Last Updated:
Narendra Modi-Putin: ಬ್ರಿಕ್ಸ್ ಶೃಂಗಸಭೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿ, ತಮಿಳಿನ ಪ್ರಸಿದ್ಧ ಮಹಾಕಾವ್ಯ ‘ತಿರುಕ್ಕುರಳ್’ನ ರಷ್ಯನ್ ಅನುವಾದದ ಪ್ರತಿಯನ್ನು ಆತ್ಮೀಯವಾಗಿ ಉಡುಗೊರೆಯಾಗಿ ನೀಡಿದ್ದಾರೆ.
ದೆಹಲಿ: ಭಾರತ ಮತ್ತು ರಷ್ಯಾ (India and Russia) ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನವದೆಹಲಿಯಲ್ಲಿ ನಡೆದ ಶೃಂಗಸಭೆ ಮಹತ್ವದ ಸಾಕ್ಷಿಯಾಗಿದೆ. ಬ್ರಿಕ್ಸ್ ಶೃಂಗಸಭೆಯ (India and Russia) ವೇಳೆ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರನ್ನು ಭೇಟಿಯಾಗಿ, ತಮಿಳಿನ ಪ್ರಸಿದ್ಧ ಮಹಾಕಾವ್ಯ ‘ತಿರುಕ್ಕುರಳ್’ನ (Thirukkural) ರಷ್ಯನ್ ಅನುವಾದದ ಪ್ರತಿಯನ್ನು ಆತ್ಮೀಯವಾಗಿ ಉಡುಗೊರೆಯಾಗಿ ನೀಡಿದ್ದಾರೆ. ಪ್ರಾಚೀನ ಭಾರತೀಯ ತತ್ತ್ವಶಾಸ್ತ್ರಕ್ಕೂ ಹಾಗೂ ರಷ್ಯಾಗೂ ಇರುವ ನಿಕಟ ಸಂಬಂಧವನ್ನು ನೆನಪಿಸುವ ಈ ವಿಶೇಷ ಪ್ರಸಂಗ ಸಾಕ್ಷಿಯಾಯ್ತು.














