Last Updated:
Padma Shri Award Ceremony: ಆ ಕ್ಷಣ ಇಡೀ ಸಭಾಂಗಣದಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾಗುವಂತಹ, ಇಂಟರ್ನೆಟ್ ಜಗತ್ತನ್ನೇ ಭಾವುಕಗೊಳಿಸುವಂತಹ ಒಂದು ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದು ಕೇವಲ ಪ್ರಶಸ್ತಿ ವಿಜೇತರೊಬ್ಬರ ಗೌರವದ ಕ್ಷಣವಾಗಿರಲಿಲ್ಲ, ಬದಲಿಗೆ ಭಾರತೀಯ ಸಾಂಪ್ರದಾಯಿಕ ಕಲೆಗೆ ಸಿಕ್ಕ ಪರಮೋಚ್ಚ ಮನ್ನಣೆ ಮತ್ತು ದೇಶದ ಪ್ರಧಾನಿಯವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾದ ಭಾವನಾತ್ಮಕ ಮೂಮೆಂಟ್ ಆಗಿತ್ತು. ಈ ಕುರಿತು ಕಂಪ್ಲೀಟ್ ಸ್ಟೋರಿ ಇಲ್ಲಿದೆ.
ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ನಲ್ಲಿ ದೇಶದ (Nation) ಅತ್ಯುನ್ನತ ನಾಗರಿಕ ಪ್ರಶಸ್ತಿ (Prize) ಪ್ರದಾನ ಸಮಾರಂಭ ನಡೆಯುತ್ತಿತ್ತು. ಗಂಭೀರ ಹಾಗೂ ಅತ್ಯಂತ ಶಿಸ್ತುಬದ್ಧ ವಾತಾವರಣ (Environment). ದೇಶದ ಪ್ರಮುಖ ಗಣ್ಯರು, ಮಂತ್ರಿಗಳು ಮತ್ತು ಸಾಧಕರು ಅಲ್ಲಿ ನೆರೆದಿದ್ದರು. ಆದರೆ, ಆ ಕ್ಷಣ ಇಡೀ ಸಭಾಂಗಣದಲ್ಲಿದ್ದವರ ಕಣ್ಣಾಲಿಗಳು ಒದ್ದೆಯಾಗುವಂತಹ, ಇಂಟರ್ನೆಟ್ (Internet) ಜಗತ್ತನ್ನೇ ಭಾವುಕಗೊಳಿಸುವಂತಹ ಒಂದು ಅಪರೂಪದ ದೃಶ್ಯಕ್ಕೆ ಸಾಕ್ಷಿಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಅದು ಕೇವಲ ಪ್ರಶಸ್ತಿ ವಿಜೇತರೊಬ್ಬರ ಗೌರವದ ಕ್ಷಣವಾಗಿರಲಿಲ್ಲ, ಬದಲಿಗೆ ಭಾರತೀಯ ಸಾಂಪ್ರದಾಯಿಕ (Indian Culture) ಕಲೆಗೆ ಸಿಕ್ಕ ಪರಮೋಚ್ಚ ಮನ್ನಣೆ ಮತ್ತು ದೇಶದ ಪ್ರಧಾನಿಯವರ ಹೃದಯ ವೈಶಾಲ್ಯತೆಗೆ ಸಾಕ್ಷಿಯಾದ ಭಾವನಾತ್ಮಕ ಮೂಮೆಂಟ್ ಆಗಿತ್ತು.
ಪುದುಚೇರಿ ಮಣ್ಣಿನ ಮಗ, 80ರ ಹರೆಯದ ಸಿಲಂಬಮ್ ದಂತಕಥೆ ಕೆ. ಪಳನಿವೇಲ್ ಅವರ ಹೆಸರನ್ನು ಪ್ರಶಸ್ತಿ ಸ್ವೀಕರಿಸಲು ಘೋಷಿಸಿದಾಗ ಇಡೀ ಸಭಾಂಗಣದಲ್ಲಿ ಚಪ್ಪಾಳೆಯ ಗಿಡಗುಟ್ಟಿತು. ಸಾಂಪ್ರದಾಯಿಕ ಉಡುಪಿನಲ್ಲಿ, ಮುಖದಲ್ಲಿ ದಶಕಗಳ ಕಠಿಣ ತಪಸ್ಸಿನ ತೇಜಸ್ಸನ್ನು ಹೊತ್ತು ಪಳನಿವೇಲ್ ಅವರು ವೇದಿಕೆಯತ್ತ ಹೆಜ್ಜೆ ಹಾಕಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುವ ಮುನ್ನ, ಮುಂಭಾಗದ ಆಸನದಲ್ಲಿ ಕುಳಿತಿದ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಕಂಡ ತಕ್ಷಣವೇ ಪಳನಿವೇಲ್ ಅವರ ಕಣ್ಣುಗಳಲ್ಲಿ ಕೃತಜ್ಞತೆಯ ಭಾವ ಮೂಡಿತು. ಅವರು ಪ್ರಧಾನಿಯವರ ಸನಿಹಕ್ಕೆ ಬಂದು, ಭಾರತೀಯ ಪರಂಪರೆಯಂತೆ ಅತ್ಯಂತ ವಿನಮ್ರವಾಗಿ ತಲೆಬಾಗಿ ನಮಸ್ಕರಿಸಿದರು.
