Last Updated:
ಪಿಜಿ ಸೇರುವ ಮೊದಲು ಬಾಡಿಗೆ, ಜಾಗ ಮತ್ತು ಕೋಣೆಯ ಸೌಲಭ್ಯಗಳನ್ನು ಮಾತ್ರ ನೋಡಿದರೆ ಸಾಕಾಗುವುದಿಲ್ಲ. ಪಿಜಿಗೆ ಹೋಗುವ ಮುನ್ನ ಈ 7 ತಪ್ಪುಗಳನ್ನು ಮಾಡಬೇಡಿ.
ನಗರ(City)ದ ಬೆಳಕು ಯುವಕರನ್ನು ಸೆಳೆಯುತ್ತದೆ. ಉದ್ಯೋಗ(Job), ಉನ್ನತ ವಿದ್ಯಾಭ್ಯಾಸ (Education) ಮತ್ತು ಫ್ರೀಡಂ ಬೇಕು ಎಂದು ಹಳ್ಳಿ-ಪಟ್ಟಣಗಳಿಂದ ಬಂದವರು ದೊಡ್ಡ ನಗರಗಳನ್ನು ಸೇರುತ್ತಾರೆ. ಆದರೆ ನಗರಕ್ಕೆ ಬಂದ ಮೊದಲ ನೆಲೆ ಬಹುತೇಕರಿಗೆ ಪಿಜಿ (PG) ಆಗಿರುತ್ತದೆ. ಒಂದು ರೂಮ್ (Room), ಒಂದು ಹಾಸಿಗೆ, ಒಂದು ಬಾಗಿಲು ಇದು ಕೇವಲ ವಾಸಸ್ಥಳವಲ್ಲ. ಇದು ನಿಮ್ಮ ಸುರಕ್ಷತೆಯ ಮೊದಲ ಗೋಡೆ. ಆ ಗೋಡೆಯಲ್ಲಿ ಬಿರುಕು ಇದ್ದರೆ, ಕನಸುಗಳು ಕುಸಿಯಬಹುದು. ಆದ್ದರಿಂದ ಪಿಜಿಗೆ ಸೇರುವ ಮುನ್ನ ಈ ಏಳು ವಿಷಯಗಳನ್ನು ನಂಬಬೇಡಿ. ಚೆನ್ನಾಗಿ ಪರಿಶೀಲಿಸಿ. ಸುರಕ್ಷತೆಯಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳಬೇಡಿ.














