Premada Oorali Review: ಪ್ರೀತಿಯ ಜೊತೆ ಭಾವನೆಗಳ ಪಯಣ; ‘ಪ್ರೇಮದ ಊರಲಿ’ ಹೇಗಿದೆ? | | ACTPnews

Rangayana Raghu Shree Raam Premada Oorali Movie Review


ಪ್ರೇಮದ ಊರಲಿ…

ಪ್ರೇಮದ ಊರಲಿ ಚಿತ್ರ ನಿಧಾನಕ್ಕೆ ಜನರನ್ನ ಎಳೆಯುತ್ತಿದೆ. ಬಾಯಿಂದ ಬಾಯಿಗೆ ಈ ಚಿತ್ರದ ವಿಷಯ ಹರಡುತ್ತಿದೆ. ಫ್ಯಾಮಿಲಿಗಳು ಥಿಯೇಟರ್‌ಗೆ ಬರ್ತಿವೆ.

ಗಿಡ ನೆಟ್ಟರೆ ಉಸಿರು…

(ಚಿತ್ರ ಕೃಪೆ: ನಾಯಕ ನಟ ಶ್ರೀರಾಮ್ ಇನ್​ಸ್ಟಾಗ್ರಾಮ್)

ಆ ದಿನಗಳಲ್ಲಿ ಸಿನಿಮಾ ನೋಡಿದ ಹಿರಿಯರು ಬರ್ತಿದ್ದಾರೆ. ಥಿಯೇಟರ್ ಹೌಸ್‌ಫುಲ್ ಆಗುತ್ತಿದೆ. ಅಸಲಿಗೆ ಈ ಸಿನಿಮಾದಲ್ಲಿ ಏನಿದೆ ಅನ್ನೋರಿಗೆ ಹೇಳಲಿಕ್ಕೆ ಇದರಲ್ಲಿ ಬಹಳ ವಿಷಯ ಇದೆ.

ಅಪ್ಪನ ಪ್ರೀತಿ…

ಅಪ್ಪನ ನೆರಳಲ್ಲಿ ಬೆಳೆದ ಮಗನ ಕತೆ ಇಲ್ಲಿದೆ. ಸಂತೋಷ್ ಅಪ್ಪನ ಮುದ್ದಿನ ಒಬ್ಬನೇ ಮಗ ನೋಡಿ. ಈತನಿಗಾಗಿ ಅಪ್ಪ ಇನ್ನೊಂದು ಮದುವೆ ಆಗೋದಿಲ್ಲ. ಮನೆಯಲ್ಲಿ ಸೊಸೆ ಇರ್ತಾಳೆ. ವಸಂತ ಅಂತಲೇ ಈಕೆಯೆ ಹೆಸರು. ಪಿಯುಸಿ ಡುಮ್ಕಿ (ಫೇಲ್) ಆಗಿರುತ್ತಾಳೆ.

ಆದರೆ, ಜೀವನ ಅದೆಷ್ಟು ಚೆಂದಗೆ ಸಾಗುತ್ತದೆ ಅನ್ನೋದು ಒಟ್ಟು ಕತೆ ಆಗಿದೆ. ಇದು ಹ್ಯಾಪಿ ಎಂಡಿಂಗ್‌ ಚಿತ್ರವೇ.? ದುಃಖದಲ್ಲಿಯೇ ಇದು ಮುಗಿಯುತ್ತದೆಯೇ? ಇದನ್ನ ಥಿಯೇಟರ್ ಅಲ್ಲಿ ನೋಡಿ ಚೆನ್ನಾಗಿದೆ. ಒಮ್ಮೆ ನೋಡುವ ಸಿನಿಮಾ ಇದಾಗಿದೆ.

ವಸಂತ ಪಾತ್ರಧಾರಿ

ವಸಂತ ಪಾತ್ರವನ್ನ ಸೀರಿಯಲ್ ನಟಿ ರಮಿಕಾ ಶಿವು ಮಾಡಿದ್ದಾರೆ. ಇವರು ಇಲ್ಲಿ ಇಡೀ ಚಿತ್ರದಲ್ಲಿ ಹಲವು ಕಾರಣಕ್ಕೆ ಇಷ್ಟ ಆಗುತ್ತಾರೆ. ಈ ವಸಂತಳ ಉದ್ದನೆಯ ಜಡೆಗೂ ಇಲ್ಲಿ ಕತೆ.

Rangayana Raghu Shree Raam Premada Oorali Movie Review

ಅಪ್ಪನ ಪ್ರೀತಿ…

(ಚಿತ್ರ ಕೃಪೆ: ನಾಯಕ ನಟ ಶ್ರೀರಾಮ್ ಇನ್​ಸ್ಟಾಗ್ರಾಮ್)

ಈ ಕತೆಯ ಎಮೋಷನಲ್ ಆಗಿಯೂ ಟರ್ನ್ ಆಗುತ್ತದೆ. ಕೊನೆಗೆ ಏನ್ ಆಗುತ್ತದೆ ಅನ್ನೋದು ಇಲ್ಲಿ ಹಾರ್ಟ್ ಟಚ್ ಮಾಡುತ್ತದೆ. ಗಿಡ ನೆಡಬೇಕು ಅನ್ನೋದನ್ನ ಇಲ್ಲಿ ತುಂಬಾನೆ ಚೆನ್ನಾಗಿ ಹೇಳಿದ್ದಾರೆ.

ಗಿಡ ನೆಟ್ಟರೆ ಉಸಿರು…

ಸಹೋದರಿ ಮತ್ತು ಹೆಂಡ್ತಿ ಗೋರಿಗೆ ನಾಗಣ್ಣ (ರಂಗಾಯಣ ರಘು) ಗೋರಿ ಕಟ್ಟಿಸೋದಿಲ್ಲ. ಮಾವಿನ ಗಿಡ ನೆಡುತ್ತಾರೆ. ಗೋರಿ ಕಟ್ಟಿದರೆ ಏನು? ಗಿಡ ನೆಟ್ಟರೆ ಉಸಿರು ಬರುತ್ತದೆ ಅನ್ನುವ ಇವರ ಮಾತು ಪರಿಸರ ಜಾಗೃತಿ ಮೂಡಿಸುತ್ತದೆ.

ಮಳೆ ಇಲ್ಲಿ ಅಭಿವೃದ್ಧಿ ಸಂಕೇತವಲ್ಲ. ಮನದಲ್ಲಿ ಏಳೋ ನೋವಿನ ಸಂಕೇತವಾಗಿದೆ. ಮಳೆ ನಿಂತ್ಮೇಲೆ ಎಲ್ಲವೂ ಹ್ಯಾಪಿ ಹ್ಯಾಪಿ ಅನ್ನುವ ಸತ್ಯವು ತಿಳಿಯುತ್ತದೆ.

ಶ್ರೀರಾಮ್- ತಪಸ್ವಿನಿ ಪೂಣಚ್ಚ

ನಟ ಶ್ರೀರಾಮ್ ಇಲ್ಲಿ ಸಂತೋಷ್ ಹೆಸರಿನ ಪಾತ್ರ ಮಾಡಿದ್ದಾರೆ. ಹಳ್ಳಿ ಹೈದನ ಪಾತ್ರವೇ ಇದಾಗಿದೆ. ಈ ಸಂತೋಷ್ ಜೊತೆಗೆ ಇರೋ ಸ್ನೇಹಿತರು ಚೆನ್ನಾಗಿ ಮಾಡಿದ್ದಾರೆ.

ರುಕ್ಮಿಣಿ ಪಾತ್ರದಲ್ಲಿ ತಪಸ್ವಿನಿ ಪೂಣಚ್ಚ ನಟಿಸಿದ್ದಾರೆ. ಇವರ ಅಭಿನಯ ಒಂದು ಹಂತಕ್ಕೆ ಇದೆ. ಆದರೆ, ಇಲ್ಲಿ ರಮಿಕಾ ಶಿವು ಹೆಚ್ಚು ಸ್ಕೋರ್ ಮಾಡಿದ್ದಾರೆ.

ರಂಗಾಯಣ ರಘು, ರಮಿಕಾ ಶಿವು, ಅಜ್ಜಿ ಪಾತ್ರಧಾರಿ ಇಳಾ ವಿಟ್ಲ ಇಲ್ಲಿ ಹೆಚ್ಚು ಗಮನ ಸೆಳೆಯುತ್ತಾರೆ. ಡೈರೆಕ್ಟರ್ ಮನೋಜ್ ಕುಮಾರ್ ಒಳ್ಳೆ ಚಿತ್ರ ಮಾಡಿದ್ದಾರೆ. ಸರಳ, ಭಾವನಾತ್ಮಕ ಹಾಗೂ ಫೀಲ್ ಗುಡ್ ಇದಾಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed