Last Updated:
Global Diplomat: ಅಂದು ಇಂದಿರಾ ಗಾಂಧಿಯವರ ಏಕಪಕ್ಷೀಯ ನಿರ್ಧಾರದಿಂದ ಭಾರತ ಬರೋಬ್ಬರಿ 300% ತೈಲ ಬೆಲೆ ಏರಿಕೆಯ ಬಿಗ್ ಶಾಕ್ ಎದುರಿಸಬೇಕಾಗಿ ಬಂದಿತ್ತು. ಆದರೆ ಇಂದು ಜಾಗತಿಕ ಯುದ್ಧದ ನಡುವೆಯೂ ಪ್ರಧಾನಿ ಮೋದಿ ದೇಶದ ಹಿತರಕ್ಷಣೆಯನ್ನು ಹೇಗೆ ಕಾಪಾಡಿದ್ದಾರೆ ಅನ್ನೋ ರೋಚಕ ಇತಿಹಾಸದ ಹೋಲಿಕೆ ಇಲ್ಲಿದೆ.
ಜಾಗತಿಕ ರಾಜತಾಂತ್ರಿಕತೆಯ (Global Diplomat)ಇತಿಹಾಸವನ್ನು ಗಮನಿಸಿದರೆ, ದೇಶದ ವಿದೇಶಾಂಗ ನೀತಿಯು ಕೇವಲ ಸೈದ್ಧಾಂತಿಕ ನಿಷ್ಠೆಗೆ ಸೀಮಿತವಾಗಿರದೆ ರಾಷ್ಟ್ರೀಯ ಹಿತಾಸಕ್ತಿಗೆ ಅನುಗುಣವಾಗಿರಬೇಕು ಎಂಬುದು ಸ್ಪಷ್ಟವಾಗುತ್ತದೆ. ಇದಕ್ಕೆ ಮುಖ್ಯ ಉದಾಹರಣೆಯಾಗಿ 1973 ರ ಯೋಮ್ ಕಿಪ್ಪೂರ್ ಯುದ್ಧ ಮತ್ತು ಇತ್ತೀಚಿನ 2026 ರ ಇಸ್ರೇಲ್-ಇರಾನ್ ಸಂಘರ್ಷದ ಸಮಯದ ಭಾರತದ ನಿಲುವುಗಳನ್ನು ಹೋಲಿಸಬಹುದು. ಅಂದು ಪ್ರಧಾನಿ ಇಂದಿರಾ ಗಾಂಧಿಯವರು (Indira Gandhi) ಅರಬ್ ಬಣದ ಪರವಾಗಿ ಬಹಿರಂಗ ನಿಲುವು ತಳೆದು ದೇಶದಲ್ಲಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುವಂತೆ ಮಾಡಿದ್ದರು.
ಆದರೆ ಇಂದು ಪ್ರಧಾನಿ ನರೇಂದ್ರ ಮೋದಿಯವರು ಯಾವುದೇ ಒಂದು ಬಣಕ್ಕೆ ಸೇರದೆ ಕಟ್ಟುನಿಟ್ಟಾದ ಭಾರತ ಮೊದಲು ಅಂದರೆ ಇಂಡಿಯಾ ಫಸ್ಟ್ (India First) ನೀತಿಯನ್ನು ಅನುಸರಿಸಿದ್ದಾರೆ. ಯುದ್ಧದ ಸಮಯದಲ್ಲಿ ದೇಶದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಈ ಎರಡು ಕಾಲಘಟ್ಟಗಳ ಕಾರ್ಯತಂತ್ರ ಅಂದರೆ ಸ್ಟ್ರಾಟಜಿ (Strategy) ಹೇಗೆ ಬದಲಾಗಿದೆ ಎಂಬುದರ ಕಂಪ್ಲೀಟ್ ವಿಶ್ಲೇಷಣೆ ಇಲ್ಲಿದೆ ನೋಡಿ.













