Prithvi Shaw: ನಿಶ್ಚಿತಾರ್ಥವಾದ 4 ತಿಂಗಳಲ್ಲೇ ಮುರಿದು ಬಿತ್ತಾ ಟೀಮ್ ಇಂಡಿಯಾ ಕ್ರಿಕೆಟರ್ ಮದುವೆ? ಭಾವಿ ಪತ್ನಿಯ ಚೀಟಿಂಗ್ ಪೋಸ್ಟ್ ವೈರಲ್ | ಕ್ರೀಡಾ ಸುದ್ದಿ | ACTPnews

ಪೃಥ್ವಿ ಶಾ-ಆಕೃತಿ ಅಗರವಾಲ್


Last Updated:

ಟೀಮ್ ಇಂಡಿಯಾ ಕ್ರಿಕೆಟಿಗ ಪೃಥ್ವಿ ಶಾ ಕರಿಯರ್‌ನೊಂದಿಗೆ ಈಗ ವೈಯುಕ್ತಿಕ ಬದುಕಿನಲ್ಲಿ ಕೋಲಾಹಲ ಎದ್ದಿದೆ. ಪೃಥ್ವಿ ಶಾ ಮದುವೆಗೆ ಸಂಬಂಧಿಸಿದ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಪೃಥ್ವಿ ಶಾ-ಆಕೃತಿ ಅಗರವಾಲ್
ಪೃಥ್ವಿ ಶಾ-ಆಕೃತಿ ಅಗರವಾಲ್

ಭಾರತ (India) ಕ್ರಿಕೆಟ್ (Cricket) ತಂಡದ ಸ್ಟಾರ್ ಬ್ಯಾಟರ್ ಪೃಥ್ವಿ ಶಾ (Prithvi Shaw) ಬಗ್ಗೆ ಈಗ ಬಹಳ ಚರ್ಚೆ ನಡೆಯುತ್ತಿದೆ. ಆದರೆ ಈ ಬಾರಿ ಅವರ ಕರಿಯರ್ (Career) ಬಗ್ಗೆ ಅಲ್ಲ, ವೈಯಕ್ತಿಕ ಜೀವನದ ಬಗ್ಗೆ ಚರ್ಚೆ ಆಗುತ್ತಿದೆ. ಪೃಥ್ವಿ ಶಾ ಮಾರ್ಚ್ 2026ರಲ್ಲಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದರು. ಇದಾದ ನಾಲ್ಕು ತಿಂಗಳ ಅವಧಿಯಲ್ಲಿಯೇ ಅವರ ದಾಂಪತ್ಯ ಜೀವನದಲ್ಲಿ ಕೋಲಾಹಲ ಎದ್ದಿದೆ ಎಂಬ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ಪೃಥ್ವಿ ಶಾ ಮತ್ತು ಅವರ ಭಾವಿ ಪತ್ನಿ ಆಕೃತಿ ಅಗರ್ವಾಲ್ ನಡುವಿನ ಸಂಬಂಧದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಹಳ ಚರ್ಚೆ ನಡೆಯುತ್ತಿದೆ. ಈ ವರ್ಷ ಮಾರ್ಚ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ನಡುವೆ ಎಲ್ಲವೂ ಸರಿಯಾಗಿ ನಡೆಯುತ್ತಿಲ್ಲ. ಆಕೃತಿ ಅಗರ್ವಾಲ್ ಅವರ ಇತ್ತೀಚಿನ ಸೋಶಿಯಲ್ ಮೀಡಿಯಾ ಪೋಸ್ಟ್ ಈ ಸಂಬಂಧ ಮುರಿದು ಬಿದ್ದಿರುವ ಬಗ್ಗೆ ಸುಳಿವು ಕೊಟ್ಟಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ರೂಮರ್ ನಿಜನಾ?

ಆಕೃತಿ ಅಗರ್ವಾಲ್ ಅವರು ಪೃಥ್ವಿ ಶಾ ಅವರೊಂದಿಗಿನ ಎಲ್ಲಾ ಚಿತ್ರಗಳನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದುಹಾಕಿದ ನಂತರ, ಇಬ್ಬರ ನಡುವಿನ ಬಿರುಕು ಬಗ್ಗೆ ವದಂತಿಗಳು ಹೆಚ್ಚಾದವು. ಇದಲ್ಲದೆ, ಮಾರ್ಚ್‌ನಲ್ಲಿ ನಡೆದ ಅವರ ಸುಂದರ ಮತ್ತು ಸ್ಮರಣೀಯ ನಿಶ್ಚಿತಾರ್ಥದ ಫೋಟೋಗಳನ್ನು ಪ್ರೊಫೈಲ್‌ನಿಂದ ಸಂಪೂರ್ಣವಾಗಿ ಡೀಲಿಟ್ ಮಾಡಿದ್ದಾರೆ. ಆದರೆ ನಿಶ್ಚಿತಾರ್ಥದ ಫೋಟೋ ಹಾಗೇ ಉಳಿಸಿಕೊಂಡಿದ್ದಾರೆ. ಮತ್ತೊಂದೆಡೆ ಪೃಥ್ವಿ ಶಾ ಖಾತೆಯಲ್ಲಿ ಆಕೃತಿ ಜೊತೆಗಿನ ಹಲವು ಫೋಟೋಗಳಿವೆ.

ಏನಿದು ಚೀಟಿಂಗ್ ಪೋಸ್ಟ್?

ಇನ್‌ಸ್ಟಾಗ್ರಾಮ್​​ನಲ್ಲಿ ಸ್ಟೋರಿ ಪೋಸ್ಟ್ ಮಾಡಿದ ಆಕೃತಿ ಅಗರ್ವಾಲ್ ಅಷ್ಟೇ ಬೇಗನೆ ಡಿಲೀಟ್ ಮಾಡಿದ್ದಾರೆ. ಆದರೆ, ಅವರ ಸ್ಟೋರಿ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗುತ್ತಿವೆ. ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಆಕೃತಿ ಅಗರ್ವಾಲ್, ನಾನು ಹಲವು ಬಾರಿ ಮೋಸ ಹೋದೆ. ಆದರೂ ಒಂದು ಮಾತು ಹೇಳಲಿಲ್ಲ. ಇದೀಗ ಒಂದು ಹೆಜ್ಜೆ ಮುಂದೆ ಹೋದ ಬಳಿಕ ಇನ್ನೂ ನನಗೆ ನಂಬಲಾಗುತ್ತಿಲ್ಲ. ನೀವು ಆತನ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಕೇಳುತ್ತಿರುವ ರೂಮರ್ ನಿಜವೆಂದು ಹೇಳುತ್ತೇನೆ ಎಂದು ಬರೆದುಕೊಂಡಿದ್ದಾರೆ. ಇದಾದ ನಂತರ ಈ ಸಂಪೂರ್ಣ ವಿವಾದದ ಬಗ್ಗೆ ಪೃಥ್ವಿ ಶಾ ಅಥವಾ ಆಕೃತಿ ಇನ್ನೂ ಯಾವುದೇ ಅಧಿಕೃತ ಪತ್ರಿಕಾ ಹೇಳಿಕೆಯನ್ನು ನೀಡಿಲ್ಲ.

ಆಕೃತಿ ಅಗರ್ವಾಲ್ ಯಾರು?

ಪೃಥ್ವಿ ಶಾ ಅವರ ಭಾವಿ ಪತ್ನಿಯಾಗಿ ಸುದ್ದಿಯಲ್ಲಿರುವ ಆಕೃತಿ ಅಗರ್ವಾಲ್, ಫೇಮಸ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮತ್ತು ಮಾಡೆಲ್-ನಟಿ ಆಗಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 31 ಲಕ್ಷ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇದಲ್ಲದೆ, ಅವರು ತೆಲುಗು ಚಿತ್ರ ‘ತ್ರಿಮುಖ’ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ನಟನೆ ಪ್ರಾರಂಭಿಸಿದ್ದಾರೆ.

ಆಕೃತಿ ತನ್ನದೇ ಆದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದಾರೆ. ಅದಕ್ಕೆ ಸಾವಿರಾರು ಸಬ್‌ಸ್ಕ್ರೈಬರ್‌ಗಳಿದ್ದಾರೆ. ಅಲ್ಲಿ ಅವರು ತಮ್ಮ ದೈನಂದಿನ ಜೀವನ, ಫ್ಯಾಷನ್ ಮತ್ತು ಜೀವನಶೈಲಿ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಹಿಂದೆ ಪೃಥ್ವಿ ಮತ್ತು ಆಕೃತಿ ಅನೇಕ ದೊಡ್ಡ ಕಾರ್ಯಕ್ರಮಗಳು ಮತ್ತು ಪಾರ್ಟಿಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ಈ ವಿವಾದ ಭವಿಷ್ಯದಲ್ಲಿ ಯಾವ ಹೊಸ ತಿರುವು ಪಡೆಯುತ್ತದೆ ಎಂಬುದನ್ನು ಅಭಿಮಾನಿಗಳು ಉತ್ಸುಕತೆಯಿಂದ ನೋಡುತ್ತಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

Prithvi Shaw: ನಿಶ್ಚಿತಾರ್ಥವಾದ 4 ತಿಂಗಳಲ್ಲೇ ಮುರಿದು ಬಿತ್ತಾ ಟೀಮ್ ಇಂಡಿಯಾ ಕ್ರಿಕೆಟರ್ ಮದುವೆ? ಭಾವಿ ಪತ್ನಿಯ ಚೀಟಿಂಗ್ ಪೋಸ್ಟ್ ವೈರಲ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed