[ad_1]
Last Updated:
ಇಂಗ್ಲೆಂಡ್ ನೆಲದಲ್ಲಿ ಸತತ ಎರಡು ಟೆಸ್ಟ್ ಪಂದ್ಯಗಳನ್ನ ಸೋಲು ಕಂಡ ಬೆನ್ನಲ್ಲೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೋಚ್ಗಳನ್ನ ವಜಾಮಾಡಿದೆ, ಕೆಲವು ಸೀನಿಯರ್ ಪ್ಲೇಯರ್ಸ್ ಹೊರಗಿಟ್ಟು ಯುವ ಆಟಗಾರರಿಗೆ ಅವಕಾಶ ನೀಡಿದೆ.
ಲಾರ್ಡ್ಸ್ ಟೆಸ್ಟ್ (Lord’s Test) ಪಂದ್ಯದಲ್ಲಿ ಬ್ಯಾಟಿಂಗ್ ಕುಸಿತದಿಂದಾಗಿ ಪಾಕಿಸ್ತಾನ ತಂಡ (Pakistan Team) 194 ರನ್ಗಳ ಹೀನಾಯ ಸೋಲು ಕಂಡ ಬೆನ್ನಲ್ಲೇ, ಅಲ್ಲಿನ ಕ್ರಿಕೆಟ್ ಮಂಡಳಿಯು ಮುಖ್ಯ ಕೋಚ್ ಸರ್ಫರಾಜ್ ಅಹ್ಮದ್ ಮತ್ತು ಬೌಲಿಂಗ್ ತರಬೇತುದಾರ ಉಮರ್ ಗುಲ್ ಅವರನ್ನು ಹುದ್ದೆಯಿಂದ ವಜಾಗೊಳಿಸಿದೆ. ಇವರಿಬ್ಬರು ಸದ್ಯ ತಂಡದ ಜೊತೆಗೇ ಇರಲಿದ್ದಾರೆಯಾದರೂ, ತಕ್ಷಣಕ್ಕೆ ಜಾರಿಯಾಗುವಂತೆ ಸೀಮಿತ ಓವರ್ಗಳ ತಂಡಗಳ (White-ball) ಮುಖ್ಯ ಕೋಚ್ ಮೈಕ್ ಹೆಸನ್ ಅವರಿಗೆ ಸದ್ಯದ ಜವಾಬ್ದಾರಿ ವಹಿಸಲಾಗಿದೆ. ಪಾಕಿಸ್ತಾನ ಕ್ರಿಕೆಟ್ನಲ್ಲಿ ಸತತವಾಗಿ ತರಬೇತುದಾರರನ್ನು ಬದಲಾಯಿಸುವ ಹಳೆಯ ಸರಣಿ ಈಗಲೂ ಮುಂದುವರಿದಂತಾಗಿದೆ.
[ad_2]
Source link














