[ad_1]
Last Updated:
ಜೈಲಿನಲ್ಲಿದ್ದಾಗ ಮತ್ತೊಬ್ಬ ಕೈದಿಗೆ ನೀಡಲಾಗಿದ್ದ ಸೌಲಭ್ಯವನ್ನು ಬಳಸಿ ಪ್ರದೋಷ್ ಕರೆ ಮಾಡಿದ್ದ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದರು ಎನ್ನಲಾಗಿದೆ.
ರೇಣುಕಾಸ್ವಾಮಿ ಕೊ* ಪ್ರಕರಣದ (Renukaswamy Case) ವಿಚಾರಣೆ ಬೆಂಗಳೂರಿನ 59ನೇ ಸಿಸಿಎಚ್ ನ್ಯಾಯಾಲಯದಲ್ಲಿ ಮುಂದುವರಿದಿದೆ. ಪ್ರಕರಣದಲ್ಲಿ ಆರೋಪಿ ಆಗಿದ್ದ ಪ್ರದೋಷ್ ಇದೀಗ ಮಾಫಿ ಸಾಕ್ಷಿಯಾಗಿದ್ದು, ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸುವ ಪ್ರಕ್ರಿಯೆಯೂ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ಪ್ರದೋಷ್ಗೆ ಸಂಬಂಧಿಸಿದ ಮತ್ತೊಂದು ವಿಚಾರ ಇದೀಗ ಮುನ್ನೆಲೆಗೆ ಬಂದಿದೆ.
ಜೈಲಿನಲ್ಲಿದ್ದಾಗ ಮತ್ತೊಬ್ಬ ಕೈದಿಗೆ ನೀಡಲಾಗಿದ್ದ ಸೌಲಭ್ಯವನ್ನು ಬಳಸಿ ಪ್ರದೋಷ್ ಕರೆ ಮಾಡಿದ್ದ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದರು ಎನ್ನಲಾಗಿದೆ. ಜೈಲು ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪ್ರದೋಷ್ಗೆ ಕೆಲವು ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಜೈಲು ನಿಯಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಪ್ರದೋಷ್ಗೆ ಕುಟುಂಬಸ್ಥರೊಂದಿಗೆ ದೂರವಾಣಿ ಮೂಲಕ ಸಂಪರ್ಕ ಸಾಧಿಸುವ ಸೌಲಭ್ಯವನ್ನು ಕೂಡ ನಿಲ್ಲಿಸಲಾಗಿತ್ತು. ಇದರಿಂದಾಗಿ ಕುಟುಂಬಸ್ಥರಿಗೆ ಕರೆ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದ ಪ್ರದೋಷ್, ಬಳಿಕ ಮತ್ತೆ ಈ ಸೌಲಭ್ಯ ಕಲ್ಪಿಸುವಂತೆ ಜೈಲು ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.
ಜೈಲು ಮ್ಯಾನ್ಯುಯಲ್ನ Rule 46(4) ಅಡಿಯಲ್ಲಿ ಪ್ರದೋಷ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. ಇದರ ಭಾಗವಾಗಿ ಒಟ್ಟು 30 ದಿನಗಳ ಕಾಲ ಜೈಲಿನ ಕೆಲವು ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳಿಂದ ಮಾಹಿತಿ ನೀಡಲಾಗಿದೆ.
ಪ್ರದೋಷ್ಗೆ ಕುಟುಂಬಸ್ಥರೊಂದಿಗೆ ಸಂಪರ್ಕ ಸಾಧಿಸಲು ಲಭ್ಯವಿದ್ದ Prison Call System ಹಾಗೂ E-Mulakat ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದರ ಜೊತೆಗೆ ಜೈಲಿನ ಕ್ಯಾಂಟೀನ್ ಸೌಲಭ್ಯವನ್ನೂ ಬಂದ್ ಮಾಡಲಾಗಿತ್ತು ಎನ್ನಲಾಗಿದೆ.
ಪ್ರದೋಷ್ ಸಲ್ಲಿಸಿದ್ದ ಅರ್ಜಿಗೆ ಜೈಲು ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದು, ಸೌಲಭ್ಯ ಸ್ಥಗಿತಗೊಳಿಸುವ ಅವಧಿ ಅಕ್ಟೋಬರ್ 12ರಂದು ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಆ ಬಳಿಕ ನಿಯಮಾನುಸಾರ ಅವರಿಗೆ ಮತ್ತೆ Prison Call System, E-Mulakat ಹಾಗೂ ಕ್ಯಾಂಟೀನ್ ಸೌಲಭ್ಯಗಳು ಲಭ್ಯವಾಗಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವರದಿ- ಮಾದೇಶ್, ಪ್ರತಿನಿಧಿ, ನ್ಯೂಸ್ 18 ಕನ್ನಡ, ಬೆಂಗಳೂರು
[ad_2]
Source link














