Last Updated:
ಪ್ರಶಾಂತ್ ನೀಲ್ ಮುಂದಿನ ಚಿತ್ರ ಯಾವುದು? ಇದು ಕೂಡ ಡಾರ್ಕ್ ಕಲರ್ ಪ್ಯಾಲೆಟ್ ಅಲ್ಲಿಯೇ ಇರುತ್ತಾ? ಇಲ್ಲವೆ ಕಲರ್ ಕಲರ್ ಆಗಿರುತ್ತಾ? ಈ ಪ್ರಶ್ನೆಗೆ ಡೈರೆಕ್ಟರ್ ಪ್ರಶಾಂತ್ ನೀಲ್ ಇಂಟ್ರಸ್ಟಿಂಗ್ ಉತ್ತರ ಕೊಟ್ಟಿದ್ದಾರೆ. ಅದರ ವಿವರ ಇಲ್ಲಿದೆ ಓದಿ.
ಪ್ರಶಾಂತ್ ನೀಲ್ (Prashanth Neel) ಬ್ಯುಸಿ ಇದ್ದಾರೆ. ಡ್ರ್ಯಾಗನ್ ಹ್ಯಾಂಗೋವರ್ ಅಲ್ಲಿಯೇ ಇದ್ದಾರೆ. ಯಾವುದೇ ಕ್ಷಣದಲ್ಲೂ ಇವರ ಯೋಚನೆ ಇರೋದು ಕೇವಲ ಡ್ರ್ಯಾಗನ್ ಚಿತ್ರದ (Dragon Movie) ಬಗ್ಗೇನೆ ಆಗಿರುತ್ತದೆ. ಇದನ್ನ ಸ್ವತಃ ಪ್ರಶಾಂತ್ ನೀಲ್ ಹೇಳಿರೋದು ಇದೆ. ಸಲಾರ್ ಸೆಟ್ ಅಲ್ಲಿದ್ರೂ ಸರಿಯೇ. ಇವರ ಯೋಚನೆ ಡ್ರ್ಯಾಗನ್ ಚಿತ್ರದೇ (Dragon Movie) ಇರುತ್ತದೆ. ಅಷ್ಟೊಂದು ಆಳವಾಗಿಯೇ ಈ ಚಿತ್ರದ ವಿಚಾರದಲ್ಲಿ ಇಳಿದು ಹೋಗಿದ್ದಾರೆ. ಹೆರಾಯಿನ್ ವಿಷಯದ ಆ ದಿನಗಳ ಕತೆ ಹೇಳ್ತಾನೆ, ಈ ಚಿತ್ರದಲ್ಲಿ ದೇಶ ಭಕ್ತಿಯೊಂದರ ಕತೆ (Patriotic story) ಹೇಳುತ್ತಿದ್ದಾರೆ. ಈ ಸಿನಿಮಾ ಆದ್ಮೇಲೆ ಮುಂದೇನು? ಈ ಪ್ರಶ್ನೆಗೂ ಇವರ ಬಳಿ ಉತ್ತರ ಇದೆ. ಆದರೆ ಒಪ್ಪಿರೋ ಅಷ್ಟು ಸಿನಿಮಾಗಳು ಮುಗಿಯಬೇಕಿದೆ. ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಪೌರಾಣಿಕ ಚಿತ್ರ ಮಾಡುವೆ
(ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್‌ಸ್ಟಾಗ್ರಾಮ್)
ಈ ಎಲ್ಲ ಚಿತ್ರಗಳು ಮುಗಿದ್ಮೇಲೆ ಪ್ರಶಾಂತ್ ನೀಲ್ ಯಾವ ಚಿತ್ರ ಮಾಡುತ್ತಾರೆ. ಇವರ ಮುಂದಿನ ಜಾನ್ರಾ ಯಾವುದು ಇರುತ್ತದೆ. ಇಷ್ಟೆಲ್ಲ ಚಿತ್ರ ಆದ್ಮೇಲೂ ಡಾರ್ಕ್ ಕಲರ್ ಪಾಲೆಟ್ ಅಲ್ಲಿಯೇ ಸಿನಿಮಾ ಮಾಡುತ್ತಾರಾ? ಈ ಪ್ರಶ್ನೆಗೂ ಪ್ರಶಾಂತ್ ನೀಲ್ ಉತ್ತರ ಕೊಟ್ಟಿದ್ದಾರೆ.
ಪ್ರಶಾಂತ್ ನೀಲ್ ಅವರು ಡಾರ್ಕ್ ಕಲರ್ ಬಿಟ್ಟು ಹೊರ ಬರಬೇಕು ಅಂತ ತೀರ್ಮಾನಿಸಿದ್ದಾರೆ. ಅದಕ್ಕೇನೆ Galatta Plus ಸಂದರ್ಶನದಲ್ಲಿ ಕೇಳಿದ ಪ್ರಶ್ನೆಗೆ ಕಲರ್ ಕಲರ್ ಸಿನಿಮಾ ಮಾಡ್ತೀನಿ ಇನ್ಮುಂದೆ ಅಂತ ಹೇಳಿಕೊಂಡಿದ್ದಾರೆ.
ಆದರೆ, ಈ ಕಲರ್ ಫಾರ್ಮ್ಯಾಟ್ ಅಲ್ಲಿ ಯಾವ ರೀತಿಯ ಕತೆ ಹೇಳ್ತಾರೆ ಅನ್ನುವ ಕುತೂಹಲ ಇದೆ. ಈ ಕುತೂಹಲಕ್ಕೂ ಪ್ರಶಾಂತ್ ನೀಲ್ ತೆರೆ ಎಳೆದಿದ್ದಾರೆ.
ಪ್ರಶಾಂತ್ ನೀಲ್ ಮುಂದಿನ ಚಿತ್ರ ಪೌರಾಣಿಕ ಚಿತ್ರವೇ ಆಗಿರುತ್ತದೆ. ಈಗಾಗಲೇ ಪೌರಾಣಿಕ ಕತೆಯನ್ನು ಕೂಡ ಬರೆದಿದ್ದಾರೆ. ಆದರೆ, ಇದು ಆಗೋಕೆ ಇನ್ನು ಟೈಮ್ ಇದೆ.
ಈಗಾಗಲೇ ಹೇಳಿದಂತೆ ಪ್ರಶಾಂತ್ ನೀಲ್ ತಮ್ಮ ಚಿತ್ರಗಳೆಲ್ಲವನ್ನು ಕಂಪ್ಲೀಟ್ ಮಾಡ್ಬೇಕು. ಅದಾದ್ಮೇಲೆ ಕಲರ್ ಕಲರ್ ಸಿನಿಮಾ ಮಾಡ್ತಾರೆ. ಅದರಲ್ಲಿ ಪೌರಾಣಿಕ ಕತೆಯ ಚಿತ್ರ ಇರುತ್ತಾ ಅನ್ನುವ ಕುತೂಹಲ ಈಗಲೇ ಹೆಚ್ಚಾಗಿದೆ.
ಮುಂದಿನ ಚಿತ್ರ ಕಲರ್ ಕಲರ್
(ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್‌ಸ್ಟಾಗ್ರಾಮ್)
ಡ್ರ್ಯಾಗನ್ ಸಿನಿಮಾ ದೇಶ ಭಕ್ತಿಯ ಚಿತ್ರವೆ ಆಗಿದೆ. ಇಲ್ಲಿವರೆಗೂ ಬರೆದೇ ಇರೋ ದೇಶ ಭಕ್ತಿಯ ಚಿತ್ರ ಇದಾಗಿದೆ. ಹಾಗಂತ ಸ್ವತಃ ಪ್ರಶಾತ್ ಹೇಳಿಕೊಂಡಿದ್ದಾರೆ.
ಡ್ರ್ಯಾಗನ್ ಚಿತ್ರದ ಪ್ರತಿ ಪಾತ್ರಕ್ಕೂ ಮಹತ್ವ ಕೊಟ್ಟಿದ್ದಾರೆ. ಹಾಗೆ ಬಂದು ಹೀಗೆ ಹೋಗುವ ಪಾತ್ರಗಳು ಇಲ್ಲಿ ಇಲ್ವೇ ಇಲ್ಲ. ಎಲ್ಲ ಪಾತ್ರಗಳಿಗೂ ವಿವರಣೆ ಇದೆ.
ಆ ರೀತಿಯ ಈ ಚಿತ್ರ ಎರಡು ಭಾಗದಲ್ಲಿ ಬರುತ್ತದೆ. 11.07.2027 ರಂದು ಈ ಚಿತ್ರ ತೆರೆಗೆ ಬರುತ್ತದೆ. ಈ ಸಿನಿಮಾ ಆದ್ಮೇಲೆ ಎರಡನೇ ಭಾಗದ ಪ್ಲಾನ್ ಕೂಡ ಇದೆ.
ಇದೆಲ್ಲದರ ಹೊರತಾಗಿ ಪ್ರಶಾಂತ್ ನೀಲ್ ಅವರು ಡ್ರ್ಯಾಗನ್ ಚಿತ್ರದ ಆಳಕ್ಕೆ ಹೋಗಿದ್ದಾರೆ. ಅದೇ ಚಿತ್ರದ ಕತೆಯ ಗುಂಗಿನಲ್ಲಿಯೇ ಇರ್ತಾರೆ. ಸದಾ ಅದನ್ನೆ ಯೋಚನೆ ಕೂಡ ಮಾಡುತ್ತಾರೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka
May 24, 2026 11:18 PM IST













