Last Updated:
ಯಾವ ಧರ್ಮವಿದ್ದರೂ ನಂಬಿಕೆ ಒಂದೇ. ಭಕ್ತಿಗೆ ಜಾತಿ ಅಥವಾ ಧರ್ಮದ ತಡೆಯಿಲ್ಲ ಎಂದು ದಂಪತಿಗಳೊಬ್ಬರು ತೋರಿಸಿದ್ದಾರೆ. ವಿನಾಯಕ ಚತುರ್ಥಿ ಹಬ್ಬದ ಸಮಯದಲ್ಲಿ ಮುಸ್ಲಿಂ ದಂಪತಿ ಎಲ್ಲರ ಗಮನ ಸೆಳೆದಿದ್ದಾರೆ.
ಧರ್ಮ (Religion) ಎಂದರೆ ಮನುಷ್ಯನ ಹೃದಯದಲ್ಲಿ ಇರುವ ನಂಬಿಕೆ(Belief). ಯಾವ ಧರ್ಮ ಎನ್ನುವುದಕ್ಕಿಂತ, ಆ ನಂಬಿಕೆ ನಿಜವಾಗಿದೆಯಾ ಎನ್ನುವುದು ಮುಖ್ಯ. ಆಂಧ್ರಪ್ರದೇಶ(Andhra Pradesh)ದ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮವರಂ(Dharmavaram)ನಲ್ಲಿ ನಡೆದ ಒಂದು ಸಣ್ಣ ಘಟನೆ ಇದನ್ನು ಸ್ಪಷ್ಟವಾಗಿ ತೋರಿಸಿದೆ. ಯಾವ ಧರ್ಮವಿದ್ದರೂ ನಂಬಿಕೆ ಒಂದೇ. ಭಕ್ತಿಗೆ ಜಾತಿ ಅಥವಾ ಧರ್ಮದ ತಡೆಯಿಲ್ಲ ಎಂದು ಮುಸ್ಲಿಂ ದಂಪತಿ (Muslim Couple) ತೋರಿಸಿದ್ದಾರೆ.
ವಿನಾಯಕ ಚತುರ್ಥಿ ಹಬ್ಬದ ಸಮಯದಲ್ಲಿ ಧರ್ಮಾವರಂನ ಪಾರ್ಥಸಾರಥಿ ನಗರದಲ್ಲಿ ಲಡ್ಡು ಹರಾಜಿ ಪ್ರಕ್ರಿಯೆ ಅದ್ದೂರಿಯಾಗಿ ನಡೆಯಿತು. ಇದು ಧಾರ್ಮಿಕ ಸಾಮರಸ್ಯವನ್ನು ಎತ್ತಿ ತೋರಿಸಿದೆ. ಈ ಹರಾಜಿನಲ್ಲಿ ಮುಸ್ಲಿಂ ದಂಪತಿ ಭಾಗವಹಿಸಿದ್ದರು. ಅವರೇ ಚಾಂದನಿ ಮತ್ತು ಮಸ್ತಾನ್ ವಾಲಿ ಎಂಬ ಮುಸ್ಲಿಂ ದಂಪತಿ. ಇವರು ಹರಾಜಿನಲ್ಲಿ ಬರೋಬ್ಬರಿ 1.45 ಲಕ್ಷ ರೂ.ಗಳಿಗೆ ಗಣಪತಿ ಲಡ್ಡನ್ನು ಖರೀದಿಸಿ ಹರಕೆ ತೀರಿಸಿದ್ದಾರೆ.
ಕಳೆದ 16 ವರ್ಷಗಳಿಂದ ನಾವು ಗಣೇಶ ಉತ್ಸವದಲ್ಲಿ ಭಾಗವಹಿಸುತ್ತಿದ್ದೇವೆ. ಸ್ನೇಹಿತರ ಜೊತೆ ಸೇರಿ ಒಂದು ಗಣೇಶ ಮೂರ್ತಿ ಕೂರಿಸಿದ್ದೇವೆ ಎಂದು ಚಾಂದಿನಿ ಹೇಳಿದರು. ತನಗೆ ಗಂಡು ಮಗು ಹುಟ್ಟಿದರೆ, ಹರಾಜಿನಲ್ಲಿ ಎಷ್ಟು ಬೆಲೆ ಆದರೂ ಲಡ್ಡು ತೆಗೆದುಕೊಂಡು ಭಕ್ತರಿಗೆ ಪ್ರಸಾದ ಕೊಡುತ್ತೇನೆ ಎಂದು ಅವರು ಹರಕೆ ಹೊತ್ತಿದ್ದರಂತೆ.
ಧರ್ಮಾವರಂನಲ್ಲಿ ನಡೆದ ಈ ಅಪರೂಪದ ದೃಶ್ಯ ಭಕ್ತಿ ಮತ್ತು ಪ್ರೀತಿ ಮಾತ್ರ ಎಲ್ಲರನ್ನು ಒಂದುಗೂಡಿಸುತ್ತದೆ ಎಂದು ಮತ್ತೆ ತೋರಿಸಿದೆ. ಲಡ್ಡು ಹರಾಜಿನ ನಂತರ ಚಾಂದನಿ ದಂಪತಿಗಳು ಗಣೇಶ ವಿಸರ್ಜನೆ ಮೆರವಣಿಗೆಯಲ್ಲೂ ಭಾಗವಹಿಸಿದರು. ಸದ್ಯ ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ಪಡೆದಿದೆ.














