Last Updated:
ಸ್ಯಾಂಡಲ್ವುಡ್ ಗೂಗ್ಲಿ ಚಿತ್ರದ ಡೈರೆಕ್ಟರ್ ಪವನ್ ಒಡೆಯರ್ (Googly Director Pavan Wadeyar) ಕನ್ನಡ ಇಂಡಸ್ಟ್ರಿಯ (Kannada Film Industry) ಆ ಕರಾಳ ಸತ್ಯ ಬಿಚ್ಚಿಟ್ಟಿದ್ದಾರೆ. ಕಡಿಮೆ ಬಜೆಟ್ ಚಿತ್ರಗಳ ಕಥೆ ಹೇಗಿದೆ? ದೊಡ್ಡ ಬಜೆಟ್ನ ಚಿತ್ರಗಳ ವಿಚಾರ ಯಾವ ರೀತಿ ಇರುತ್ತದೆ ಅಂತ ಹೇಳಿದ್ದಾರೆ.
ಸ್ಯಾಂಡಲ್ವುಡ್ ಗೂಗ್ಲಿ ಚಿತ್ರದ ಡೈರೆಕ್ಟರ್ ಪವನ್ ಒಡೆಯರ್ (Googly Director Pavan Wadeyar) ಕನ್ನಡ ಇಂಡಸ್ಟ್ರಿಯ (Kannada Film Industry) ಆ ಕರಾಳ ಸತ್ಯ ಬಿಚ್ಚಿಟ್ಟಿದ್ದಾರೆ. ಕಡಿಮೆ ಬಜೆಟ್ ಚಿತ್ರಗಳ ಕಥೆ ಹೇಗಿದೆ? ದೊಡ್ಡ ಬಜೆಟ್ನ ಚಿತ್ರಗಳ ವಿಚಾರ ಯಾವ ರೀತಿ ಇರುತ್ತದೆ. ಮಿಡಲ್ ಬಜೆಟ್ನ ಚಿತ್ರ ಮಾಡಿದರೆ ಹೇಗೆ ಹೊಗುತ್ತವೆ. ಈ ಎಲ್ಲ ಸತ್ಯಗಳನ್ನ ಹೇಳಿದ್ದಾರೆ. ಹಾಗೆ ತಮ್ಮ ಡೊಳ್ಳು ಚಿತ್ರದ ಮಾರ್ಕೆಟಿಂಗ್ಗೆ ಸಾಕಷ್ಟು ದುಡ್ಡು ಹಾಕಿರೋದನ್ನು ಹೇಳಿಕೊಂಡಿದ್ದಾರೆ. ನೆಟ್ಫ್ಲಿಕ್ಸ್ ಕನ್ನಡ ಚಿತ್ರಗಳನ್ನ (Kannada Movies) ಮೂಸಿಯೂ ನೋಡ್ತಿಲ್ಲ. ಅಮೆಜಾನ್ ಅಲ್ಲಿ ಶೇರಿಂಗ್ ಬೇಸಿಸ್ ಒಂದು ವಿಂಡೋ ಇದೆ. ಹೀಗೆ ಸುಮಾರು ವಿಚಾರಗಳನ್ನ ಬೇಲ್ ಚಿತ್ರದ ಡೈರೆಕ್ಟರ್ ಪವನ್ ಒಡೆಯರ್ (Bail Movie Director Pavan Wadeyar) ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕನ್ನಡ ಇಂಡಸ್ಟ್ರೀಯಲ್ಲಿ ಒಂದು ಸ್ಟಾರ್ ಹಾಕಿಕೊಂಡು ದೊಡ್ಡ ಬಜೆಟ್ ಚಿತ್ರ ಮಾಡ್ಬೇಕು. ಇಲ್ಲವೆ ಮೈಕ್ರೋ ಬಜೆಟ್ನಲ್ಲಿ ಚಿತ್ರ ಮಾಡ್ಬೇಕು. ಅಂದ್ರೆ ಒಂದೊ ಇಲ್ಲವೆ ಎರಡು ಕೋಟಿ ಬಜೆಟ್ ಹಾಕಿ ಸಿನಿಮಾ ಮಾಡ್ಬೇಕು. ಇವು ವರ್ಕ್ ಆಗುತ್ತಿವೆ.
ದೊಡ್ಡ ಸ್ಟಾರ್ ಸಿನಿಮಾ ಮಾಡಿ…
(ಚಿತ್ರ ಕೃಪೆ: ಪವನ್ ಒಡೆಯರ್ ಇನ್ಸ್ಟಾಗ್ರಾಮ್)
ಆದರೆ, ಈ ಐದಾರು ಕೋಟಿ ಬಜೆಟ್ನ ಚಿತ್ರಗಳು ರಿಕವರ್ ಮಾಡಿಕೊಳ್ಳಲು ಕಷ್ಟಪಡ್ತಿವಿ. ಒಟಿಟಿ ಅವರು ಕನ್ನಡ ಸಿನಿಮಾಗಳನ್ನ ತೆಗೆದುಕೊಳ್ಳುತ್ತಿಲ್ಲ. ನೆಟ್ಫ್ಲಿಕ್ಸ್ ಅವರು ಕನ್ನಡ ಕಂಟೆಂಟ್ ಮೂಸಿಯೂ ನೋಡ್ತಿಲ್ಲ. ಅಮೆಜಾನ್ ಅಲ್ಲಿ ಶೇರಿಂಗ್ ಬೇಸಿಸ್ ಮೇಲೆ ಒಂದು ವಿಂಡೋನಾದರು ಇದೆ.
ಮಿಡಲ್ ಬಜೆಟ್ ಚಿತ್ರಗಳಿಗೆ ಕಷ್ಟ ಆಗ್ತಿವೆ. ಒಂದೋ ಎರಡೋ ಕೋಟಿ ಹಾಕಿ ಚಿತ್ರ ಮಾಡುವವರು ಇದ್ದಾರೆ. ಅಂತಹ ಚಿತ್ರಗಳು ವರ್ಕ್ ಆಗುತ್ತಿವೆ. ದುಡ್ಡು ಬರ್ತಿವೆ.
ಆದರೆ, ಈ ಹಿಂದೆ ನನ್ನ ಡೊಳ್ಳು ಚಿತ್ರಕ್ಕೆ ನಾನು ಮಾರ್ಕೆಟಿಂಗ್ಗೆ ತುಂಬಾನೆ ದುಡ್ಡುಹಾಕಿದ್ದೇನೆ. ಆದರೆ, ಈ ಚಿತ್ರದಿಂದ ಯಾವ ಚಿತ್ರಕ್ಕೆ ಅದೆಷ್ಟು ಮಾರ್ಕೆಂಟಿಂಗ್ ಮಾಡ್ಬೇಕು, ಇನ್ನೆಷ್ಟು ಬಿಡ್ಬೇಕು ಅನ್ನೋದು ಗೊತ್ತಾಗಿದೆ.
ಈ ಚಿತ್ರವನ್ನ ನಾನೇ ಪ್ರಸೆಂಟ್ ಮಾಡಿದ್ದೇನೆ. ಈ ಚಿತ್ರದ ಪ್ರಚಾರಕ್ಕೆ ನಮ್ಮ ನಿರ್ಮಾಪಕರು ಹೆಚ್ಚು ಕಡಿಮೆ 30 ರಿಂದ 35 ಲಕ್ಷ ಖರ್ಚು ಮಾಡಿದರು.
ಐದಾರು ಕೋಟಿ ಹಾಕಿದ್ರೇನು
(ಚಿತ್ರ ಕೃಪೆ: ಪವನ್ ಒಡೆಯರ್ ಇನ್ಸ್ಟಾಗ್ರಾಮ್)
ಆದರೆ, ಇದೇ ಚಿತ್ರ ತಮಿಳಿನಲ್ಲೂ ಬಂತು. ಅಲ್ಲಿ ಕೇವಲ 10 ಲಕ್ಷ ಪ್ರಚಾರಕ್ಕೆ ಖರ್ಚಾಯಿತು. ಆದರೆ, ಚಿತ್ರ ರಿಲೀಸ್ ಆದ್ಮೇಲೆ ಶೇರಿಂಗ್ ಅಂತ ಬಂದ್ರೆ, ಅದು ಕರ್ನಾಟಕದಲ್ಲಿ ಕಡಿಮೆ ಇತ್ತು. ತಮಿಳಿನಿಂದಲೇ ಜಾಸ್ತಿ ಬಂತು ಅಂತ ಹೇಳಿಕೊಂಡಿದ್ದಾರೆ. ಈ ಎಲ್ಲ ವಿಚಾರಗಳನ್ನ ನ್ಯೂಸ್ ಫಸ್ಟ್ ಚಾನೆಲ್ನ ಸಂದರ್ಶನದಲ್ಲಿಯೇ ಡೈರೆಕ್ಟರ್ ಪವನ್ ಒಡೆಯರ್ ಹೇಳಿದ್ದಾರೆ.
ಬಹುಶಃ ಮುಂದಿನ ದಿನಗಳಲ್ಲಿ ಹೇಳಬಹುದೇನೋ? ಆದರೆ, ಈ ಚಿತ್ರದ ಟೀಸರ್ ಪ್ರಾಮಿಸಿಂಗ್ ಆಗಿದೆ. ಶಿವರಾಜ್ ಕುಮಾರ್ ಅವರು ಕೆಲವು ದೃಶ್ಯದಲ್ಲಿ ರಾಜಕುಮಾರ್ ಅವರ ರೀತಿನೇ ಕಾಣಿಸುತ್ತಾರೆ. ಈ ವಿಷಯವನ್ನ ಅನೇಕರು ಹೇಳಿದ್ದಾರೆ. ಕಿಚ್ಚ ಸುದೀಪ್ ಅವರು ಕೂಡ ಇದನ್ನೇ ಹೇಳಿಕೊಂಡಿದ್ದಾರೆ. ಹಾಗೆ ಹೇಳಿರೋ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ ಅಂತ ಹೇಳಬಹುದು.













