IND vs ENG: ರೋಹಿತ್ ಶತಕ ವ್ಯರ್ಥ: ಭಾರತಕ್ಕೆ 27 ರನ್​ಗಳ ರೋಚಕ ಸೋಲು, 2-1ರಲ್ಲಿ ಸರಣಿ ಗೆದ್ದ ಇಂಗ್ಲೆಂಡ್ | ಕ್ರೀಡಾ ಸುದ್ದಿ | ACTPnews

ಭಾರತ vs ಇಂಗ್ಲೆಂಡ್


Last Updated:

ಭಾರತ ತಂಡ ಇಂಗ್ಲೆಂಡ್ (India vs England)ವಿರುದ್ಧದ ಅಂತಿಮ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ 27 ರನ್‌ಗಳ ಆಘಾತಕಾರಿ ಸೋಲು ಕಂಡಿದೆ. ಈ ಸೋಲಿನೊಂದಿಗೆ ಪ್ರವಾಸಿ ಭಾರತ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತು

ಭಾರತ vs ಇಂಗ್ಲೆಂಡ್
ಭಾರತ vs ಇಂಗ್ಲೆಂಡ್

ನಾಯಕ ರೋಹಿತ್ ಶರ್ಮಾ (Rohit Sharma) ಅವರ ಆಕರ್ಷಕ ಶತಕದ ಹೋರಾಟದ ಹೊರತಾಗಿಯೂ ಭಾರತ ತಂಡವು ಇಂಗ್ಲೆಂಡ್ (India vs England) ವಿರುದ್ಧದ ಅಂತಿಮ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ 27 ರನ್‌ಗಳ ಆಘಾತಕಾರಿ ಸೋಲು ಕಂಡಿದೆ. ಈ ಸೋಲಿನೊಂದಿಗೆ ಪ್ರವಾಸಿ ಭಾರತ ತಂಡವು ಮೂರು ಪಂದ್ಯಗಳ ಏಕದಿನ ಸರಣಿಯನ್ನು 1-2 ಅಂತರದಿಂದ ಕಳೆದುಕೊಂಡಿತು. ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ್ದ ಭಾರತ, ನಂತರ ಸತತ 2 ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಸರಣಿ ಗೆಲ್ಲುವ ಸುವರ್ಣ ಅವಕಾಶವನ್ನು ಕೈಚೆಲ್ಲಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 387 ರನ್​ಗಳ ಬೃಹತ್ ಮೊತ್ತ ದಾಖಲಿಸಿತ್ತು. ಗುರಿ ಬೆನ್ನಟ್ಟಿದ ಭಾರತ 360 ರನ್​ಗಳಿಸಲಷ್ಟೇ ಶಕ್ತವಾಯಿತು. ರೋಹಿತ್ 138 ರನ್​ಗಳಿಸಿ ನಡೆಸಿದ ಹೋರಾಟ ವ್ಯರ್ಥವಾಯಿತು.

ಇಂಗ್ಲೆಂಡ್ ಸವಾಲಿನ ಮೊತ್ತ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡಕ್ಕೆ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಬಲವಾದ ಅಡಿಪಾಯ ಹಾಕಿಕೊಟ್ಟರು. ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಆತಿಥೇಯರು, ನಿಯಮಿತವಾಗಿ ರನ್ ಕದಿಯುತ್ತಾ ಸಾಗಿದರು. ಆರಂಭಿಕರಾದ ಬೆನ್​ ಡಕೆಟ್ 141 ರನ್​ಗಳಿಸಿದರೆ, ಜೇಕಬ್ ಬೆಥೆಲ್ 91, ಜೋ ರೂಟ್ ಅಜೇಯ 74, ಜೋಸ್ ಬಟ್ಲರ್ ಅಜೇಯ 41 ರನ್​ಗಳಿಸಿ ಅಬ್ಬರಿಸಿದರು.

ಭಾರತದ ಪರ ಪ್ರಸಿದ್ಧ್ ಕೃಷ್ಣ 10 ಓವರ್​ಗಳಲ್ಲಿ ರನ್​ ನೀಡಿ 69ಕ್ಕೆ 2 ವಿಕೆಟ್ ಪಡೆದರೆ, ಪ್ರಿನ್ಸ್​ ಯಾದವ್​ 79ಕ್ಕೆ1 ವಿಕೆಟ್ ಪಡೆದರು. ಅರ್ಷದೀಪ್ ಸಿಂಗ್ 72 ರನ್ ಹಾಗೂ ಗುರ್ನೂರ್ ಬ್ರಾರ್ 10 ಓವರ್​​​ಗಳಲ್ಲಿ 97 ರನ್ ಬಿಟ್ಟುಕೊಟ್ಟು ದುಬಾರಿಯಾದರು.

