Upendra Limaye: ಕನ್ನಡಕ್ಕೆ ಬಂದ ಉಪೇಂದ್ರ! ಇವ್ರು ‘ಇವರಲ್ಲ’, ‘ಅನಿಮಲ್’ ಸಿನಿಮಾ ನಟ! | | ACTPnews

ಕನ್ನಡಕ್ಕೆ ಬರ್ತಿದ್ದಾರೆ ಅನಿಮಲ್ ಚಿತ್ರದ ನಟ!(ಚಿತ್ರ ಕೃಪೆ: ಸಿನಿಮಾ ಟೀಮ್)


Last Updated:

ಬಾಲಿವುಡ್‌ನ ಅನಿಮಲ್ ಚಿತ್ರ ನಟ ಉಪೇಂದ್ರ ಲಿಮಾಯೆ ಕನ್ನಡಕ್ಕೆ ಬರ್ತಿದ್ದಾರೆ. ರಾಮ್ ಗೋಪಾಲ್ ವರ್ಮಾ ಶಿಷ್ಯ ಈ ಚಿತ್ರವನ್ನ ಡೈರೆಕ್ಷ್ ಮಾಡುತ್ತಿದ್ದಾರೆ. ಕನ್ನಡದ ಕವಲುದಾರಿ ಚಿತ್ರದ ನಾಯಕ ಈ ಚಿತ್ರದ ಹೀರೋ ಆಗಿದ್ದಾರೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ…

 ಕನ್ನಡಕ್ಕೆ ಬರ್ತಿದ್ದಾರೆ ಅನಿಮಲ್ ಚಿತ್ರದ ನಟ!(ಚಿತ್ರ ಕೃಪೆ: ಸಿನಿಮಾ ಟೀಮ್)
ಕನ್ನಡಕ್ಕೆ ಬರ್ತಿದ್ದಾರೆ ಅನಿಮಲ್ ಚಿತ್ರದ ನಟ!(ಚಿತ್ರ ಕೃಪೆ: ಸಿನಿಮಾ ಟೀಮ್)

ಮರಾಠಿ ಆ್ಯಕ್ಟರ್ (Marathi Actor) ಉಪೇಂದ್ರ ಲಿಮಾಯೆ (Upendra Limaye) ಕನ್ನಡಕ್ಕೆ ಬರ್ತಿದ್ದಾರೆ. ಈ ಚಿತ್ರದ ಡೈರೆಕ್ಟರ್ ಕೂಡ ಸ್ಪೆಷಲ್ ಆಗಿದ್ದಾರೆ. ನಾಯಕ ಕೂಡ ಕನ್ನಡದಲ್ಲಿ ಒಳ್ಳೆ ಹೆಸರು ಮಾಡಿದ್ದಾರೆ. ಈ ಚಿತ್ರದ ಕಲಾವಿದರ ಆಯ್ಕೆ ನಡೀತಿದೆ. ಅಷ್ಟರಲ್ಲಿಯೇ ಉಪೇಂದ್ರ ಲಿಮಾಯೆ (Upendra Limaye) ಅವರ ಆಗಮನದ ಸುದ್ದಿ ಹೊರ ಬಂದಿದೆ. ಚಿತ್ರ ತಂಡವೇ ಇದನ್ನ ಅಧಿಕೃತವಾಗಿ ಕೊಟ್ಟಿದೆ. ಈ ಸಿನಿಮಾದ ಡೈರೆಕ್ಟರ್ (Movie Director) ಯಾರು ಅನ್ನೋದು ಕೂಡ ರಿವೀಲ್ ಆಗಿದೆ. ಸಿನಿಮಾದ ಇತರ ಕೆಲವು ವಿಚಾರಗಳು ಹೊರ ಬಂದಿವೆ. ಅದರ ವಿವರ ಇಲ್ಲಿದೆ ಓದಿ.

ಉಪೇಂದ್ರ ಲಿಮಾಯೆ…

ಉಪೇಂದ್ರ ಲಿಮಾಯೆ ಕನ್ನಡಕ್ಕೆ ಕಾಲಿಡುತ್ತಿದ್ದಾರೆ. ಮರಾಠಿ ಇಂಡಸ್ಟ್ರಿಯಲ್ಲಿ ಒಳ್ಳೆ ಹೆಸರು ಮಾಡಿರೋ ಉಪೇಂದ್ರ ಲಿಮಾಯೆ ಫಸ್ಟ್ ಟೈಮ್ ಕನ್ನಡ ಸಿನಿಮಾ ಮಾಡ್ತಿದ್ದಾರೆ.
Marathi Actor Upendra Limaye Kannada movie Latest Updates

ಉಪೇಂದ್ರ ಲಿಮಾಯೆ…

(ಚಿತ್ರ ಕೃಪೆ: ಸಿನಿಮಾ ಟೀಮ್)

ಈ ಚಿತ್ರದಲ್ಲಿ ಇವರು ಪ್ರಮುಖ ರೋಲ್ ಮಾಡಿದ್ದಾರೆ. ಫಸ್ಟ್ ಟೈಮ್ ಕನ್ನಡ ಚಿತ್ರ ಮಾಡ್ತಿರೋ ಸುದ್ದಿ ಹೆಚ್ಚು ಗಮನ ಸೆಳೆಯುತ್ತಿದೆ. ಬಾಲಿವುಡ್‌ನ ಅನಿಮಲ್ ಚಿತ್ರದಲ್ಲಿ ಉಪೇಂದ್ರ ಲಿಮಾಯೆ ಅಭಿನಯಿಸಿದ್ದಾರೆ.

ರಿಷಿ ಚಿತ್ರ ನಾಯಕ

ಈ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ. ಆದರೆ, ಚಿತ್ರದ ನಾಯಕ ಫಿಕ್ಸ್ ಆಗಿದ್ದಾರೆ. ಕವಲುದಾರಿ ಚಿತ್ರದ ನಾಯಕ ನಟ ರಿಷಿ ಈ ಸಿನಿಮಾದ ಲೀಡ್ ರೋಲ್ ಮಾಡಿದ್ದಾರೆ.

ತಾರಾಗಣದ ಆಯ್ಕೆ ಜೋರು

ಈ ಚಿತ್ರದ ತಾರೆಯರ ಆಯ್ಕೆ ಜೋರಾಗಿಯೇ ನಡೆದಿದೆ. ಚಿತ್ರಕ್ಕೆ ಅನಂತ ಭಾರದ್ವಾಜ್ ಛಾಯಾಗ್ರಹಣ ಮಾಡುತ್ತಿದ್ದಾರೆ. ಸ್ಕಂದ ಕಶ್ಯಪ್ ಸಂಗೀತ ನಿರ್ದೇಶನ ಮಾಡಿದ್ದಾರೆ.

ಈ ಚಿತ್ರದ ಶೂಟಿಂಗ್ ಟೈಮ್ ಕೂಡ ಫಿಕ್ಸ್ ಆಗಿದೆ. ಈ ನವೆಂಬರ್ ತಿಂಗಳಿನಿಂದಲೇ ಚಿತ್ರೀಕರಣ ಶುರು ಆಗುತ್ತಿದೆ. ಮುಂದಿನ ದಿನಗಳಲ್ಲಿ ಈ ಚಿತ್ರದ ಇತರ ಮಾಹಿತಿ ಹೊರ ಬೀಳಲಿದೆ.

Marathi Actor Upendra Limaye Kannada movie Latest Updates

ರಿಷಿ ಚಿತ್ರದ ನಾಯಕ

(ಚಿತ್ರ ಕೃಪೆ: ಸಿನಿಮಾ ಟೀಮ್)

ಉಪೇಂದ್ರ ಲಿಮಾಯೆ ಸುದ್ದಿ

ಈ ಚಿತ್ರಕ್ಕೆ ಸಂಬಂಧಿಸಿದ ಉಪೇಂದ್ರ ಲಿಮಾಯೆ ಕನ್ನಡಕ್ಕೆ ಬರ್ತಿರೋದೇ ಜಾಸ್ತಿ ಸದ್ದು ಮಾಡುತ್ತಿದೆ. ಮರಾಠಿ ಮತ್ತು ಹಿಂದಿ ಚಿತ್ರರಂಗದಲ್ಲಿ ಉಪೇಂದ್ರ ಲಿಮಾಯೆ ಒಳ್ಳೆ ಹೆಸರು ಮಾಡಿದ್ದಾರೆ.

ಸದ್ಯ ಸಿನಿಮಾದ ಕಲಾವಿದರ ಆಯ್ಕೆ ನಡೆದಿದೆ ಅನ್ನುವ ಮಾಹಿತಿಯನ್ನು ಕೊಟ್ಟಿದೆ. ನಾಯಕ ನಟ ರಿಷಿ ಚಿತ್ರ ಜೀವನದ ಮತ್ತೊಂದು ವಿಶೇಷ ಚಿತ್ರ ಕೂಡ ಇದಾಗಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed