Prakash Raj: ಪ್ರಕಾಶ್ ರಾಜ್ ಬಳಿ ಇದೆಯಾ 4 ರಾಜ್ಯಗಳ ಐಡೆಂಟಿಟಿ ಕಾರ್ಡ್? | Arrest warrant against actor prakash raj for having 4 identity cards | | ACTPnews

ಪ್ರಕಾಶ್ ರಾಜ್


Last Updated:

Prakash Raj: ನಟ ಪ್ರಕಾಶ್ ರಾಜ್ ಅವರು ಬಂಧನದ ಭೀತಿ ಎದುರಿಸುತ್ತಿದ್ದಾರೆ. ನಾಲ್ಕು ರಾಜ್ಯದಲ್ಲಿ ನಾಲ್ಕು ಐಡಿ ಇಟ್ಟುಕೊಂಡಿದ್ದಾರಾ ನಟ?

ಪ್ರಕಾಶ್ ರಾಜ್
ಪ್ರಕಾಶ್ ರಾಜ್

ಬಹುಭಾಷ ನಟ ಪ್ರಕಾಶ್ ರಾಜ್ ಗೆ (Prakash Raj) ಸಂಕಷ್ಟ  ಶುರುವಾಗಿದೆ. ಪ್ರಕಾಶ್ ರಾಜ್ ಹೆಸರಿನಲ್ಲಿ ನಾಲ್ಕು ಗುರುತಿನ ಚೀಟಿ ಹೊಂದಿರುವ ಆರೋಪ ಕೇಳಿ ಬಂದಿದೆ. ಕರ್ನಾಟಕ, ತಮಿಳುನಾಡು (Tamil Nadu), ತೆಲಂಗಾಣ ಸೇರಿ ನಾಲ್ಕು ಕಡೆಗಳಲ್ಲಿ ಗುರುತಿನ ಚೀಟಿ (Identity Card) ಹೊಂದಿರುವ ಆರೋಪ ಕೇಳಿ ಬಂದಿದ್ದು ವಕೀಲ ದಿಲೀಪ್ ಕುಮಾರ್  (Dileep Kumar) ಅವರಿಂದ ದೂರು ದಾಖಲಾಗಿದೆ.

ಮೊದಲಿಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 2019ರಲ್ಲಿ ದೂರು ದಾಖಲಾಗಿತ್ತು. ನಂತರ ಕ್ರಮ ಕೈಗೊಳ್ಳದ ಕಾರಣ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿತ್ತು. ತದನಂತರ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಎಲ್ಲೂ ಕ್ರಮ ಕೈಗೊಳ್ಳದ ಕಾರಣ ಕೋರ್ಟ್ ಮೊರೆ ಹೋಗಲಾಗಿದೆ.

ನ್ಯಾಯಾಲಯದಿಂದ ಸಮನ್ಸ್ ಜಾರಿ ಮಾಡಲಾಗಿತ್ತು. ಪ್ರಕಾಶ್ ರಾಜ್ ಸಮ್ಮನ್ಸ್ ಗೆ ಪ್ರತಿಕ್ರಯಿಸದ ಕಾರಣ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ. 48 ಎಸಿಜೆಎಂ ಕೋರ್ಟ್ ನಿಂದ ಆದೇಶ ಹೊರಬಿದ್ದಿದೆ.

ಏಪ್ರಿಲ್​​ನಲ್ಲಿ ನಟನ ವಿರುದ್ಧ ಕ್ರಿಮಿನಲ್ ಕೇಸ್

ಒಂದಲ್ಲ ಒಂದು ವಿಷಯಕ್ಕೆ ಸುದ್ದಿ ಆಗುತ್ತಲೇ ಇರುತ್ತಾರೆ. ತಮ್ಮ ಮಾತುಗಳಿಂದ ಒಂದರ ಮೇಲೊಂದು ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಾ ಇದ್ದಾರೆ ಪ್ರಕಾಶ್ ರಾಜ್. ಏಪ್ರಿಲ್​​ನಲ್ಲಿ ರಾಮಾಯಣ ಹಾಗೂ ಶ್ರೀರಾಮಚಂದ್ರ ಹಾಗೆಯೇ ಲಕ್ಷ್ಮಣರ ಕುರಿತು ನೀಡಿದ ಒಂದು ಹೇಳಿಕೆಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು.

ಇದನ್ನೂ ಓದಿ: Gilli Movie: ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ಚಿತ್ರಕ್ಕೆ “ಪಳಾರ್” ಟೈಟಲ್ ಫಿಕ್ಸ್! ಕ್ರೇಜಿ ಸ್ಟಾರ್ ಕ್ಲಾಪ್

ಪ್ರಕಾಶ್ ರಾಜ್ ಕೇರಳದಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ನಟ ಪ್ರಕಾಶ್ ರಾಮಾಯಣದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಶ್ರೀ ರಾಮ ಉತ್ತರ ಭಾರತದವನು ಹಾಗೆಯೇ ರಾವಣ ದಕ್ಷಿಣ ಭಾರತದ ಆದಿವಾಸಿ ಅಷ್ಟೇ ಅಲ್ಲದೆ ಶ್ರೀರಾಮನು ದಕ್ಷಿಣ ಭಾರತದ ಜಮೀನಿಗೆ ನುಗ್ಗಿ ಹಣ್ಣನ್ನು ಕಿತ್ತು ತಿಂದಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಆ ನಂತರ ಪ್ರಕಾಶ್ ರಾಜ್ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಾಗಿತ್ತು.

ವರದಿ: ಗಂಗಾಧರ ವಾಗಟ, ನ್ಯೂಸ್​18 ಕನ್ನಡ ಪ್ರತಿನಿಧಿ, ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed