Last Updated:
ಟಾಕ್ಸಿಕ್ ಚಿತ್ರದ ಬಿಗ್ ಅಪ್‌ಡೇಟ್ ಹೊರ ಬಂದಿದೆ. ಈ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಇದು ಯಾವಾಗ ಅನ್ನೋ ವಿವರ ಇಲ್ಲಿದೆ ಓದಿ.
ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಟಾಕ್ಸಿಕ್ ಚಿತ್ರದ (Toxic Movie) ಬಿಗ್ ಅಪ್‌ಡೇಟ್ ಹೊರ ಬಂದಿದೆ. ಭಾನುವಾರ ಫಾದರ್ಸ್ ಡೇ (Father’s Day) ದಿನವೇ ಈ ಮಾಹಿತಿ ಹೊರ ಬಂದಿದೆ. ಫಾದರ್ ಮತ್ತು ಸನ್ ಕತೆ ಈ ಚಿತ್ರದಲ್ಲಿದೆ. ಗೀತು ಮೋಹನ್‌ದಾಸ್ ಈ ಒಂದು ಕತೆಯನ್ನ ಇಲ್ಲಿ ವಿಭಿನ್ನವಾಗಿಯೇ ಹೇಳುತ್ತಿದ್ದಾರೆ. ಆದರೆ, ಇದು ಗ್ಯಾಂಗ್‌ಸ್ಟರ್ ಚಿತ್ರವೇ ಆಗಿದೆ. ರಾಕಿಂಗ್ ಸ್ಟಾರ್ ಯಶ್ (Rocking Star Yash) ಇಲ್ಲಿ ಅಪ್ಪ ಮತ್ತು ಮಗನಾಗಿಯೇ ನಟಿಸಿದ್ದಾರೆ. ಈಗೀನ ಈ ಬಿಗ್ ಅಪ್‌ಡೇಟ್ ಏನು ಅನ್ನೋದು ಇಲ್ಲಿದೆ ಓದಿ.
ರಾಕಿ ಭಾಯ್ ಚಿತ್ರದ ಬಿಗ್ ಅಪ್‌ಡೇಟ್; ಟಾಕ್ಸಿಕ್ ಚಿತ್ರದ ರಿಲೀಸ್ ಡೇಟ್ ರಿವೀಲ್!
ಈ ನಡುವೆ ಆ ಡೇಟ್ ಯಾವುದು ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಚಿತ್ರ ತಂಡ ಅಧಿಕೃತವಾಗಿಯೇ ಈ ಡೇಟ್ ಹೇಳಿಕೊಂಡಿದೆ. ಆಗಸ್ಟ್-26,2026 ರಂದು ಟಾಕ್ಸಿಕ್ ಚಿತ್ರ ರಿಲೀಸ್ ಆಗುತ್ತಿದೆ.
ಆಗಸ್ಟ್- 26 ರಂದು ಟಾಕ್ಸಿಕ್ ಚಿತ್ರ ರಿಲೀಸ್ ಆಗುತ್ತಿದೆ. ಈ ಡೇಟ್ ಅನ್ನ ಚಿತ್ರ ತಂಡವೇ ಅಧಿಕೃತವಾಗಿ ಹೇಳಿಕೊಂಡಿದೆ. ಫಾದರ್ಸ್ ಡೇ ಹಾಗೂ ಅಂತರಾಷ್ಟ್ರೀಯ ಯೋಗ ದಿನವೇ ಈ ಒಂದು ಡೇಟ್ ಅನೌನ್ಸ್ ಆಗಿದೆ.
ಡೈರೆಕ್ಟರ್ ಗೀತು ಮೋಹನ್‌ದಾಸ್ ಕಲ್ಪನೆಯ ಈ ಚಿತ್ರದಲ್ಲಿ ಗೋವಾ ಕತೆ ಇದೆ. ಇಲ್ಲಿ ಆ ದಿನಗಳ ಸ್ಟೋರಿ ಇದೆ. ನಟಿಮಣಿಯರ ದೊಡ್ಡ ದಂಡೇ ಈ ಚಿತ್ರದಲ್ಲಿದೆ.
ಟಾಕ್ಸಿಕ್ ಚಿತ್ರ ಸಾಮಾನ್ಯ ಸಿನಿಮಾ ಅಲ್ಲ ಬಿಡಿ. ಈ ಚಿತ್ರವನ್ನ ವಿಶ್ವಮಟ್ಟಕ್ಕೇನೆ ಮಾಡಿದ್ದಾರೆ. ಬಹು ಕೋಟಿ ವೆಚ್ಚದ ಈ ಚಿತ್ರ ಕನ್ನಡಿಗರ ಹೆಮ್ಮೆ ಕೂಡ ಆಗಿದೆ.
ಫಾದರ್ಸ್ ಡೇ ದಿನ ರಿವೀಲ್
ಈ ಚಿತ್ರ ಬಂದ್ಮೇಲೆ ಕನ್ನಡ ಚಿತ್ರರಂಗದ ಹೆಸರು ದೊಡ್ಡಮಟ್ಟದಲ್ಲಿಯೇ ಬೆಳಗುತ್ತದೆ. ಆ ರೀತಿನೇ ಯಶ್ ಎಲ್ಲ ತಯಾರಿ ಮಾಡಿಕೊಂಡಿದ್ದಾರೆ.
ರವಿ ಬಸ್ರೂರು ಸಂಗೀತದ ಈ ಚಿತ್ರ ವಿಶ್ವ ಸಿನಿಮಾರಂಗದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡುತ್ತದೆ ಅನ್ನುವ ನಂಬಿಕೆ ಇದೆ. ಕೆವಿಎನ್ ಮತ್ತು ಯಶ್ ಒಟ್ಟಿಗೆ ಸೇರಿಯೇ ಈ ಚಿತ್ರವನ್ನ ನಿರ್ಮಿಸಿದ್ದಾರೆ. ಈ ಚಿತ್ರದ ನಿರೀಕ್ಷೆ ಜಾಸ್ತಿನೇ ಇದೆ ಅಂತ ಹೇಳಬಹುದು.
Bangalore [Bangalore],Bangalore,Karnataka
Jun 21, 2026 11:59 AM IST













