Last Updated:
ಸಿನಿಮಾವೊಂದಕ್ಕೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿರುವ ನಯನತಾರಾ, ತಮ್ಮ ವೃತ್ತಿಜೀವನದ ಆರಂಭದಲ್ಲಿ ಒಂದು ಅಸೈನ್ಮೆಂಟ್ಗೆ ಕೇವಲ 2,000ರಿಂದ 3,000 ರೂಪಾಯಿ ಪಡೆದಿದ್ದರಂತೆ.
ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಇಂದು ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ನಯನತಾರಾ (Nayanthara) ಪ್ರಮುಖ ಸ್ಥಾನದಲ್ಲಿದ್ದಾರೆ. ಲೇಡಿ ಸೂಪರ್ಸ್ಟಾರ್ ಎಂಬ ಬಿರುದಿನೊಂದಿಗೆ ಅಪಾರ ಅಭಿಮಾನಿ ಬಳಗ ಹೊಂದಿರುವ ನಟಿ , ತಮಿಳು, ತೆಲುಗು, ಮಲಯಾಳಂ ಮಾತ್ರವಲ್ಲದೆ ಬಾಲಿವುಡ್ನಲ್ಲೂ ತಮ್ಮದೇ ಛಾಪು ಮೂಡಿಸಿದ್ದಾರೆ. ಆದರೆ ಈ ಮಟ್ಟದ ಯಶಸ್ಸಿನ ಹಿಂದೆ ನಟಿಯ ಸುದೀರ್ಘ ಪರಿಶ್ರಮದ ಕಥೆಯಿದೆ. ಇಂದು ಸಿನಿಮಾವೊಂದಕ್ಕೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಿರುವ ನಯನತಾರಾ, ತಮ್ಮ ವೃತ್ತಿಜೀವನದ ಆರಂಭದಲ್ಲಿ ಒಂದು ಅಸೈನ್ಮೆಂಟ್ಗೆ ಕೇವಲ 2,000ರಿಂದ 3,000 ರೂಪಾಯಿ ಪಡೆದಿದ್ದರಂತೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ತಮ್ಮ ಆರಂಭದ ದಿನಗಳನ್ನು ಮೆಲುಕು ಹಾಕಿದ್ದು, ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.














