Last Updated:
ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹದಿಂದಾಗಿ ಈಶಾ ಫೌಂಡೇಶನ್ನ 77 ಜನರು ನಾಪತ್ತೆಯಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ಹೊರಬಂದಿದ್ದು, ಸದ್ಗುರು ಅವರು ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಈ ಮಾಹಿತಿ ಹಂಚಿಕೊಂಡಿದ್ದಾರೆ.
ನೇಪಾಳ: ಶತಮಾನದಲ್ಲೇ ಕಂಡು ಕೇಳರಿಯದ ಭೀಕರ ಪ್ರವಾಹಕ್ಕೆ ನೇಪಾಳ (Nepal) ಸ್ಮಶಾನವಾಗಿ ಹೋಗಿದೆ. ಮೇಘಸ್ಫೋಟವಾಗಿ (Cloudburst) 40ಕ್ಕೂ ಹೆಚ್ಚು ಗ್ರಾಮಗಳೇ ಸರ್ವನಾಶವಾಗಿ ಹೋಗಿದೆ. 110ಕ್ಕೂ ಹೆಚ್ಚು ಭಾರತೀಯರು, 200 ವಿದೇಶಿಯರು ಸೇರಿ ಸಾವಿರಕ್ಕೂ ಹೆಚ್ಚು ಜನ ಕಣ್ಮರೆಯಾಗಿದ್ದಾರೆ. ಕೊಚ್ಚಿಹೋದ ಮನೆಗಳಿಗೆ ಲೆಕ್ಕನೇ ಇಲ್ಲ. ಸುನಾಮಿ ಅಪ್ಪಳಿಸಿದ ಒಂದೊಂದು ದೃಶ್ಯಗಳಂತೂ ಘನಘೋರವಾಗಿದೆ.














