ವಾರಪೂರ್ತಿ ಕೆಲಸದ ಒತ್ತಡ, ಟ್ರಾಫಿಕ್, ಗಡಿಬಿಡಿಯ ನಡುವೆ ವೀಕೆಂಡ್ ಬಂದರೆ ಸಾಕು, ಮನೆಯಲ್ಲೇ ಕುಳಿತು ಒಳ್ಳೆಯ ಸಿನಿಮಾ ಅಥವಾ ವೆಬ್ ಸೀರೀಸ್ ನೋಡಬೇಕೆಂಬ ಆಸೆ ಎಲ್ಲರಲ್ಲೂ ಇರುತ್ತದೆ. ಇಂತಹ ಮನರಂಜನೆ ಪ್ರಿಯರಿಗಾಗಿ ಈ ವಾರ ಹಲವು ಹೊಸ ಸಿನಿಮಾಗಳು ಪ್ರಮುಖ OTT ವೇದಿಕೆಗಳಲ್ಲಿ ಬಿಡುಗಡೆಯಾಗಿವೆ. ಕ್ರೈಂ ಥ್ರಿಲ್ಲರ್ನಿಂದ ಹಿಡಿದು ಫ್ಯಾಂಟಸಿ, ಕುಟುಂಬ ಕಥೆ, ರೊಮ್ಯಾಂಟಿಕ್ ಡ್ರಾಮಾ ಹಾಗೂ ಕಾಮಿಡಿವರೆಗೆ ವಿಭಿನ್ನ ಶೈಲಿಯ ಕಂಟೆಂಟ್ ಈ ವಾರ ವೀಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. ಮುಖ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಬಿಡುಗಡೆಯಾಗಿರುವ ಹೊಸ ಸಿನಿಮಾಗಳ ಮಾಹಿತಿ ಇಲ್ಲಿದೆ.













