NEET Exam-Narendra Modi: ಮೋದಿ ಮತ್ತೊಂದು ವಿಡಿಯೋ ಸಂದೇಶ! ಪರೀಕ್ಷೆ ಅಕ್ರಮ ತಡೆಗೆ ಟಾಸ್ಕ್ ಫೋರ್ಸ್, ನಂದನ್ ನಿಲೇಕಣಿಗೆ ಹೊಣೆ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೋದಿ-ನಂದನ್ ನಿಲೇಕಣಿ


Last Updated:

NEET Exam-Narendra Modi: ನಾಳೆ ಸಂಸತ್‌ನಲ್ಲಿ ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ-2026 ಮಂಡನೆ ಮಾಡಲು ಮುಂದಾಗಿದ್ದು, ಅದರಂತೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ರೆ 10 ಕೋಟಿ ರೂಪಾಯಿ ದಂಡ, 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅದರ ನಡುವೆ ಖ್ಯಾತ ಉದ್ಯಮಿ, ಇನ್ಫೋಸಿಸ್ ಸಹ ಸಂಸ್ಥಾಪಕ, ಕನ್ನಡಿಗ ನಂದನ್ ನಿಲೇಕಣಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ.

ಮೋದಿ-ನಂದನ್ ನಿಲೇಕಣಿ
ಮೋದಿ-ನಂದನ್ ನಿಲೇಕಣಿ

ದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯ (NEET question paper leak) ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿದೆ. ಸಿಜೆಪಿ (CJP) ನಾಯಕರಿಗೆ ಮಾತು ಕೊಟ್ಟಂತೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರೋರಿಗೆ ಕಠಿಣ ಶಿಕ್ಷೆ ನೀಡೋದಾಗಿ ಕೇಂದ್ರ ಸರ್ಕಾರ ಮಾತುಕೊಟ್ಟಿತ್ತು. ಅದರಂತೆ ನಾಳೆ ಸಂಸತ್‌ನಲ್ಲಿ (Parliament) ಸಾರ್ವಜನಿಕ ಪರೀಕ್ಷೆಗಳ ತಿದ್ದುಪಡಿ ಮಸೂದೆ-2026 (Public Examinations Amendment Bill-2026) ಮಂಡನೆ ಮಾಡಲು ಮುಂದಾಗಿದ್ದು, ಅದರಂತೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ರೆ 10 ಕೋಟಿ ರೂಪಾಯಿ ದಂಡ, 10 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅದರ ನಡುವೆ ಖ್ಯಾತ ಉದ್ಯಮಿ, ಇನ್ಫೋಸಿಸ್ ಸಹ ಸಂಸ್ಥಾಪಕ, ಕನ್ನಡಿಗ ನಂದನ್ ನಿಲೇಕಣಿ (Nandan Nilekani) ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ.

ನಂದನ್ ನಿಲೇಕಣಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್

ಪರೀಕ್ಷಾ ಸುಧಾರಣೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ನಿರ್ಧಾರ ಕೈಗೊಂಡಿದ್ದು, ಉನ್ನತ ಅಧಿಕಾರದ ಕಾರ್ಯಪಡೆ (ಟಾಸ್ಕ್ ಫೋರ್ಸ್) ರಚಿಸಲಾಗಿದೆ. ಅದರ ಮುಖ್ಯಸ್ಥರಾಗಿ ಖ್ಯಾತ ಉದ್ಯಮಿ ನಂದನ್ ನಿಲೇಕಣಿ ಅವರನ್ನು ನೇಮಿಸಲಾಗಿದೆ. ಈ ಬಗ್ಗೆ ವಿಡಿಯೋ ಸಂದೇಶ ನೀಡಿರುವ ಮೋದಿ, ಪರೀಕ್ಷಾ ಸುಧಾರಣೆಗಳಿಗಾಗಿ ವಿಶ್ವಪ್ರಸಿದ್ಧ ತಂತ್ರಜ್ಞಾನ ತಜ್ಞ ಶ್ರೀ ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಹೈ ಪವರ್ಡ್ ಟಾಸ್ಕ್ ಫೋರ್ಸ್ ಅನ್ನು ರಚಿಸಲಾಗಿದೆ ಅಂತ ಘೋಷಿಸಿದ್ದಾರೆ.

ವಿಡಿಯೋದಲ್ಲಿ ಘೋಷಣೆ ಮಾಡಿದ ನರೇಂದ್ರ ಮೋದಿ

ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ 1 ನಿಮಿಷ 19 ಸೆಕೆಂಡ್‌ನ ವಿಡಿಯೋ ಶೇರ್ ಮಾಡಿರುವ ನರೇಂದ್ರ ಮೋದಿ, ಪರೀಕ್ಷೆಗಳ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಿ, ಪ್ರಶ್ನೆಪತ್ರಿಕೆ ಸೋರಿಕೆಗಳನ್ನು ತಡೆಯಲು, ನಂದನ್ ನಿಲೇಕಣಿ ಅವರ ನೇತೃತ್ವದಲ್ಲಿ ಒಂದು ಪ್ರಬಲ ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.

ಪರೀಕ್ಷಾ ಸುಧಾರಣೆಗೆ ಟಾಸ್ಕ್ ಫೋರ್ಸ್

ಪ್ರಧಾನಿ ನರೇಂದ್ರ ಮೋದಿ ಇಂದು ಹೊಸ ವೀಡಿಯೊವನ್ನು ಹಂಚಿಕೊಂಡಿದ್ದು, ಪರೀಕ್ಷಾ ಸುಧಾರಣೆಗಳ ಕುರಿತು ಉನ್ನತ ಮಟ್ಟದ ಕಾರ್ಯಪಡೆ ರಚನೆಯನ್ನು ಘೋಷಿಸಿದ್ದಾರೆ, ಇದಕ್ಕೆ ತಂತ್ರಜ್ಞಾನ ತಜ್ಞ, ಖ್ಯಾತ ಉದ್ಯಮಿ ನಂದನ್ ನಿಲೇಕಣಿ ನೇತೃತ್ವ ವಹಿಸಲಿದ್ದಾರೆ. ಭಾರತದ ಪರೀಕ್ಷಾ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ, ವಿಶ್ವಾಸಾರ್ಹ ಮತ್ತು ತಂತ್ರಜ್ಞಾನ ಆಧಾರಿತವಾಗಿಸಲು ಕ್ರಮಗಳನ್ನು ಸಮಿತಿ ಶಿಫಾರಸು ಮಾಡುತ್ತದೆ ಎಂದು ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕೆಲಸ

2026 ರ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆಯ ನಂತರ ವಿದ್ಯಾರ್ಥಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಸರ್ಕಾರ ಈಗಾಗಲೇ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪ್ರಧಾನಿ ಹೇಳಿದ್ದಾರೆ. ಸುಧಾರಣೆಗಳು ಈಗ ಭವಿಷ್ಯಕ್ಕಾಗಿ ಪರೀಕ್ಷಾ ವ್ಯವಸ್ಥೆಯನ್ನು ಬಲಪಡಿಸುವತ್ತ ಗಮನಹರಿಸುತ್ತವೆ ಎಂದು ಅವರು ಹೇಳಿದ್ರು.

ಆಟ ಆಡಿದವರು ಜೈಲಲ್ಲಿ ಕೊಳೆಯುತ್ತಿದ್ದಾರೆ

ವಿದ್ಯಾರ್ಥಿಗಳ ಕಲ್ಯಾಣಕ್ಕಾಗಿ ಭಾರತ ಸರ್ಕಾರ ನಿರಂತರವಾಗಿ ಹಲವಾರು ಪ್ರಮುಖ ಕ್ರಮಗಳನ್ನು ತೆಗೆದುಕೊಂಡಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡಿದವರು ಈಗ ಜೈಲುಗಳಲ್ಲಿ ಕೊಳೆಯುತ್ತಿದ್ದಾರೆ. ನಾವು ಈಗಾಗಲೇ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳನ್ನು ಸ್ಥಾಪಿಸಿದ್ದೇವೆ. ನಾಳೆ, ಸಂಸತ್ತಿನಲ್ಲಿ, ಕಠಿಣ ನಿಬಂಧನೆಗಳನ್ನು ಒಳಗೊಂಡಿರುವ ಹೊಸ ಕಾನೂನೊಂದಿಗೆ ನಾವು ಮುಂದುವರಿಯುತ್ತೇವೆ” ಎಂದು ಮೋದಿ ಹೇಳಿದರು.

ನಂದನ್ ನಿಲೇಕಣಿ ಯಾರು?

ಕರ್ನಾಟಕ ಮೂಲದ ನಂದನ್ ಮೋಹನರಾವ್ ನಿಲೇಕಣಿ ಒಬ್ಬ ಭಾರತೀಯ ಉದ್ಯಮಿ ಹಾಗೂ ತಂತ್ರಜ್ಞ. ಇನ್ಫೋಸಿಸ್ ಸಹ ಸಂಸ್ಥಾಪಕಾದ ಅವರು, ಇನ್ಫೋಸಿಸ್‌ನ ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿದ್ದಾರೆ. ಇವರು ಈಗಾಗಲೇ ಆಧಾರ್ ಅಂದರೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಅಧ್ಯಕ್ಷರಾಗಿದ್ದರು. ಇನ್ಫೋಸಿಸ್‌ನಲ್ಲಿ ಯಶಸ್ವಿ ವೃತ್ತಿಜೀವನದ ನಂತರ, ಅವರು ಭಾರತ ಸರ್ಕಾರದ ತಂತ್ರಜ್ಞಾನ ಸಮಿತಿಯಾದ ಟಿಎಜಿಯುಪಿಯ ಮುಖ್ಯಸ್ಥರಾಗಿದ್ದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports