದ್ ಭಾಗಿ ಆಗಿದ್ದರು. ಜಾನಪದ ಕಲಾವಿದರು ಹಾಗೂ ತಮಟೆ ಸದ್ದಿಗೆ ಪ್ರಿಯಾ ಆನಂದ್ ಡ್ಯಾನ್ಸ್ ಮಾಡಿದರು.
ಈ ಚಿತ್ರದ ನಿರ್ಮಾಪಕಿ ಪದ್ಮಾವತಿ ಜಯರಾಮ್ ಅವರು ತುಂಬಾನೆ ಸಂತೋಷದಲ್ಲಿಯೇ ಇದ್ದರು. ಪ್ರಿಯಾ ಆನಂದ್ ಅವರು ಥಿಯೇಟರ್ಗೆ ಬಂದಿದ್ದರು. ಬಂದು ಡ್ಯಾನ್ಸ್ ಮಾಡಿರೋದು ಇವರಿಗೆ ತುಂಬಾನೆ ಖುಷಿಕೊಟ್ಟಿತ್ತು.
ಪ್ರಿಯಾ ಆನಂದ್ ಸಖತ್ ಡ್ಯಾನ್ಸ್
ಇದನ್ನ ನೋಡಿದ ಪದ್ಮಾವತಿ ಅವರೂ ಪ್ರಿಯಾ ಆನಂದ್ ಜೊತೆಗೆ ಡ್ಯಾನ್ಸ್ ಮಾಡಿದರು. ಪ್ರಿಯಾ ಆನಂದ್ ಅವರನ್ನ ತಬ್ಬಿಕೊಂಡು ಖುಷಿಟಪ್ಟರು ನೋಡಿ.
ಬಲರಾಮನ ದಿನಗಳು ಚಿತ್ರ 15 ಕೋಟಿ ಬಜೆಟ್ನ ಚಿತ್ರವೇ ಆಗಿದೆ. ಇಷ್ಟೊಂದು ಕೋಟಿ ಬಜೆಟ್ನ ಈ ಚಿತ್ರವನ್ನ ಜನ ಚೆನ್ನಾಗಿ ತೆಗೆದುಕೊಳ್ಳುತ್ತಿದ್ದಾರೆ ಅನ್ನೋದನ್ನ ಸ್ವತಃ ವಿನೋದ್ ಪ್ರಭಾಕರ್ ಹೇಳಿಕೊಂಡಿದ್ದಾರೆ.
ಆದರೆ, ಬಲರಾಮನ ದಿನಗಳು ಈಗ ರಿಲೀಸ್ ಆಗುತ್ತದೆ. ಆದರೆ, ಇದು ಆ ದಿನಗಳು ಚಿತ್ರದ ಪಾರ್ಟ್-2 ಅಲ್ಲ, ಬದಲಾಗಿ ಈ ಚಿತ್ರ ಆ ದಿನಗಳ ಮತ್ತೊಂದು ಅಧ್ಯಾಯ ಅಂತ ಹೇಳಿಕೊಂಡಿದ್ದರು.
ಹಾಗೆ ಈ ಚಿತ್ರವನ್ನ ನೋಡಿದವರು ಒಳ್ಳೆ ಅಭಿಪ್ರಾಯ ಕೊಟ್ಟಿದ್ದಾರೆ. ಎಲ್ಲೂ ಈ ಚಿತ್ರ ಬೋರ್ ಆಗೋದಿಲ್ಲ. ಸ್ಟೋರಿ ಲೈನ್ ಚೆನ್ನಾಗಿದೆ ಅಂತಲೇ ಹೇಳಿದ್ದಾರೆ. ಒಟ್ಟಾರೆ, ಬಲರಾಮನ ದಿನಗಳು ಚಿತ್ರ ಎಲ್ಲರಿಗೂ ಇಷ್ಟ ಆಗುವ ರೀತಿ ಇದೆ ಅನ್ನುವ ಅಭಿಪ್ರಾಯ ಬರ್ತಿವೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 26, 2026 11:01 PM IST