ಆಗ ನಡೆದ ದೃಶ್ಯ ಇಡೀ ದೇಶದ ಜನರ ಹೃದಯ ಮುಟ್ಟುವಂತಿತ್ತು. ಸಾಧಕರೊಬ್ಬರು ತಮ್ಮ ಮುಂದೆ ನಮಸ್ಕರಿಸುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿಯವರು ಕೇವಲ ಕೈಮುಗಿದು ಸುಮ್ಮನಾಗಲಿಲ್ಲ. ಪ್ರಧಾನಿ ಎಂಬ ಶಿಷ್ಟಾಚಾರದ ಗತ್ತನ್ನು ಬದಿಗಿಟ್ಟು, ತಕ್ಷಣವೇ ತಮ್ಮ ಕುರ್ಚಿಯಿಂದ ಎದ್ದು ನಿಂತರು. ಮುಖದಲ್ಲಿ ಆತ್ಮೀಯ ನಗು ಬೀರುತ್ತಾ, ಮುಂದೆ ಧಾವಿಸಿ ಪಳನಿವೇಲ್ ಅವರ ಎರಡೂ ಕೈಗಳನ್ನು ತಮ್ಮ ಕೈಗಳಲ್ಲಿ ಗಟ್ಟಿಯಾಗಿ ಹಿಡಿದುಕೊಂಡರು.
ಆ ವೃದ್ಧ ಸಾಧಕನ ಕಣ್ಣುಗಳಲ್ಲಿನ ಆನಂದಬಾಷ್ಪ, ಮೋದಿಯವರ ಮುಖದಲ್ಲಿದ್ದ ಅಪಾರ ಗೌರವದ ಭಾವನೆಗಳು ಅಲ್ಲಿ ನೆರೆದಿದ್ದವರಲ್ಲಿ ರೋಮಾಂಚನ ಉಂಟುಮಾಡಿದವು. ಪ್ರಧಾನಿಯವರು ಅವರ ಹೆಗಲ ಮೇಲೆ ಕೈಯಿಟ್ಟು ಸಮಾಧಾನಪಡಿಸುತ್ತಾ, ಮುನ್ನಡೆಯಲು ಹಾರೈಸಿದ ಆ ಒಂದು ಕ್ಷಣ ಇಡೀ ಸಮಾರಂಭದ ಅತ್ಯಂತ ಶ್ರೇಷ್ಠ ಹಾಗೂ ಭಾವುಕ ಕ್ಷಣವಾಗಿ ಇತಿಹಾಸದ ಪುಟ ಸೇರಿತು.
ಕೆ. ಪಳನಿವೇಲ್ ಅವರಿಗೆ ಸಿಕ್ಕ ಈ ಗೌರವ ಕೇವಲ ವ್ಯಕ್ತಿಯೊಬ್ಬನಿಗೆ ಸಂದ ಪುರಸ್ಕಾರವಲ್ಲ, ಅದು ತಮಿಳುನಾಡಿನ ಮತ್ತು ಭಾರತದ ಅತ್ಯಂತ ಪ್ರಾಚೀನ ಸಮರ ಕಲೆಯಾದ ‘ಸಿಲಂಬಮ್’ಗೆ ಸಂದ ಜಯ. ಬಿದಿರಿನ ಕೋಲುಗಳನ್ನು ಬಳಸಿ ಆಡುವ ಈ ಸಮರ ಕಲೆ ಕಣ್ಮರೆಯಾಗುವ ಹಂತ ತಲುಪಿದ್ದಾಗ, ತಮ್ಮ ಇಡೀ ಜೀವನವನ್ನೇ ಈ ಕಲೆಯ ಉಳಿವಿಗಾಗಿ ಮುಡುಪಾಗಿಟ್ಟವರು ಪಳನಿವೇಲ್. ದಶಕಗಳ ಕಾಲ ಯಾವುದೇ ಪ್ರಚಾರದ ಹಪಾಹಪಿಯಿಲ್ಲದೆ, ಪುದುಚೇರಿಯ ಸಣ್ಣ ಹಳ್ಳಿಗಳಿಂದ ಹಿಡಿದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದವರೆಗೆ ಸಿಲಂಬಮ್ ಕಲೆಯನ್ನು ಕೊಂಡೊಯ್ದ ಹೆಗ್ಗಳಿಕೆ ಇವರದ್ದು. ಹೊಸ ಪೀಳಿಗೆಗೆ ಈ ದೇಶಿ ಸಂಸ್ಕೃತಿಯನ್ನು ಧಾರೆ ಎರೆಯಲು ಅವರು ತಮ್ಮ ಜೀವನದ ಯೌವನ, ಶ್ರಮ ಮತ್ತು ಪ್ರತಿಯೊಂದು ಕ್ಷಣವನ್ನೂ ತ್ಯಾಗ ಮಾಡಿದ್ದಾರೆ.
Padma Shri Award Ceremony: ಕುರ್ಚಿ ಬಿಟ್ಟು ಎದ್ದು ಬಂದು ಕೈಹಿಡಿದ ಮೋದಿ; ಪ್ರಧಾನಿ ಹೃದಯ ಗೆದ್ದ ಆ ಪದ್ಮ ಪ್ರಶಸ್ತಿ ವಿಜೇತರು ಯಾರು? ಇಲ್ಲಿದೆ ವೈರಲ್ ವಿಡಿಯೋದ ಅಸಲಿ ಕಥೆ!













