Parle Vs Parle: ಮೋದಿ ಕೊಟ್ಟ ಮೆಲೊಡಿ ಚಾಕ್ಲೆಟ್ ಬೇರೆ, ಇಲ್ಲಿ ಜನ ದುಡ್ಡು ಹಾಕಿ ಸ್ಟಾಕ್ ಕೊಳ್ತಿರೋದೇ ಬೇರೆ! ಸಿಕ್ಕಾಪಟ್ಟೆ ಕನ್​ಫ್ಯೂಶನ್! | ವ್ಯಾಪಾರ ಸುದ್ದಿ | ACTPnews

News18


Last Updated:

ಇಟಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾರ್ಜಿಯಾ ಮೆಲೋನಿ ಅವರಿಗೆ ಪಾರ್ಲೆ ಮೆಲೋಡಿ ಉಡುಗೊರೆ, ವಿಡಿಯೋ ವೈರಲ್, ಹೆಸರಿನ ಗೊಂದಲದಿಂದ ಪಾರ್ಲೆ ಇಂಡಸ್ಟ್ರೀಸ್ ಷೇರು ಏರಿಕೆಯಾಗಿದೆ.

News18
News18

ಪ್ರಧಾನಿ ನರೇಂದ್ರ ಮೋದಿ ವಿದೇಶ (PM Narendra Modi) ಪ್ರವಾಸದಲ್ಲಿದ್ದಾರೆ. ಇಟಲಿಯಲ್ಲಿರುವ ಪ್ರಧಾನಿ ಮೋದಿಯವರನ್ನ ಇಟಲಿ ಅಧ್ಯಕ್ಷೆ ಮೆಲೋನಿ ಅದ್ದೂರಿಯಾಗಿ ಸ್ವಾಗತಿಸಿದ್ದಾರೆ. ಇನ್ನು ಭೇಟಿ ವೇಳೆ ಪ್ರಧಾನಿ ಮೋದಿ ಮೆಲೋನಿಗೆ (Giorgia Meloni) ಪಾರ್ಲೆ ಮೆಲೋಡಿ ಚಾಕೋಲೇಟ್ ಗಿಫ್ಟ್ ಕೊಟ್ಟಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿರೋ ಮೆಲೋನಿ ವಿಶೇಷ ಗಿಫ್ಟ್​ಗೆ ಧನ್ಯವಾದ ಅಂತ ಬರೆದುಕೊಂಡಿದ್ದಾರೆ. ಆದರೆ ಮೆಲೋನಿ ಅವರಿಗೆ ಮೋದಿ ಚಾಕೋಲೇಟ್ ಗಿಫ್ಟ್ ಕೊಟ್ಟ ಬೆನ್ನಲ್ಲೇ ಷೇರು ಮಾರುಕಟ್ಟೆಯಲ್ಲಿ (Parle Industries Ltd) ಮತ್ತೊಂದು ಕಂಪನಿಯ ಲಕ್ ಬದಲಾಗಿದೆ. ಮೋದಿ ಚಾಕೋಲೇಟ್ ಕೊಡೋದಕ್ಕೂ, ಷೇರು ಮಾರುಕಟ್ಟೆಗೂ (Parle Products Ltd) ಏನಪ್ಪ ಸಂಬಂಧ ನೀವು ಯೋಚನೆ ಮಾಡುತ್ತಿದ್ದರೆ, ಇಲ್ಲಿದೆ ಕಂಪ್ಲೀಟ್ ಮಾಹಿತಿ.

ಪಾರ್ಲೆ ಇಂಡಸ್ಟ್ರೀಸ್ ಲಿಮಿಟೆಡ್​ ಷೇರುಗಳು ಇಂದು ಶೇಕಡಾ 05ರಷ್ಟು ಏರಿಯಾಗಿದೆ. ಏಕೆಂದರೆ ಮೆಲೋಡಿ ತಯಾರಕರಾದ ಮತ್ತೊಂದು ಎಫ್​​ಎಂಸಿಜಿ ಕಂಪನಿ ಪಾರ್ಲೆ ಪ್ರಾಡಕ್ಟ್ಸ್ ಲಿಮಿಟೆಡ್ ಹೆಸರು ಚಾಕೋಲೇಟ್ ಕಂಪನಿ ಹೆಸರಿಗೆ ಹೋಲಿಕೆ ಆಗ್ತಿರೋದು ಪ್ರಮುಖ ಕಾರಣವಾಗಿದೆ.

ಇಲ್ಲಿ ಪಾರ್ಲೆ ಇಂಡಸ್ಟ್ರೀಸ್, ಮೆಲೋಡಿ ಚಾಕೋಲೇಟ್​ ತಯಾರಿಸುವ ಕಂಪನಿ ಎರಡು ಬೇರೆ ಬೇರೆ. ಪಾರ್ಲೆ ಇಂಡಸ್ಟ್ರೀಸ್ ಒಂದು ಮೈಕ್ರೋ ಕ್ಯಾಪ್ ಕಂಪನಿಯಾಗಿದ್ದು, ಇದು ಸ್ಟಾಫ್ಟ್ ವೇರ್ ರಫ್ತು ಮಾಡುವ ಹಾಗೂ ರಿಯಲ್ ಎಸ್ಟೇಟ್​ ಕಾರ್ಯಾಚರಣೆ ನಡೆಸುವ ಕೆಲಸ ಮಾಡುತ್ತದೆ. ಮೆಲೋಡಿ ಚಾಕೋಲೇಟ್ ತಯಾರಿಸುವ ಕಂಪನಿಗೂ ಪಾರ್ಲೆಟ್ ಇಂಡಸ್ಟ್ರೀಸ್​ಗೂ ಯಾವುದೇ ಸಂಬಂಧ ಇಲ್ಲ ಅನ್ನೋದು ಇಲ್ಲಿ ಗಮನಾರ್ಹ ವಿಚಾರ. ಜಸ್ಟ್ ಕಂಪನಿಯ ಹೆಸರು ಈಗ ಸಂಸ್ಥೆಗೆ ದೊಡ್ಡ ಲಾಭ ಮಾಡಿಕೊಟ್ಟಿದೆ ಎಂದು ಹೇಳಬಹುದು.

ಪಾರ್ಲೆ ಇಂಡಸ್ಟ್ರೀಸ್ ಷೇರು

ಪ್ರಧಾನಿ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಮೆಲೋಡಿ ಚಾಕೋಲೇಟ್ ಪ್ಯಾಕ್ ಉಡುಗೊರೆ ನೀಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್ ವೈರಲ್ ಆಗಿತ್ತು. ಅಲ್ಲದೇ, ಮೆಲೋಡಿ ಎಂಬ ಟ್ಯಾಗ್ ಸಖತ್ ಟ್ರೆಂಡ್ ಆಗಿತ್ತು. ಈ ಇಬ್ಬರು ನಾಯಕರು ಭೇಟಿಯಾದ ಪ್ರತಿ ಸಂದರ್ಭದಲ್ಲೂ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಶುರುವಾಗುತ್ತದೆ. ವಿಡಿಯೋ ವೈರಲ್ ಆದ ಕೆಲವೇ ನಿಮಿಷಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹಲವು ಮೀಮ್​ ಗಳು, ಒನ್ ಲೈನ್ ಕಾಮೆಂಟ್ ಗಳು ಸಖತ್ ಸದ್ದು ಮಾಡಿದ್ದು, ಹಲವರು ಈ ಇಬ್ಬರು ನಾಯಕರನ್ನು ಇಂಟರ್​ನೆಟ್​ನ ನೆಚ್ಚಿನ ಜೋಡಿ ಎಂದೇ ಕರೆದಿದ್ದಾರೆ.

ಇತ್ತ ಸಿಎನ್​​​ಬಿಸಿ ಟಿವಿ 18ನೊಂದಿಗೆ ಮಾತನಾಡಿರುವ ಪಾರ್ಲೆ ಪ್ರಾಡಕ್ಟ್ಸ್ ಉಪಾಧ್ಯಕ್ಷ ಮಯಾಂಕ್ ಶಾ ಅವರು, ಇಟಲಿ ಪ್ರಧಾನಿಗಳಿಗೆ ಭಾರತ ಪ್ರಧಾನಿ ಮೋದಿ ಅವರು ಮೆಲೋಡಿ ಟಾಫಿಗಳನ್ನು ಉಡುಗೊರೆ ನೀಡಿದ್ದಾರೆ. ಇದು ಭಾರತದ ಉತ್ಪನ್ನಗಳನ್ನು ಉತ್ತೇಜಿಸಲು ಹಾಗೂ ಜಾಗತಿಕ ಮಟ್ಟಕ್ಕೆ ತರಲು ಸಹಕಾರಿಯಾಗುತ್ತದೆ. ನಮಗೆ ಇಂತಹ ವೇಡಿಕೆ ನೀಡಿದ್ದಕ್ಕೆ ಪಾರ್ಲೆ ಪ್ರಾಡಕ್ಟ್ಸ್ ಪ್ರಧಾನಿಗಳಿಗೆ ಧನ್ಯವಾದ ಹೇಳುತ್ತದೆ ಎಂದು ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed