Last Updated:
ತಮಿಳು ನಟ ಧನುಷ್, ಮಲೆಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ, (Mammootty) ನಟ ಯಾಮಿ ಗೌತಮ್,(Yami Gautam) ನಟ ಕಾರ್ತಿಕ್ ಆರ್ಯನ್,(Kartik Aaryan) ಡೈರೆಕ್ಟರ್ ಸುಮಂತ್ ಭಟ್, ಕನ್ನಡ ನಟ-ನಿರ್ದೇಶಕ ಶಿವಧ್ವಜ್ 2024 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ.
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ (72nd National Film Awards) ಪ್ರದಾನ ಮಾಡಲಾಗಿದೆ. ಗುಜರಾತ್ನ ಏಕತಾ ನಗರದಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದೆ. ತಮಿಳು ನಟ ಧನುಷ್, ಮಲೆಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ, (Mammootty) ನಟ ಯಾಮಿ ಗೌತಮ್,(Yami Gautam) ನಟ ಕಾರ್ತಿಕ್ ಆರ್ಯನ್,(Kartik Aaryan) ಡೈರೆಕ್ಟರ್ ಸುಮಂತ್ ಭಟ್, ಕನ್ನಡ ನಟ-ನಿರ್ದೇಶಕ ಶಿವಧ್ವಜ್ 2024 ನೇ ಸಾಲಿನ ರಾಷ್ಟ್ರೀಯ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಸಮಾರಂಭದಲ್ಲಿ ಯಾರೆಲ್ಲ ಯಾವ ಚಿತ್ರಕ್ಕಾಗಿ ಪ್ರಶಸ್ತಿ ಪಡೆದರು ಅನ್ನೋದು ಇಲ್ಲಿದೆ ಓದಿ.
ಕನ್ನಡದಲ್ಲಿ ಮಿಥ್ಯ ಚಿತ್ರಕ್ಕೆ 2024 ನೇ ಸಾಲಿನ ಪ್ರಶಸ್ತಿ ಬಂದಿದೆ. ಕನ್ನಡ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನ ಈ ಚಿತ್ರಕ್ಕೆ ನೀಡಿ ಗೌರವಿಸಲಾಗಿದೆ. ಈ ಪ್ರಶಸ್ತಿಯನ್ನ ಚಿತ್ರದ ನಿರ್ದೇಶಕ ಸುಮಂತ್ ಭಟ್ ಸ್ವೀಕರಿಸಿದ್ದಾರೆ.
ಈ ಚಿತ್ರದ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿಯನ್ನ ನಟಿ ರೂಪಶ್ರೀ ವರ್ಕಾಡಿ ಸ್ವೀಕರಿಸಿದರು. ಈ ಚಿತ್ರಕ್ಕಾಗಿ ಬಾಲ ನಟ ಅತಿಶ್ ಎಸ್. ಶೆಟ್ಟಿ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಸ್ವೀಕರಿಸಿದರು.
ತುಳು ಭಾಷೆಯ ಇಂಬು ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ಈ ಚಿತ್ರಕ್ಕೆ ಪ್ರಶಸ್ತಿ ಬಂದಿದೆ. ಡೈರೆಕ್ಟರ್ ಶಿವಧ್ವಜ್ ಪ್ರಶಸ್ತಿಯನ್ನ ಸ್ವೀಕರಿಸಿದ್ದಾರೆ.
ತಮಿಳು ಭಾಷೆಯ ಕ್ಯಾಪ್ಟನ್ ಮಿಲ್ಲರ್ ಚಿತ್ರಕ್ಕೂ ಪ್ರಶಸ್ತಿ ಬಂದಿದೆ. ವಿಶೇಷ ಉಲ್ಲೇಖ ವಿಭಾಗದಲ್ಲಿ ನಟ ಧನುಷ್ ಅವರು ಈ ಒಂದು ಚಿತ್ರದ ಅದ್ಭುತ ಅಭಿನಯಕ್ಕೆ ಪ್ರಶಸ್ತಿ ಸ್ವೀಕರಿಸಿದರು.
ಈ ಒಂದು ಪ್ರಶಸ್ತಿ ಇಬ್ಬರಿಗೆ ಹೋಗಿದೆ. ಮಲೆಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ಅವರಿಗೆ ಬ್ರಹ್ಮಯುಗಂ ಚಿತ್ರದ ನಟನೆಗೆ ಅತ್ಯುತ್ತಮ ಪ್ರಶಸ್ತಿ ಬಂದಿದೆ. ಮಮ್ಮುಟ್ಟಿ ಈ ಪ್ರಶಸ್ತಿ ಸ್ವೀಕರಿಸಿದರು.
ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರಿಗೆ ಚಂದು ಚಾಂಪಿಯನ್ ಚಿತ್ರದ ಅಭಿನಯಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ. ನಟ ಕಾರ್ತಿಕ್ ಆರ್ಯನ್ ಈ ಪ್ರಶಸ್ತಿ ಸ್ವೀಕರಿಸಿದರು.
ಬಾಲಿವುಡ್ ನಟಿ ಯಾಮಿ ಗೌತಮ್ ಅತ್ಯುತ್ತಮ ನಟಿ ಪ್ರಶಸ್ತಿ ಸ್ವೀಕರಿಸಿದ್ದಾರೆ. ಆರ್ಟಿಕಲ್ 370 ಹಿಂದಿ ಚಿತ್ರಕ್ಕಾಗಿಯೇ ಯಾಮಿ ಗೌತಮ್ ಈ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಪುಷ್ಪ-2 ಚಿತ್ರದ ಅತ್ಯುತ್ತಮ ಚಿತ್ರಕತೆ ಪ್ರಶಸ್ತ್ರಿಯನ್ನ ಡೈರೆಕ್ಟರ್ ಸುಕುಮಾರ್ ಸ್ವೀಕರಿಸಿದರು. ತೆಲುಗು ಕಲ್ಕಿ 2898 AD ಚಿತ್ರಕ್ಕೆ ಅತ್ಯುತ್ತಮ ಜನಪ್ರಿಯ ಸಿನಿಮಾ ರಾಷ್ಟ್ರೀಯ ಪ್ರಶಸ್ತಿ ನೀಡಲಾಗಿದೆ.
ತೆಲುಗು ಲಕ್ಕಿ ಭಾಸ್ಕರ್ ಚಿತ್ರದ ಅತ್ಯುತ್ತಮ ಸಂಭಾಷಣೆಗಾಗಿಯೇ ವೆಂಕಿ ಅಟ್ಲೂರಿ ರಾಷ್ಟ್ರೀಯ ಪ್ರಶಸ್ತಿ ಸ್ವೀಕರಿಸಿದ್ದಾರೆ. ತಮಿಳಿನ ಅಮರನ್ ಚಿತ್ರದ ನಿರ್ದೇಶನಕ್ಕೆ ರಾಜಕುಮಾರ್ ಪೆರಿಯಸಾಮಿ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಯಾಮಿ ಗೌತಮ್ ಅಭಿನಯದ ಆರ್ಟಿಕಲ್ 370 ಚಿತ್ರಕ್ಕೆ ಅತ್ಯುತ್ತಮ ಚಲನಚಿತ್ರ (Best Feature Film) ಪ್ರಶಸ್ತಿ ಬಂದಿದೆ.
ಭಕ್ಷಕ್ ಚಿತ್ರದ ಅಭಿನಯಕ್ಕೆ ನಟ ಸಂಜಯ್ ಮಿಶ್ರಾ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹೀಗೆ ವಿವಿಧ ವಿಭಾಗದಲ್ಲಿ 2024 ನೇ ಸಾಲಿನ ಪ್ರಶಸ್ತ್ರಿಯನ್ನ ನೀಡಿ ಗೌರವಿಸಲಾಗಿದೆ. ಅನಂತ್ ನಾಗ್ ಅವರಿಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಅಂತ ಹೇಳಬಹುದು.














