Last Updated:
ಜಾರ್ಖಂಡ್ಗೆ ಬೆಳ್ಳಂಬೆಳಗ್ಗೆ ದೊಡ್ಡ ಆಘಾತ ಎದುರಾಗಿದೆ. ರಾಜ್ಯ ನಗರಾಭಿವೃದ್ಧಿ ಸಚಿವ ಸುದಿವ್ಯ ಕುಮಾರ್ ಸೋನಿ ಹಠಾತ್ತನೆ ನಿಧನರಾಗಿದ್ದಾರೆ. ಹಲವಾರು ಸವಾಲುಗಳನ್ನು ಎದುರಿಸಿ ರಾಜ್ಯವನ್ನು ವಿಧಾನಸಭಾ ಚುನಾವಣೆಯಲ್ಲಿ ಗೆಲುವಿನತ್ತ ಕೊಂಡೊಯ್ದಿದ್ದ ನಾಯಕ ನಿಧನರಾಗಿದ್ದು, ದೊಡ್ಡ ಶಾಕ್ ಎದುರಾಗಿದೆ.
ಜಾರ್ಖಂಡ್ನ ಸಚಿವ (Jharkhand Minister) ಸುದಿವ್ಯ ಕುಮಾರ್ ಸೋನು (Sudivya Kumar Sonu) ನಿಧನರಾಗಿದ್ದಾರೆ. ಜಾರ್ಖಂಡ್ಗೆ ಬೆಳ್ಳಂಬೆಳಗ್ಗೆ ದೊಡ್ಡ ಆಘಾತ ಎದುರಾಗಿದೆ. ರಾಜ್ಯ ನಗರಾಭಿವೃದ್ಧಿ ಸಚಿವ ಸುದಿವ್ಯ ಕುಮಾರ್ ಸೋನು ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಹಠಾತ್ ಸಾವು ರಾಜ್ಯದ ರಾಜಕೀಯ ವಲಯದಲ್ಲಿ ಆಘಾತವನ್ನುಂಟುಮಾಡಿದೆ. ಸುದಿವ್ಯ ಕುಮಾರ್ ಅವರನ್ನು ಜಾರ್ಖಂಡ್ ಮುಕ್ತಿ ಮೋರ್ಚಾ (JMM) ಪಕ್ಷದ ಪ್ರಮುಖ ನಾಯಕರಾಗಿ ಪರಿಗಣಿಸಲಾಗುತ್ತಿತ್ತು.














