Power Cut in Bengaluru: ಬೆಂಗಳೂರಿನ ಈ ಏರಿಯಾಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ; ನಿಮ್ಮ ಏರಿಯಾ ಹೆಸರು ಇದೆಯಾ ಚೆಕ್ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

News18


Last Updated:

ಬೆಂಗಳೂರಿನಲ್ಲಿ ಜುಲೈ 22ರಂದು ಬೆಸ್ಕಾಂ ನಿರ್ವಹಣಾ ಕಾರ್ಯಗಳಿಂದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ. ಕಾವೇರಿ ನೀರು ಪೂರೈಕೆಯಲ್ಲೂ ವ್ಯತ್ಯಯ.

News18
News18

ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru) ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) (BESCOM) ಜುಲೈ 22 ರಂದು ಕೆಪಿಟಿಸಿಎಲ್ ಕೈಗೊಳ್ಳಲಿರುವ ನಿರ್ವಹಣಾ ಕಾರ್ಯಗಳಿಂದಾಗಿ ಹಲವಾರು ಪ್ರದೇಶಗಳಲ್ಲಿ ಕನಿಷ್ಠ 4 ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯ ಉಂಟಾಗಲಿದೆ (Power Outage) ಎಂದು ಮಾಹಿತಿ ನೀಡಿದೆ.

ಸಾರಕ್ಕಿ ಹಾಗೂ ಇಸ್ಕಾನ್ ಉಪಕೇಂದ್ರಗಳಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನಾಳೆ (ಜುಲೈ 22) ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ರವರೆಗೆ ವಿದ್ಯುತ್ ಪೂರೈಕೆ ಸ್ಥಗಿತ ಆಗಲಿದೆ.

ಯಾವೆಲ್ಲಾ ಏರಿಯಾಗಳಲ್ಲಿ ಪವರ್ ಕಟ್ ಇರುತ್ತೆ ಅಂತ ನೋಡುವುದಾದರೆ, ಜೆ.ಪಿ.ನಗರ, ಜಯನಗರ, ಬನ್ನೇರುಘಟ್ಟ ರಸ್ತೆ ಸೇರಿ ಹಲವು ಪ್ರದೇಶಗಳಲ್ಲಿ ಪವರ್ ಕಟ್ ಪರಿಣಾಮ ಇರಲಿದೆ. ಇನ್ನು, ಶಾಕಾಂಬರಿ ನಗರ, ಪೈಪ್‌ಲೈನ್ ರಸ್ತೆ, ಪುಟ್ಟೇನಹಳ್ಳಿ, ಐಟಿಐ ಲೇಔಟ್, ಎಸ್‌ಬಿಐ ಕಾಲೋನಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ. ತಲಘಟ್ಟಪುರ, ರಘುವನಹಳ್ಳಿ, ಗುಬ್ಬಲಾಳ, ಕುವೆಂಪುನಗರ, ವಿ.ವಿ.ನಗರ, ಡಾಲರ್ಸ್ ಲೇಔಟ್ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಸಲಾರ್ಪುರಿಯಾ, ನಾಗಾರ್ಜುನ, ಕಲ್ಯಾಣಿ ಮ್ಯಾಗ್ನಮ್, ಮಂತ್ರಿ ಅಪಾರ್ಟ್‌ಮೆಂಟ್‌ಗಳಿಗೂ ವಿದ್ಯುತ್ ವ್ಯತ್ಯಯದ ಪರಿಣಾಮ ಆಗಲಿದ್ದು, ಮಧ್ಯಾಹ್ನ 2 ಗಂಟೆಯ ಬಳಿಕ ವಿದ್ಯುತ್ ಪೂರೈಕೆ ಪುನರಾರಂಭವಾಗುವ ಸಾಧ್ಯತೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

ಜುಲೈ 22ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರು ಜಲಮಂಡಳಿ ಕಾವೇರಿ ನೀರು ಸರಬರಾಜು ಯೋಜನೆಯ 4ನೇ ಹಂತದ 1ನೇ ಘಟಕದಲ್ಲಿ 1200 ಮೀಮೀ ವ್ಯಾಸದ ಕೊಳವೆ ಮಾರ್ಗದಲ್ಲಿ ಸೋರಿಕೆ ತಡೆಗಟ್ಟುವ ಮುನ್ನ ತುರ್ತು ಕಾಮಗಾರಿ ಕೈಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಜುಲೈ 22ರಂದು ನಗರದ ಬಹುತೇಕ ಪ್ರದೇಶಗಳಲ್ಲಿ ಕಾವೇರಿ ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಬೆಳಗ್ಗೆ 06 ಗಂಟೆಯಿಂದ ಸಂಜೆ 06 ಗಂಟೆವರೆಗೂ ನೀರಿನ ಪೂರೈಕೆ ಸ್ಥಗಿತಗೊಳ್ಳಲಿದೆ.

ಯಾವೆಲ್ಲಾ ಪ್ರದೇಶಗಳಲ್ಲಿ ನೀರಿನ ಪೂರೈಕೆ ಬಂದ್ ಆಗಲಿದೆ?

  • ನಗರದ ಮಹಾಲಕ್ಷ್ಮಿ ಲೇಔಟ್‌
  • ಜೆ.ಸಿ.ನಗರ
  • ಆತ್ಮೀ ಯ ಗೆಳೆಯರ ಬಳಗ
  • ಶ್ರೀರಾಮನಗರ
  • ಮುನೇಶ್ವರ ಬ್ಲಾಕ್‌
  • ಜೆ.ಎಸ್‌. ನಗರ
  • ಸರಸ್ವತಿ ಪುರಂ
  • ಬೋವಿ ಪಾಳ್ಯ
  • ಮೈಕೋ ಲೇಔಟ್‌
  • ಗಣೇಶ ಬ್ಲಾಕ್‌
  • ರಾಜಾಜಿನಗರ 2ನೇ ಬ್ಲಾಕ್‌ನಿಂದ 5ನೇ ಬ್ಲಾಕ್‌
  • ಜೇಡರಹಳ್ಳಿ
  • ರಾಜಾಜಿನಗರ
  • ಜೂಗನಹಳ್ಳಿ
  • ಚಾಮುಂಡಿನಗರ ಸ್ಲಮ್‌ ಮತ್ತು ವನೇಶ್ವರಿ ನಗರ
  • ರಾಜಾಜಿನಗರ 6ನೇ ಬ್ಲಾಕ್‌
  • ಡಾ. ರಾಜ್‌ಕುಮಾರ್‌ ರೋಡ್‌
  • ಗುಬ್ಬಣ್ಣ ಇಂಡಸ್ಟ್ರಿಯಲ್‌ ಲೇಔಟ್‌
  • ರಾಜಾಜಿನಗರ 4ನೇ ಎನ್‌ಎಂ ಬ್ಲಾಕ್‌
  • ರಾಜಾಜಿನಗರ ಡಿ ಬ್ಲಾಕ್‌
  • ಪ್ರಕಾಶ್‌ನಗರ 3ನೇ ಹಂತ
  • ರಾಜಾಜಿನಗರ 1ನೇ ಬ್ಲಾಕ್‌ ಮತ್ತು 1ನೇ ಎನ್‌ ಬ್ಲಾಕ್‌
  • ಕೇತಮಾರನಹಳ್ಳಿ, ಸುಬ್ರಮಣ್ಯ ನಗರ
  • ರಾಜಾಜಿನಗರ 2ನೇ ಹಂತ
  • ಪಾರ್ಟ್‌ ಆಫ್‌ ಗಾಯತ್ರಿ ನಗರ ಡಿ, ಇ ಬ್ಲಾಕ್‌
  • ಮಿಲ್ಕ್ ಕಾಲೋನಿ
  • ನಂದಿನಿ ಲೇಔಟ್‌
  • ಜೆ.ಸಿ.ನಗರ 12ರಿಂದ 25ನೇ ಮೇನ್‌ ರೋಡ್‌
  • ಕಂಠೀರವ ನಗರ
  • ಪರಿಮಳ ನಗರ
  • ನಂದಿನಿ ಲೇಔಟ್‌
  • ನರಸಿಂಹ ಲೇಔಟ್‌
  • ಶ್ರೀಕಂಠೇಶ್ವರ ನಗರ
  • ಅಶೋಕ್‌ಪುರ ಸ್ಲಮ್‌
  • ಶಂಕರ್‌ನಗರ
  • ವಿಜಯಾನಂದ ನಗರ
  • ಸೋಮೇಶ್ವರ ನಗರ
  • ನಂಜುಂಡೇಶ್ವರ ನಗರ



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports