Nana Patekar: ನಾನಾ ಪಾಟೇಕರ್ ನಿಧನದ ಬೆನ್ನಲ್ಲೇ ಖ್ಯಾತ ನಟಿ ವಿಚಿತ್ರ ಪೋಸ್ಟ್! ತನುಶ್ರೀ ದತ್ತಾ ಹೇಳಿದ್ದೇನು ಗೊತ್ತಾ? | | ACTPnews

News18

[ad_1]

Last Updated:

2018ರಲ್ಲಿ ನಟ ನಾನಾ ಪಾಟೇಕರ್ (Nana Patekar) ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ (Actress Tanushree Dutta), ಇದೀಗ ನಟನ ನಿಧನದ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ.

News18
News18

2018ರಲ್ಲಿ ನಟ ನಾನಾ ಪಾಟೇಕರ್ (Nana Patekar) ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ (Actress Tanushree Dutta), ಇದೀಗ ನಟನ ನಿಧನದ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ. ವಿಮಾನ ನಿಲ್ದಾಣದಿಂದ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ವಿಡಿಯೊ ಹಂಚಿಕೊಂಡಿರುವ ತನುಶ್ರೀ, ತಾವು ಇನ್ನೂ ಈ ಸುದ್ದಿಯನ್ನು ಅರಗಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ಇದೇ ವೇಳೆ ನಾನಾ ಪಾಟೇಕರ್ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ನಾನಾ ನಿಧನದ ಬಗ್ಗೆ ಮಾತನಾಡಿದ ತನುಶ್ರೀ ದತ್ತಾ, ನಟನ ಹೆಸರನ್ನು ನೇರವಾಗಿ ಉಲ್ಲೇಖಿಸದೆ ತಮ್ಮ ಪ್ರತಿಕ್ರಿಯೆ ದಾಖಲಿಸಿದ್ದಾರೆ. ಸದ್ಯ ಲಖನೌಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳುತ್ತಿರುವುದಾಗಿ ಹೇಳಿದ ಅವರು, ತಮ್ಮ ವೃತ್ತಿಪರ ಕೆಲಸದ ಮೇಲೆ ಗಮನ ಹರಿಸಲು ಬಯಸುವುದಾಗಿ ತಿಳಿಸಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ವಿಡಿಯೊದಲ್ಲಿ ತನುಶ್ರೀ, ನಾನು ಸುದ್ದಿ ಕೇಳಿದ್ದೇನೆ. ನನಗೆ ಗೊತ್ತಾಗಿದೆ. ಆದರೆ ಇಂದು ನನ್ನ ಕೆಲಸದ ದಿನ. ನಾನು ಕಾರ್ಯಕ್ರಮವೊಂದಕ್ಕಾಗಿ ಲಖನೌಗೆ ತೆರಳುತ್ತಿದ್ದೇನೆ. ಅದರತ್ತ ಗಮನ ಹರಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ತಮ್ಮ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಲೈವ್‌ಗಳು ಹಾಗೂ ಹಲವು ವಿಷಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲು ಯೋಜಿಸಿದ್ದಾಗಿ ತನುಶ್ರೀ ಹೇಳಿದ್ದಾರೆ. ಆದರೆ ಇದೀಗ ಮಾಧ್ಯಮಗಳ ಗಮನವೆಲ್ಲ ನಾನಾ ಪಾಟೇಕರ್ ನಿಧನದ ಸುದ್ದಿಯತ್ತ ಹರಿಯುವ ಸಾಧ್ಯತೆ ಇದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.

ಹಾಗಾಗಿ ನಾನು ಯಾವ ರೀತಿಯ ಪ್ರತಿಕ್ರಿಯೆ ನೀಡಬೇಕು ಎಂಬುದನ್ನು ತಿಳಿದುಕೊಂಡ ಬಳಿಕ ಪ್ರತಿಕ್ರಿಯಿಸುತ್ತೇನೆ. ಪ್ರಸ್ತುತ ಅವರ ಕುಟುಂಬಕ್ಕೆ ನನ್ನ ಸಂತಾಪಗಳು ಎಂದು ಹೇಳಿದ್ದಾರೆ.

ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಮಾಡಿದ್ದ ಆರೋಪಗಳು 2018ರಲ್ಲಿ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದವು. ‘ಹಾರ್ನ್ ಓಕೆ ಪ್ಲೀಸ್’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ನಾನಾ ಪಾಟೇಕರ್ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದರು ಎಂದು ತನುಶ್ರೀ ಆರೋಪಿಸಿದ್ದರು. ಈ ಘಟನೆ 2008ರಲ್ಲಿ ಚಿತ್ರದ ಚಿತ್ರೀಕರಣದ ವೇಳೆ ನಡೆದಿತ್ತು ಎಂದು ಅವರು ಹೇಳಿದ್ದರು. ಚಿತ್ರ 2009ರಲ್ಲಿ ಬಿಡುಗಡೆಯಾಗಿತ್ತು.

ತಮ್ಮ ವಿರುದ್ಧದ ಆರೋಪಗಳನ್ನು ನಾನಾ ಪಾಟೇಕರ್ ನಿರಾಕರಿಸಿದ್ದರು. ಈ ವಿವಾದ ಭಾರತದಲ್ಲಿ #MeToo ಅಭಿಯಾನ ವೇಗ ಪಡೆದುಕೊಳ್ಳಲು ಕಾರಣವಾದ ಪ್ರಮುಖ ಬೆಳವಣಿಗೆಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 2025ರಲ್ಲಿ ಮುಂಬೈನ ಅಂಧೇರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯವೂ ಮಹತ್ವದ ಆದೇಶ ನೀಡಿತ್ತು. ಕಾನೂನಿನಲ್ಲಿ ನಿಗದಿಪಡಿಸಿರುವ ಮಿತಿಯ ಅವಧಿ ಮೀರಿದ ಬಳಿಕ ದೂರು ದಾಖಲಿಸಲಾಗಿದೆ ಎಂಬ ಕಾರಣವನ್ನು ಉಲ್ಲೇಖಿಸಿ ನಾನಾ ಪಾಟೇಕರ್ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ವಜಾಗೊಳಿಸಲಾಗಿತ್ತು.

[ad_2]

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed