Last Updated:
Narendra Modi Salary: ಜಗತ್ತಿನಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ (highest-paid Prime Minister) ಅಥವಾ ರಾಷ್ಟ್ರಾಧ್ಯಕ್ಷ (President) ಯಾರು? ಭಾರತದ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ತಿಂಗಳ ಸಂಬಳ ಎಷ್ಟು? ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಸಂಬಳ ಎಷ್ಟು ಅಂತ ನಿಮಗೆ ಗೊತ್ತಾ?
ಜಗತ್ತಿನಲ್ಲೇ ಅತೀ ಹೆಚ್ಚು ಸಂಬಳ ಪಡೆಯುವ ಪ್ರಧಾನಿ (highest-paid Prime Minister) ಅಥವಾ ರಾಷ್ಟ್ರಾಧ್ಯಕ್ಷ (President) ಯಾರು? ಭಾರತದ ಪ್ರಧಾನಿ ನರೇಂದ್ರ ಮೋದಿಯವರ (Narendra Modi) ತಿಂಗಳ ಸಂಬಳ ಎಷ್ಟು? ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಸಂಬಳ ಎಷ್ಟು ಅಂತ ನಿಮಗೆ ಗೊತ್ತಾ? ಹೀಗಿ ಹತ್ತಾರು ಕುತೂಹಲಕಾರಿ ಪ್ರಶ್ನೆಗಳು ಏಳೋದು ಸಹಜ. ಅಂದಹಾಗೆ ಸಿಂಗಾಪುರದ ಪ್ರಧಾನಿ (Singapore’s Prime Minister) ಲಾರೆನ್ಸ್ ವಾಂಗ್ (Lawrence Wong) ಅವರ ವಾರ್ಷಿಕ ವೇತನ ಮಾನದಂಡವನ್ನು ಶೇಕಡಾ 64ರಷ್ಟು ಹೆಚ್ಚಿಸಿ 2.2 ಮಿಲಿಯನ್ ಸಿಂಗಾಪುರ್ ಡಾಲರ್‌ನಿಂದ 3.6 ಮಿಲಿಯನ್ ಸಿಂಗಾಪುರ್ ಡಾಲರ್‌ಗೆ ಏರಿಸಲಾಗುತ್ತಿದೆ. ಇದು ಸುಮಾರು 2.85 ಮಿಲಿಯನ್ ಅಮೆರಿಕನ್ ಡಾಲರ್ ಅಥವಾ ಸುಮಾರು 26.9 ಕೋಟಿ ಭಾರತೀಯ ರೂಪಾಯಿಗೆ ಸಮನಾಗಿದೆ. ಈ ಹೆಚ್ಚಳದ ನಂತರ ಅವರು ವಿಶ್ವದಲ್ಲಿ ಅತಿ ಹೆಚ್ಚು ವೇತನ ಪಡೆಯುವ ಸರ್ಕಾರದ ಮುಖ್ಯಸ್ಥರಾಗಿದ್ದಾರೆ.
ಸಿಂಗಾಪುರ ಸರ್ಕಾರ ಈ ಉನ್ನತ ವೇತನವನ್ನು ಎರಡು ಮುಖ್ಯ ಕಾರಣಗಳಿಗಾಗಿ ಸಮರ್ಥಿಸುತ್ತದೆ. ಮೊದಲನೆಯದು, ಖಾಸಗಿ ವಲಯದ ಅತ್ಯುತ್ತಮ ಪ್ರತಿಭೆಗಳನ್ನು ರಾಜಕೀಯಕ್ಕೆ ಆಕರ್ಷಿಸುವುದು. ಎರಡನೆಯದು, ಭ್ರಷ್ಟಾಚಾರವನ್ನು ತಡೆಯುವುದು. ಅಂದರೆ, ನಾಯಕರಿಗೆ ಉತ್ತಮ ಸಂಬಳ ನೀಡಿದರೆ ಅವರು ಕಾನೂನುಬಾಹಿರ ಹಣಕ್ಕೆ ಕೈ ಹಾಕುವ ಸಾಧ್ಯತೆ ಕಡಿಮೆಯಾಗುತ್ತದೆ ಎಂಬುದು ಅಲ್ಲಿನ ನೀತಿ.
ಸಿಂಗಾಪುರದ ಸಾಮಾನ್ಯ ನಾಗರಿಕರ ಮಧ್ಯಮ ಮಾಸಿಕ ವೇತನ ಸುಮಾರು 5,775 ಸಿಂಗಾಪುರ್ ಡಾಲರ್. ಅಂದರೆ ಪ್ರಧಾನಿಯ ವೇತನಕ್ಕೂ ಸಾಮಾನ್ಯರ ವೇತನಕ್ಕೂ ದೊಡ್ಡ ಅಂತರವಿದೆ. ಜೀವನ ವೆಚ್ಚ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಈ ಹೆಚ್ಚಳಕ್ಕೆ ಟೀಕೆ ಬರುವುದು ಸ್ವಾಭಾವಿಕ. ಆದ್ದರಿಂದ ಪ್ರಧಾನಿ ವಾಂಗ್ ತಮ್ಮ ವೈಯಕ್ತಿಕ ವೇತನ ಹೆಚ್ಚಳವನ್ನು ಮುಂದಿನ ಐದು ವರ್ಷಗಳ ಕಾಲ ಸಂಪೂರ್ಣವಾಗಿ ದಾನಕ್ಕೆ ನೀಡುವುದಾಗಿ ಘೋಷಿಸಿದ್ದಾರೆ. ಅಂದರೆ, ಹೆಚ್ಚಿದ ಭಾಗ ಅವರ ಖಾಸಗಿ ಖಾತೆಗೆ ಹೋಗುವುದಿಲ್ಲ.
- ಸಿಂಗಾಪುರದ ಪ್ರಧಾನಿ ಲಾರೆನ್ಸ್ ವಾಂಗ್: 2.85 ಮಿಲಿಯನ್ ಅಮೆರಿಕನ್ ಡಾಲರ್, ಅಂದರೆ ಸುಮಾರು 26.9 ಕೋಟಿ ರೂಪಾಯಿ.
- ಹಾಂಗ್ ಕಾಂಗ್ ಮುಖ್ಯ ಕಾರ್ಯನಿರ್ವಾಹಕ ಜಾನ್ ಲೀ: 5.68 ಲಕ್ಷದಿಂದ 7.19 ಲಕ್ಷ ಅಮೆರಿಕನ್ ಡಾಲರ್, ಅಂದರೆ ಸುಮಾರು 5.00 ಕೋಟಿಯಿಂದ 6.33 ಕೋಟಿ ರೂಪಾಯಿ.
- ಸ್ವಿಟ್ಜರ್ಲೆಂಡ್ ಅಧ್ಯಕ್ಷರು: ಸುಮಾರು 4.46 ಕೋಟಿಯಿಂದ 5.33 ಕೋಟಿ ರೂಪಾಯಿ.
- ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್: 4 ಲಕ್ಷ ಅಮೆರಿಕನ್ ಡಾಲರ್, ಅಂದರೆ ಸುಮಾರು 3.52 ಕೋಟಿ ರೂಪಾಯಿ.
- ಆಸ್ಟ್ರೇಲಿಯದ ಪ್ರಧಾನಿ ಆಂಥನಿ ಅಲ್ಬನೀಸ್: 3.90 ಲಕ್ಷ ಅಮೆರಿಕನ್ ಡಾಲರ್, ಅಂದರೆ ಸುಮಾರು 3.43 ಕೋಟಿ ರೂಪಾಯಿ.
- ಜರ್ಮನಿಯ ಚಾನ್ಸಲರ್ ಓಲಾಫ್ ಷೋಲ್ಜ್: 3.70 ಲಕ್ಷ ಅಮೆರಿಕನ್ ಡಾಲರ್, ಅಂದರೆ ಸುಮಾರು 3.26 ಕೋಟಿ ರೂಪಾಯಿ.
- ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್: 2.05 ಲಕ್ಷದಿಂದ 2.30 ಲಕ್ಷ ಅಮೆರಿಕನ್ ಡಾಲರ್, ಅಂದರೆ ಸುಮಾರು 1.80 ಕೋಟಿಯಿಂದ 2.02 ಕೋಟಿ ರೂಪಾಯಿ.
ಈ ವರದಿಯ ಪ್ರಕಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಸುಮಾರು 23,000 ಅಮೆರಿಕನ್ ಡಾಲರ್, ಅಂದರೆ ಸುಮಾರು 20.24 ಲಕ್ಷ ರೂಪಾಯಿ ವಾರ್ಷಿಕವಾಗಿ ಸಂಬಳ ಪಡೆಯುತ್ತಾರೆ. ಅದರೆ ಅವರು ಪ್ರತಿ ತಿಂಗಳಿಗೆ ಸುಮಾರು 1.69 ಲಕ್ಷ ರೂಪಾಯಿ ಸಂಬಳ ಪಡೆಯುತ್ತಾರೆ. ಜೊತೆಗೆ ಇತರೇ ಸರ್ಕಾರಿ ಸೌಲಭ್ಯಗಳು, ಭತ್ಯೆಗಳು ಇರುತ್ತವೆ ಎಂದು ವರದಿ ಹೇಳುತ್ತದೆ.
ಭಾರತದ ಪ್ರಧಾನಿ ವಾರ್ಷಿಕ ವೇತನ 20.24 ಲಕ್ಷ ರೂಪಾಯಿ ಎಂದು ವರದಿ ಹೇಳುತ್ತದೆ. ಭಾರತದಲ್ಲಿ ಪ್ರಧಾನಿಯ ಅಧಿಕೃತ ಪ್ಯಾಕೇಜ್‌ನಲ್ಲಿ ಮೂಲ ವೇತನ, ಸಂಸದೀಯ ಕ್ಷೇತ್ರ ಭತ್ಯೆ, ಸತ್ಕಾರ ಭತ್ಯೆ ಮತ್ತು ದೈನಂದಿನ ಭತ್ಯೆ ಸೇರುತ್ತವೆ. ಹಲವು ಲೆಕ್ಕಗಳ ಪ್ರಕಾರ ಒಟ್ಟು ಮಾಸಿಕ ಅಧಿಕೃತ ಮೊತ್ತ ಸುಮಾರು 1.60 ಲಕ್ಷದಿಂದ 1.66 ಲಕ್ಷ ರೂಪಾಯಿ ವ್ಯಾಪ್ತಿಯಲ್ಲಿರುತ್ತದೆ. ವಾರ್ಷಿಕವಾಗಿ ಇದು ಸುಮಾರು 19 ಲಕ್ಷದಿಂದ 20 ಲಕ್ಷ ರೂಪಾಯಿ. ಇದರ ಜೊತೆಗೆ ಅಧಿಕೃತ ನಿವಾಸ, ಪ್ರಯಾಣ, ಭದ್ರತೆ ಮತ್ತು ಕಚೇರಿ ಸೌಲಭ್ಯಗಳು ಪ್ರತ್ಯೇಕವಾಗಿ ಸರ್ಕಾರದಿಂದ ಒದಗುತ್ತವೆ.
ಇನ್ನು ಅಮೆರಿಕದ ಅಧ್ಯಕ್ಷರಿಗೆ ವೈಟ್ ಹೌಸ್, ಏರ್ ಫೋರ್ಸ್ ವನ್, ಭದ್ರತೆ ಮತ್ತು ವೈದ್ಯಕೀಯ ಸೌಲಭ್ಯಗಳಿವೆ. ಭಾರತದ ಪ್ರಧಾನಿಗೂ 7 ಲೋಕ ಕಲ್ಯಾಣ ಮಾರ್ಗದ ಅಧಿಕೃತ ನಿವಾಸ, ವಿಶೇಷ ವಿಮಾನ, ಭದ್ರತೆ ಮತ್ತು ಕಚೇರಿ ವ್ಯವಸ್ಥೆ ಇವೆ. ಸಿಂಗಾಪುರದಲ್ಲಿ ವೇತನವೇ ತುಂಬಾ ಹೆಚ್ಚು ಇರುವುದರಿಂದ ಅಲ್ಲಿನ ಹೋಲಿಕೆ ನಗದು ಮೊತ್ತದಲ್ಲಿ ದೊಡ್ಡದಾಗಿ ಕಾಣುತ್ತದೆ.














