[ad_1]
Last Updated:
ಬೆಂಗಳೂರು ಉತ್ತರ ನಗರ ನಿಗಮವು ಕಸ ವಿಲೇವಾರಿ ಮತ್ತು ಘನತ್ಯಾಜ್ಯ ನಿರ್ವಹಣೆ ಸಂಬಂಧಿತ ದೂರುಗಳಿಗಾಗಿ ವಿಶೇಷ ಹೆಲ್ಪ್‌ಲೈನ್ ಆರಂಭಿಸಿದೆ. ಪ್ರತಿ ಮಂಗಳವಾರ ಬೆಳಿಗ್ಗೆ 7.30ರಿಂದ 9.30ರವರೆಗೆ ಫೋನ್-ಇನ್ ಕಾರ್ಯಕ್ರಮ ನಡೆಯಲಿದ್ದು, ಕರೆ ಹಾಗೂ ವಾಟ್ಸ್‌ಆ್ಯಪ್ ಮೂಲಕ ದೂರು ನೀಡಬಹುದು.
ಬೆಂಗಳೂರು: ನಿಮ್ಮ ವಾರ್ಡ್‌ನಲ್ಲಿ ಕಸ ವಿಲೇವಾರಿ ಆಗುತ್ತಿಲ್ಲವೇ? ಮನೆಮನೆಗೆ ಕಸ ಸಂಗ್ರಹಿಸುವ ವಾಹನ ಸಮಯಕ್ಕೆ ಬರುತ್ತಿಲ್ಲವೇ? ರಸ್ತೆ ಬದಿಯಲ್ಲಿ ಕಸದ ರಾಶಿ ಬಿದ್ದಿದೆಯೇ? ಇಂತಹ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತರಲು ಬೆಂಗಳೂರು ಉತ್ತರ ನಗರ ನಿಗಮ ವಿಶೇಷ ಹೆಲ್ಪ್‌ಲೈನ್ (Help Line) ಹಾಗೂ ಫೋನ್-ಇನ್ ಕಾರ್ಯಕ್ರಮ ಆರಂಭಿಸಿದೆ. ಘನತ್ಯಾಜ್ಯ ನಿರ್ವಹಣೆ ಮತ್ತು ಕಸ ವಿಲೇವಾರಿಗೆ ಸಂಬಂಧಿಸಿದ ಸಾರ್ವಜನಿಕರ ದೂರುಗಳನ್ನು ಆಲಿಸಿ ಪರಿಹರಿಸುವ ಉದ್ದೇಶದಿಂದ ಪ್ರತಿ ಮಂಗಳವಾರ ಬೆಳಿಗ್ಗೆ 7.30ರಿಂದ 9.30ರವರೆಗೆ ವಿಶೇಷ ಫೋನ್-ಇನ್ ಕಾರ್ಯಕ್ರಮ (Phone-In Program) ನಡೆಯಲಿದೆ. ನಾಗರಿಕರು ದೂರವಾಣಿ ಕರೆ ಅಥವಾ ವಾಟ್ಸ್‌ಆ್ಯಪ್ ಮೂಲಕ ತಮ್ಮ ಸಮಸ್ಯೆಗಳನ್ನು ದಾಖಲಿಸಬಹುದು.
ಈ ವಿಶೇಷ ಫೋನ್-ಇನ್ ಕಾರ್ಯಕ್ರಮವು ವಲಯ ಜಂಟಿ ಆಯುಕ್ತರ ನೇತೃತ್ವದಲ್ಲಿ ನಡೆಯಲಿದೆ. ಘನತ್ಯಾಜ್ಯ ನಿರ್ವಹಣೆಯ ಉಪ ಪ್ರಧಾನ ವ್ಯವಸ್ಥಾಪಕರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದರಿಂದ ಕಸ ಸಂಗ್ರಹಣೆಯಲ್ಲಿನ ಸಮಸ್ಯೆಗಳು, ಪೌರಕಾರ್ಮಿಕರ ಸೇವೆ ಹಾಗೂ ತ್ಯಾಜ್ಯ ವಿಲೇವಾರಿಯಲ್ಲಿನ ಲೋಪಗಳ ಬಗ್ಗೆ ನಾಗರಿಕರು ನೇರವಾಗಿ ಅಧಿಕಾರಿಗಳ ಗಮನ ಸೆಳೆಯಲು ಅವಕಾಶ ಸಿಗಲಿದೆ. ಸಾರ್ವಜನಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ದೂರು ಸ್ವೀಕಾರದ ಜೊತೆಗೆ ಕಸ ನಿರ್ವಹಣೆಯ ದಕ್ಷತೆ ಹೆಚ್ಚಿಸಲು ಬೆಂಗಳೂರು ಉತ್ತರ ನಗರ ನಿಗಮ ತನ್ನ ವ್ಯಾಪ್ತಿಯ ಏಳು ವಿಭಾಗಗಳಿಗೂ ಬ್ಲಾಕ್‌ವಾರು ಸೂಕ್ಷ್ಮ ಯೋಜನೆಗಳನ್ನು ಸಿದ್ಧಪಡಿಸಿದೆ. ಈ ಯೋಜನೆಯಡಿ ಮನೆಮನೆಗೆ ಕಸ ಸಂಗ್ರಹಣೆ, ರಸ್ತೆ ಸ್ವಚ್ಛತೆ ಹಾಗೂ ಬೃಹತ್ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದಿಸುವವರ ನಿರ್ವಹಣೆಗೆ ಗಮನ ನೀಡಲಾಗುತ್ತದೆ. ವಸತಿ ಪ್ರದೇಶಗಳು, ವಾಣಿಜ್ಯ ಮಳಿಗೆಗಳು, ಕಸ ಸಂಗ್ರಹಣಾ ಮಾರ್ಗಗಳು, ಆಟೋ ಟಿಪ್ಪರ್‌ಗಳು, ಮಾರುಕಟ್ಟೆಗಳು, ಉದ್ಯಾನವನಗಳು ಹಾಗೂ ಗುರುತಿಸಲಾದ ಕಸದ ಕಪ್ಪುಚುಕ್ಕೆಗಳ ನಿರ್ವಹಣೆಯನ್ನೂ ಯೋಜನೆ ಒಳಗೊಂಡಿದೆ.
ಸಾರ್ವಜನಿಕರ ದೂರುಗಳಿಗೆ ಪರಿಹಾರ ಸಿಗುತ್ತಾ?
[ad_2]
Source link













