Last Updated:
Narendra Modi: ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ವೇಳೆ ಮೆಟ್ರೋ ಪ್ರಯಾಣದ ಸಮಯದಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳು ಮತ್ತು ಇತರ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು.
ದೆಹಲಿ: ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಇಂದು ಮೆಟ್ರೋದಲ್ಲಿ (Delhi metro) ಯಾಣಿಸಿದ್ರು. ಈ ವೇಳೆ ಪುಟ್ಟ ಪುಟ್ಟ ಮಕ್ಕಳ (Children) ಜೊತೆ ಪ್ರಧಾನಿ ಸಂವಾದ ನಡೆಸಿದ್ರು. ದೆಹಲಿಯ (Delhi) ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್‌ನ (Shri Ram College of Commerce – SRCC) ಶತಮಾನೋತ್ಸವ ಸಮಾರಂಭದಲ್ಲಿ (centenary celebration) ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಶನಿವಾರ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸಿದರು. ಈ ವೇಳೆ ಮೆಟ್ರೋ ಪ್ರಯಾಣದ ಸಮಯದಲ್ಲಿ ಪ್ರಧಾನಿ ಮೋದಿ ವಿದ್ಯಾರ್ಥಿಗಳು ಮತ್ತು ಇತರ ಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು.