ರೋಹಿತ್ ಹೋರಾಟ ವ್ಯರ್ಥ

388 ರನ್​ಗಳ ಕಠಿಣ ಗುರಿಯನ್ನು ಬೆನ್ನಟ್ಟಿದ ಭಾರತ ಕೂಡ ಉತ್ತಮ ಆರಂಭ ಪಡೆದುಕೊಂಡಿತು. ನಾಯಕ ಶುಭ್​ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು. ಮೊದಲ ವಿಕೆಟ್​ ಜೊತೆಯಾಟದಲ್ಲಿ ಈ ಇಬ್ಬರು 142 ರನ್​ಗಳ ಜೊತೆಯಾಟ ನಡೆಸಿದರು. ಗಿಲ್ 84 ಎಸೆತಗಳಲ್ಲಿ 10 ಬೌಂಡರಿ, 1 ಸಿಕ್ಸರ್ ಸಹಿತ 77 ರನ್​ಗಳಿಸಿದರು.

ಇಂಗ್ಲೆಂಡ್ ಬೌಲರ್‌ಗಳನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದ ರೋಹಿತ್ ಆಕರ್ಷಕ ಶತಕ ಸಿಡಿಸಿ ಮಿಂಚಿದರು. 85 ಶತಕಗಳಿಸಿದ ಅವರು ಒಟ್ಟಾರೆ 110 ಎಸೆತಗಳಲ್ಲಿ 17 ಬೌಂಡರಿ, 5 ಸಿಕ್ಸರ್​ಗಳ ಸಹಿತ 138 ರನ್​ಗಳಿಸಿ ನಿರ್ಗಮಿಸಿದರು. ರೋಹಿತ್ 2ನೇ ವಿಕೆಟ್ ಜೊತೆಯಾಟದಲ್ಲಿ 113 ರನ್​ಗಳಿಸಿದ್ದರು. ಆದರೆ ರೋಹಿತ್ ವಿಕೆಟ್ ಬಳಿಕ ಭಾರತದ ಗೆಲುವಿನ ಆಸೆ ಕಮರಿತು.

ಕೈಕೊಟ್ಟ ಮಧ್ಯಮ ಕ್ರಮಾಂಕ

ಇಶಾನ್ ಕಿಶನ್ 12 ಎಸೆತಗಳಲ್ಲಿ 14 ರನ್​ಗಳಿಸಿ ಔಟ್ ಆಗಿ ಸ್ಯಾಮ್ ಕರ್ರನ್​ಗೆ ವಿಕೆಟ್ ಒಪ್ಪಿಸಿದರು. ಅದೇ ಓವರ್​​ನಲ್ಲಿ 3 ಎಸೆತಗಳಲ್ಲಿ ಖಾತೆ ತೆರೆಯದೇ ಶ್ರೇಯಸ್ ಅಯ್ಯರ್ ಕೂಡ ನಿರ್ಗಮಿಸಿದರು. ಸತತ ವಿಕೆಟ್​ಗಳಿಂದ ಒತ್ತಡಕ್ಕೆ ಒಳಗಾದ ಕೊಹ್ಲಿ ಕೂಡ 11 ರನ್​ಗಳ ಅಂತರದಲ್ಲಿ ಅದೇ ಸ್ಯಾಮ್​ ಕರ್ರನ್​ಗೆ ವಿಕೆಟ್ ಒಪ್ಪಿಸಿದರು. ಕೊಹ್ಲಿ ವಿಕೆಟ್​ನೊಂದಿಗೆ ಭಾರತದ ಗೆಲುವಿನ ಆಸೆಯೂ ಕಮರಿತು. ಕೆಎಲ್ ರಾಹುಲ್ 8 ಎಸೆತಗಳಲ್ಲಿ 12, ಅಕ್ಷರ್ ಪಟೇಲ್ 2 ರನ್ಗಳಿಸಿ ಔಟ್ ಆದರು. ಅರ್ಷದೀಪ್ ಸಿಂಗ್ ಅಜೇಯ 15, ಗುರ್ನೂರ್ ಬ್ರಾರ್ ಅಜೇಯ 18 ರನ್​ಗಳಿಸಿದರು.

ಇಂಗ್ಲೆಂಡ್ ಪರ ಸ್ಯಾಮ್ ಕರ್ರನ್ 75ಕ್ಕೆ4, ಜೋಫ್ರಾ ಆರ್ಚರ್ 63ಕ್ಕೆ1, ಆದಿಲ್ ರಶೀದ್ 64ಕ್ಕೆ1, ಜೇಕಬ್ ಬೆಥೆಲ್ 49ಕ್ಕೆ1 ವಿಕೆಟ್ ಪಡೆದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed