Mango Mela: ಇಂದಿನಿಂದ ಕಬ್ಬನ್ ಪಾರ್ಕ್‍ನಲ್ಲಿ ಹಣ್ಣುಗಳ ರಾಜನ ಅದ್ಧೂರಿ ದರ್ಬಾರ್, 10 ದಿನಗಳ ಕಾಲ ಮಾವು-ಹಲಸಿನ ಮೇಳ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಮಾವು ಮತ್ತು ಹಲಸಿನ ಹಣ್ಣು ಮೇಳ


Last Updated:

ಬೆಂಗಳೂರು ಕಬ್ಬನ್ ಪಾರ್ಕ್ ನಲ್ಲಿ 10 ದಿನಗಳ ಮಾವು ಹಲಸು ಮೇಳ ಆರಂಭ, ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ರೈತರು ನೇರವಾಗಿ ಮಾರಾಟ, ರಫ್ತು ಗುಣಮಟ್ಟದ ತಳಿಗಳೂ ಲಭ್ಯ.

ಮಾವು ಮತ್ತು ಹಲಸಿನ ಹಣ್ಣು ಮೇಳ
ಮಾವು ಮತ್ತು ಹಲಸಿನ ಹಣ್ಣು ಮೇಳ

ಬೆಂಗಳೂರು: ಮಾವಿನ ಹಣ್ಣು (Mango) ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? ಆದರೆ ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಮಿಶ್ರಿತ ಹಣ್ಣುಗಳನ್ನು ಕಂಡು ನೀವು ಆತಂಕದಲ್ಲಿದ್ದರೆ, ನಿಮಗಾಗಿ ಒಂದು ಅದ್ಭುತ ಅವಕಾಶ ಬಂದಿದೆ. ತೋಟಗಾರಿಕೆ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ಬೆಂಗಳೂರಿನ (Bengaluru) ಕಬ್ಬನ್ ಉದ್ಯಾನವನದಲ್ಲಿ (Cubbon Park) ಇಂದಿನಿಂದ ರಾಜ್ಯ ಮಟ್ಟದ ಮಾವು ಮತ್ತು ಹಲಸು (Jackfruit) ಪ್ರದರ್ಶನ ಹಾಗೂ ಮಾರಾಟ ಮೇಳ ಆರಂಭಗೊಂಡಿದೆ. 10 ದಿನಗಳ (10 Days) ಕಾಲ ಈ ಮೇಳ ನಡೆಯಲಿದೆ.

ಮೇಳದ ವಿಶೇಷತೆ ಏನು?

ಈ ಮೇಳದ ಅತಿ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಇಲ್ಲಿ ಯಾವುದೇ ಕಾರ್ಬೈಡ್ ಅಥವಾ ರಾಸಾಯನಿಕ ಬಳಸಿ ಮಾಗಿಸಿದ ಹಣ್ಣುಗಳಿಲ್ಲ. ರೈತರು ನೈಸರ್ಗಿಕವಾಗಿ ಮಾಗಿಸಿದ ತಾಜಾ ಮಾವು ಮತ್ತು ಹಲಸನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಮಧ್ಯವರ್ತಿಗಳ ಕಾಟವಿಲ್ಲದೆ, ರೈತರಿಗೆ ಉತ್ತಮ ಬೆಲೆ ಸಿಕ್ಕರೆ, ಗ್ರಾಹಕರಿಗೆ ರುಚಿಯಾದ ಹಣ್ಣುಗಳು ನ್ಯಾಯಯುತ ದರದಲ್ಲಿ ಸಿಗಲಿವೆ.
10 ದಿನ ಮೇಳ

ಮೇ 08 ರಿಂದ ಮೇ 17 ರವರೆಗೆ ಒಟ್ಟು 10 ದಿನಗಳು ಕಬ್ಬನ್ ಪಾರ್ಕ್‍ನಲ್ಲಿ ಮಾವು ಮತ್ತು ಹಲಸು ಪ್ರದರ್ಶನ ಹಾಗೂ ಮಾರಾಟ ಮೇಳ ನಡೆಯಲಿದೆ. ಬೆಳಿಗ್ಗೆಯಿಂದಲೇ ಸಾರ್ವಜನಿಕರಿಗೆ ಪ್ರವೇಶಾವಕಾಶವಿದೆ.
ನೋಡಲೇಬೇಕಾದ ಹಣ್ಣುಗಳು

ಈ ಬಾರಿ ಹವಾಮಾನ ವೈಪರೀತ್ಯದಿಂದ ಮಾವು ಸ್ವಲ್ಪ ತಡವಾಗಿದ್ದರೂ, ಮೇಳದಲ್ಲಿ ಚಿಕ್ಕಬಳ್ಳಾಪುರದ ಚಿಂತಾಮಣಿ, ರಾಮನಗರದ ಚನ್ನಪಟ್ಟಣ ಸೇರಿದಂತೆ ರಾಜ್ಯದ ವಿವಿಧ ಭಾಗಗಳ ಉತ್ತಮ ತಳಿಗಳು ಲಭ್ಯವಿವೆ. ವಿಶೇಷವೆಂದರೆ, ಅಮೆರಿಕ ಮತ್ತು ಜರ್ಮನಿಯಂತಹ ದೇಶಗಳಿಗೆ ರಫ್ತಾಗುವ ಗುಣಮಟ್ಟದ ಹಣ್ಣುಗಳನ್ನು ನೀವು ಇಲ್ಲಿ ಕಣ್ತುಂಬಿಕೊಳ್ಳಬಹುದು ಮತ್ತು ಸವಿಯಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed