Last Updated:
ಹನುಮಾನ್ ಅಂಶ್ ಇಲ್ಲಿವರೆಗೂ ಭಾರತದಲ್ಲಿ ರಿಲೀಸ್ ಆಗಿತ್ತು. 2 ಕೋಟಿ ಬಜೆಟ್ ಅಲ್ಲಿ ರೆಡಿ ಆಗಿ 100 ಕೋಟಿ ಕ್ಲಬ್ ಕೂಡ ಸೇರಿದೆ. ಆದರೆ, ಸೆಪ್ಟೆಂಬರ್-11 ರಿಂದ ಈ ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ರಿಲೀಸ್ ಆಗಿದೆ. ಈ ಬಗೆಗಿನ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.
ಹನುಮಾನ್ ಅಂಶ್ ಚಿತ್ರ (Hanuman Ansh Movie) ಸಾಗರೋತ್ತರದಲ್ಲೂ ರಿಲೀಸ್ ಆಗಿದೆ. ಸೆಪ್ಟೆಂಬರ್-11 ರಂದು ಓವರ್ಸೀಸ್ ಅಲ್ಲಿ ಈ ಚಿತ್ರ ದೊಡ್ಡ ಮಟ್ಟದಲ್ಲಿಯೇ ರಿಲೀಸ್ ಆಗಿದೆ. ಬಹು ಕೋಟಿ ವೆಚ್ಚದ ಚಿತ್ರ ಇದೇನಲ್ಲ. ಕೇವಲ 2 ಕೋಟಿ ಬಜೆಟ್ ಅಲ್ಲಿ ಇದು ನಿರ್ಮಾಣ ಆಗಿದೆ. ನೀಮ್ ಕರೋಲಿ ಬಾಬಾ (Neem Karoli Baba) ಜೀವನವನ್ನ ಆಧರಿಸಿದ ಈ ಚಿತ್ರದ ಪ್ರೀಮಿಯರ್ ಶೋ (Premier Show) ಯುಕೆಯಲ್ಲಿ ನಡೆದಿದೆ. ಒಳ್ಳೆ ರೆಸ್ಪಾನ್ಸ್ ಕೂಡ ಪಡೆದುಕೊಂಡಿದೆ. ಇದೀಗ ವಿದೇಶದಲ್ಲೂ ರಿಲೀಸ್ ಆಗಿದೆ. ಕನ್ನಡದ ಹೊಂಬಾಳೆ ಫಿಲ್ಮ್ಸ್ (Hombale Films) ಈ ಚಿತ್ರವನ್ನ ರಿಲೀಸ್ ಮಾಡಿದೆ. ಈ ಸಿನಿಮಾದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.














