IND vs AFG: ಅಭಿಷೇಕ್ ಸಿಡಿಲಬ್ಬರದ ಶತಕ, ಬೌಲರ್ಸ್ ಸಂಘಟಿತ ದಾಳಿಗೆ ಅಫ್ಘಾನ್ ಧೂಳೀಪಟ! ಭಾರತಕ್ಕೆ 127 ರನ್​ಗಳ ಜಯ, 3-0ಯಲ್ಲಿ ಸರಣಿ ವೈಟ್​ವಾಷ್ | ಕ್ರೀಡಾ ಸುದ್ದಿ | ACTPnews

ಭಾರತ ತಂಡ (PTI)


Last Updated:

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಭಾರತ ತಂಡ 127 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯನ್ನ 3-0ಯಲ್ಲಿ ವೈಟ್​ವಾಷ್​ ಸಾಧಿಸಿದೆ.

 ಭಾರತ ತಂಡ (PTI)
ಭಾರತ ತಂಡ (PTI)

ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಭಾರತ ತಂಡ 127 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯನ್ನ 3-0ಯಲ್ಲಿ ವೈಟ್​ವಾಷ್​ ಸಾಧಿಸಿದೆ. ಕೊನೆಯ ಪಂದ್ಯದಲ್ಲಿ ಭಾರತ ನೀಡಿದ್ದ 222 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡವನ್ನು ಭಾರತೀಯ ಬೌಲರ್‌ಗಳು ಕೇವಲ 94 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 127 ರನ್‌ಗಳ ಅಂತರದ ಗೆಲುವು ಸಾಧಿಸಿದೆ. ಅಫ್ಘಾನಿಸ್ತಾನದ ಪರ ನಾಯಕ ಇಬ್ರಾಹಿಂ ಜದ್ರಾನ್ 25 ರನ್ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು.

ಭಾರತ ನೀಡಿದ ಬೆಟ್ಟದಂತ ಗುರಿಯನ್ನ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ ಮೊದಲ ಓವರ್​ನಲ್ಲಿ 15 ರನ್​ಗಳಿಸಿ ಚೇಸಿಂಗ್ ವೇಳೆ ಸ್ಪರ್ಧೆ ನೀಡುವ ಮುನ್ಸೂಚನೆ ನೀಡಿತು. ಆದರೆ ಆ ಆರ್ಭಟ ಕೇವಲ 3 ಓವರ್​ಗೆ ಸೀಮಿತವಾಯಿತು. 4ನೇ ಓವರ್​ನಲ್ಲಿ ಅಕ್ಷರ್ ಪಟೇಲ್ 15 ರನ್​ಗಳಿಸಿದ್ದ ರಹ್ಮಾನುಲ್ಲಾ ಗುರ್ಬಾಜ್ ವಿಕೆಟ್ ಪಡೆಯುವ ಮೂಲಕ ಅಫ್ಘಾನ್ ತಂಡದ ಅಧಃಪತನಕ್ಕೆ ನಾಂದಿ ಆಡಿದರು. ಅದೇ ಓವರ್ನ 6ನೇ ಎಸೆತದಲ್ಲಿ 1 ರನ್​ಗಳಿಸಿದ್ದ ಸೆದಿಕುಲ್ಲಾ ಅಟಲ್​ರನ್ನ ಕೂಡ ಹೊರ ಹಾಕಿದರು.

5ನೇ ಓವರ್​ನಲ್ಲಿ ದರ್ವೀಸ್ ರಸೂಲಿ(0)ಯನ್ನ ಬುಮ್ರಾ ಡಕ್ ಔಟ್ ಮಾಡಿದರೆ, 6ನೇ ಓವರ್​​ನಲ್ಲಿ ಇಬ್ರಾಹಿಂ ಜದ್ರಾನ್​ರನ್ನ (25) ಯಶ್ ಠಾಕೂರ್​ಗೆ ವಿಕೆಟ್ ಒಪ್ಪಿಸಿದರು. ಜದ್ರಾನ್ ವಿಕೆಟ್ ಬೀಳುತ್ತಿದ್ದಂತೆ, ಬಂದವರೆಲ್ಲಾ ಭಾರತೀಯರ ಬೌಲಿಂಗ್ ದಾಳಿಯ ಮುಂದೆ ಹೆಚ್ಚು ಸಮಯ ಕ್ರೀಸ್​ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ನೂರ್ ಉಲ್ ರಹ್ಮಾನ್ (11), ಮೊಹ್ಮಮದ್ ನಬಿ (8), ಅಜ್ಮತ್ತುಲ್ಲಾ ಒಮರ್ಜಾಯ್ (17), ಮುಜೀನ್ ಉರ್ ರೆಹ್ಮಾನ್ (0), ರಶೀದ್ ಖಾನ್ (6) ಹಾಗೂ ಅಬ್ದುಲ್ಲಾ ಅಹ್ಮದ್ಜಾಯ್ (6) ವಿಕೆಟ್ ಕಳೆದುಕೊಂಡರು.

ಭಾರತದ ಪರ ಮಿಂಚಿದ ರವಿ ಬಿಷ್ಣೋಯ್ 26ಕ್ಕೆ3, ಅಕ್ಷರ್ ಪಟೇಲ್ 9ಕ್ಕೆ2, ನಿತೀಶ್ ಕುಮಾರ್ ರೆಡ್ಡಿ 25ಕ್ಕೆ3, ಜಸ್ಪ್ರೀತ್ ಬುಮ್ರಾ 16ಕ್ಕೆ1 ಹಾಗೂ ಯಶ್ ಠಾಕೂರ್ 17ಕ್ಕೆ1 ವಿಕೆಟ್ ಪಡೆದು ಗೆಲುವಿನ ಗಡಿ ದಾಟಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed